ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರಾಗಿ ಐಎಎಸ್ ಅಧಿಕಾರಿ ಶಿವಕುಮಾರ ಕೆ.ಬಿ. ಅವರನ್ನು ನೇಮಿಸಿ ಭಾರತ ಚುನಾವಣಾ ಆಯೋಗವು ಆದೇಶಿಸಿದೆ. ಚುನಾವಣಾ ವೀಕ್ಷಕರು ಕಲಬುರಗಿಯ ಹಳೇ ಐವಾನ್-ಎ-ಶಾಹಿ ಅತಿಥಿಗೃಹದ ಕೋಣೆ ಸಂಖ್ಯೆ 4ರಲ್ಲಿ ತಂಗಿದ್ದು, ಚುನಾವಣಾ ಸಂಬಂಧಿಸಿದ ಮಾದರಿ ನೀತಿ ಸಂಹಿತೆ ಮತ್ತು ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ವೀಕ್ಷಕರಿಗೆ ಸಾರ್ವಜನಿಕರು, ರಾಜಕೀಯ ಪಕ್ಷಗಳು ದೂರು ಸಲ್ಲಿಸಬಹುದಾಗಿದೆ.
ಕಲಬುರಗಿ: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ವೀಕ್ಷಕರಾಗಿ ಐಎಎಸ್ ಅಧಿಕಾರಿ ಶಿವಕುಮಾರ ಕೆ.ಬಿ. ಅವರನ್ನು ನೇಮಿಸಿ ಭಾರತ ಚುನಾವಣಾ ಆಯೋಗವು ಆದೇಶಿಸಿದೆ. ಚುನಾವಣಾ ವೀಕ್ಷಕರು ಕಲಬುರಗಿಯ ಹಳೇ ಐವಾನ್-ಎ-ಶಾಹಿ ಅತಿಥಿಗೃಹದ ಕೋಣೆ ಸಂಖ್ಯೆ 4ರಲ್ಲಿ ತಂಗಿದ್ದು, ಚುನಾವಣಾ ಸಂಬಂಧಿಸಿದ ಮಾದರಿ ನೀತಿ ಸಂಹಿತೆ ಮತ್ತು ಮಾರ್ಗಸೂಚಿ ಉಲ್ಲಂಘನೆಗೆ ಸಂಬಂಧಿಸಿದಂತೆ ವೀಕ್ಷಕರಿಗೆ ಸಾರ್ವಜನಿಕರು, ರಾಜಕೀಯ ಪಕ್ಷಗಳು ದೂರು ಸಲ್ಲಿಸಬಹುದಾಗಿದೆ. ದೂರು ಲಿಖಿತವಾಗಿ ಸಲ್ಲಿಸಬೇಕಿದಲ್ಲಿ ಶಿವಕುಮಾರ ಕೆ.ಬಿ., ಅತಿಥಿಗೃಹದ ವಿಳಾಸಕ್ಕೆ ಅಥವಾ ದೂರವಾಣಿ ಸಂಖ್ಯೆ 08472-200849 ಗೆ ಸಂಪರ್ಕಿಸಿ ಸಲ್ಲಿಸಬಹುದು ಎಂದು ಕ್ಷೇತ್ರದ ಚುನಾವಣಾಧಿಕಾರಿ, ಕಲಬುರಗಿ ವಿಭಾಗದ ಪ್ರಾದೇಶಿಕ ಅಯುಕ್ತೆ ಜಹೀರಾ ನಸೀಮ್ ತಿಳಿಸಿದ್ದಾರೆ. ಚುನಾವಣಾ ವೀಕ್ಷಕರ ಸಂಪರ್ಕ ಅಧಿಕಾರಿಯಾಗಿ ಕೆ.ಕೆ.ಆರ್.ಟಿ.ಸಿ ಕಲಬುರಗಿ ವಿಭಾಗ-1ರ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಜಿ.ಗಂಗಾಧರ (ಮೊಬೈಲ್ ಸಂಖ್ಯೆ: 7760992100) ಅವರನ್ನು ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
