ಸಾರಾಂಶ
ಶಿವಮೊಗ್ಗ: ಪರಕೀಯರ ದಾಳಿಯನ್ನು ಹಿಮ್ಮೆಟ್ಟಿಸಿ ರಾಷ್ಟ್ರ ಕಟ್ಟಿದ ಛತ್ರಪತಿ ಶಿವಾಜಿ ಮಹಾರಾಜರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲರೂ ಸೇರಿ ಜಯಂತಿ ಆಚರಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು.
ಶಿವಮೊಗ್ಗ: ಪರಕೀಯರ ದಾಳಿಯನ್ನು ಹಿಮ್ಮೆಟ್ಟಿಸಿ ರಾಷ್ಟ್ರ ಕಟ್ಟಿದ ಛತ್ರಪತಿ ಶಿವಾಜಿ ಮಹಾರಾಜರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದೇ ಎಲ್ಲರೂ ಸೇರಿ ಜಯಂತಿ ಆಚರಿಸಬೇಕು ಎಂದು ಸಂಸದ ಬಿ.ವೈ.ರಾಘವೇಂದ್ರ ಕರೆ ನೀಡಿದರು.ನಗರದ ಕುವೆಂಪು ರಂಗಮಂದಿರದಲ್ಲಿ ಬುಧವಾರ ಜಿಲ್ಲಾಡಳಿತ, ಜಿ.ಪಂ, ಮಹಾನಗರಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಛತ್ರಪತಿ ಶ್ರೀ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಕೀಯ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಿ, ದೇಶದಲ್ಲಿ ಹಿಂದೂ ಸಾಮ್ರಾಜ್ಯ ಸ್ಥಾಪಿಸಲು ಹೋರಾಡಿದ ದಾರ್ಶನಿಕರು ಶಿವಾಜಿ ಮಹಾರಾಜರು. ತಾಯಿ ಜೀಜಾಬಾಯಿ ಅವರು ಶೌರ್ಯದಿಂದ ಮಗನನ್ನು ಬೆಳೆಸಿದ ಪ್ರತಿಫಲವಾಗಿ ಅವರು ಹಿಂದೂ ರಾಷ್ಟ್ರ ಕಟ್ಟುವಲ್ಲಿ ಸಫಲರಾದರು ಎಂದರು.ಶಿವಮೊಗ್ಗಕ್ಕೂ ಶಿವಾಜಿಯವರ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇದೆ. ಶಿವಾಜಿಯವರ ಮಕ್ಕಳು ಮೊಘಲರಿಂದ ತಪ್ಪಿಸುಕೊಳ್ಳುವಾಗ ಕೆಳದಿ ರಾಣಿ ಚೆನ್ನಮ್ಮ ಅವರನ್ನು ರಕ್ಷಿಸುವಲ್ಲಿ ಸಹಾಯ ಮಾಡಿದ್ದರು ಎಂದು ಸ್ಮರಿಸಿದರು.ಯುವ ವಾಗ್ಮಿ ಕುಮಾರಿ ಹಾರಿಕ ಮಂಜುನಾಥ್ ಉಪನ್ಯಾಸ ನೀಡಿ ಮಾತನಾಡಿ, ನಮ್ಮ ದೇಶದ ಗುಡಿ ಗೋಪುರಗಳನ್ನು ಉಳಿಸಿದ ಶಿವಾಜಿ ಮಹಾರಾಜರು ದೇವರ ಸಮಾನರು. ನಮ್ಮ ಸನಾತನ ಧರ್ಮವನ್ನು ನಾಶಗೊಳಿಸಲು ಪ್ರಯತ್ನಿಸಿದವರ ವಿರುದ್ಧ ನಿಂತು ರಾಷ್ಟ್ರ ರಕ್ಷಣೆಯಲ್ಲಿ ತೊಡಗಿದ್ದ ಶೌರ್ಯವಂತರು ಎಂದು ಹೇಳಿದರು.
ಧರ್ಮ ರಕ್ಷಣೆಗಾಗಿಯೇ ಎಂಬಂತೆ ಚಿಕ್ಕಂದಿನಿಂದಲೇ ಹೋರಾಟ ಮಾಡುತ್ತಾ ಬಂದ ಶಿವಾಜಿ ಮಹಾರಾಜರು, ಸಂಘಟಿತ ಬಲ ನೀಡಿ, ದೇಶ ರಕ್ಷಿಸಿದರು. ಸಂಘಟನಾ ತತ್ವದ ಕುರಿತು ಸಾರಿದರು. ಇದಕ್ಕೆಲ್ಲಾ ಕಾರಣ ತಾಯಿ ಜೀಜಾಬಾಯಿ. ಅವರು ವೀರತ್ವ ಮತ್ತು ಶೌರ್ಯದ ಕನಸನ್ನು ಕಟ್ಟಿಕೊಟ್ಟಿದ್ದರು. ಹಾಗೆಯೇ ಎಲ್ಲ ತಾಯಂದಿರು ತಮ್ಮ ಮಕ್ಕಳು ಉತ್ತಮ ಪ್ರಜೆಯಾಗಬೇಕೆಂಬುದನ್ನು ಕಲಿಸಬೇಕು ಎಂದು ಹೇಳಿದರು.ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರಭೂಪಾಲ್, ಎಎಸ್‌ಪಿ ಅನಿಲ್ ಕುಮಾರ್ ಭೂಮರಡ್ಡಿ, ಶಿವಮೊಗ್ಗದ ತಹಸೀಲ್ದಾರ ವಿ.ಎಸ್.ರಾಜೀವ್, ಸಮಾಜದ ಮುಖಂಡ ಆರ್.ಚಂದ್ರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ಸಮಾಜದ ಮುಖಂಡರು ಹಾಜರಿದ್ದರು.;Resize=(128,128))
;Resize=(128,128))