ಕನ್ನಡ ನೆಲ ಜಲ ಭಾಷೆಗೆ ಶಿವಬಸವ ಸ್ವಾಮಿಗಳ ಕೊಡುಗೆ ಅಪಾರ.

ಕನ್ನಡಪ್ರಭ ವಾರ್ತೆ ಗದಗ

ಸ್ವತಂತ್ರ ಪೂರ್ವ ಮತ್ತು ಸ್ವಾತಂತ್ರ‍್ಯ ನಂತರದಲ್ಲಿ ಅಪೂರ್ವವಾದ ನಾಡ ಸೇವೆ, ಭಾಷಾ ಸೇವೆ ಮಾಡಿದವರು ಲಿಂ.ಡಾ. ಶಿವಬಸವ ಸ್ವಾಮಿಗಳು. ಕನ್ನಡ ನೆಲ ಜಲ ಭಾಷೆಗೆ ಶಿವಬಸವ ಸ್ವಾಮಿಗಳ ಕೊಡುಗೆ ಅಪಾರ ಎಂದು ಶ್ರೀಶಾಂತಲಿಂಗ ಸ್ವಾಮಿಗಳು ತಿಳಿಸಿದರು.

ನಗರದ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದ 2815ನೇ ಶಿವಾನುಭವದ ಸಮ್ಮುಖ ವಹಿಸಿ ಮಾತನಾಡಿದ ಅವರು, ಶಿವ ಬಸವ ಸ್ವಾಮಿಗಳು ಬೆಳಗಾವಿಗೆ ಫಜಲ್ ಅಲಿ ಆಯೋಗ ಬಂದಾಗ ಬೆಳಗಾವಿ ಕನ್ನಡಿಗರದ್ದು ಎಂದು ಪ್ರತಿಪಾದನೆ ಮಾಡಿ ಕರ್ನಾಟಕದಲ್ಲಿ ಬೆಳಗಾವಿ ಉಳಿಯುವಂತೆ ಮಾಡಿದ ಮಹನೀಯರು.

ಕನ್ನಡಿಗರು ನೆಮ್ಮದಿಯಿಂದ ಅಲ್ಲಿ ವಾಸ ಮಾಡುವಂತೆ ಮಾಡಿದ ಹಿರಿಮೆ ನಾಗನೂರು ಶ್ರೀ ರುದ್ರಾಕ್ಷಿಮಠಕ್ಕೆ ಸಲ್ಲುತ್ತದೆ ಎಂದರು.

1924ರಲ್ಲಿ ಬೆಳಗಾವಿಗೆ ಮಹಾತ್ಮ ಗಾಂಧೀಜಿ ಬಂದಾಗ ಹರಡೇಕರ ಮಂಜಪ್ಪರಾದಿಯಾಗಿ ಅನೇಕರ ಒಡಗೂಡಿ ಕನ್ನಡ ನಾಡು ನುಡಿಯ ಸೇವೆಗಾಗಿ ಡಾ. ಶಿವಬಸವ ಸ್ವಾಮಿಗಳು ಹೋರಾಟ ಸ್ಮರಣೀಯ. ಬೆಳಗಾವಿ ಪರಿಸರದಲ್ಲಿ ಅನ್ನ, ಅಕ್ಷರ, ಅರಿವು ತ್ರಿವಿಧ ದಾಸೋಹ ಕೈಗೊಂಡು ಬೆಳಗಾವಿಯ ಪರಿಸರದ್ಯಾಂತ ಕನ್ನಡ ಪರಿಸರ ಕಟ್ಟುವಲ್ಲಿ ಶಿವಬಸವ ಸ್ವಾಮಿಗಳ ಕೊಡುಗೆ ಅಪೂರ್ವದುವಾದದ್ದು ಎಂದರು.

ಡಾ. ಬಸವರಾಜ ಪಾಟೀಲ, ಕೃಷಿ ಎಂಜಿನಿಯರಿಂಗ್ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ರೈತರ ಸಬಲೀಕರಣ ವಿಷಯದ ಕುರಿತು ಉಪನ್ಯಾಸ ನೀಡಿದರು.

ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯ ನಿಮಿತ್ತ ಜ.ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಡಾ. ಕಾರ್ತಿಕ ಅಜ್ಜಂಪುರಶೆಟ್ರ, ನಾಗರಾಜ ಚಾಕಲಬ್ಬಿ, ಜಗದೀಶ ಶಿವನಗುತ್ತಿ, ಲೋಹಿತ ಜವಳಿ, ಮುಕ್ತ ಪಾಟೀಲ, ಪ್ರೇಮ ಯೆಳ್ಳೂರು ಅವರನ್ನು ಪೂಜ್ಯರು ಸನ್ಮಾನಿಸಿದರು.

ವಚನ ಸಂಗೀತವನ್ನು ಮೃತ್ಯುಂಜಯ ಹಿರೇಮಠ ಮತ್ತು ಗುರುನಾಥ ಸುತಾರ ನೆರವೇರಿಸಿದರು. ಧರ್ಮಗ್ರಂಥ ಪಠಣ ಸೃಷ್ಟಿ ಹಬೀಬ, ವಚನ ಚಿಂತನ ಚಂದನಾ ದಂಡಿನ ನೆರವೇರಿಸಿದರು. ದಾಸೋಹ ಸೇವೆಯನ್ನು ಶಾಂತಾದೇವಿ ಕೊನ್ನಾವರ ಮತ್ತು ಮಕ್ಕಳು, ಡಾ. ಮುರುಗೆಪ್ಪ ಎಂ.ಅವಟಿ ನೆರವೇರಿಸಿದರು.

ಈ ವೇಳೆ ಪ್ರಭು ಗಂಜಿಹಾಳ, ಸುರೇಖಾ ಪಿಳ್ಳಿ, ಸಿದ್ಧರಾಮ ಪಟ್ಟೇದ, ಪ್ರತಿಭಾ ಬಡ್ನಿ, ವೀರಣ್ಣ ಗೋಟಡಕಿ, ಕೆ.ಎಸ್. ಕೋರಿಮಠ, ಸೋಮಶೇಖರ ಪುರಾಣಿಮಠ, ಆದೇಶ ಅಂಗಡಿ ಸೇರಿ ಶ್ರೀಮಠದ ಸದ್ಭಕ್ತರು ಇದ್ದರು. ಡಾ. ಉಮೇಶ ಪುರದ ಸ್ವಾಗತಿಸಿದರು. ಡಾ. ರಮೇಶ ಕಲ್ಲನಗೌಡರ ನಿರೂಪಿಸಿದರು.