ಸಮಾಜದ ಎಲ್ಲಾ ವರ್ಗಗಳಿಗೂ ವಿದ್ಯೆ, ಅನ್ನ ನೀಡಿ ಸೇವೆಯಲ್ಲಿ ಸಂದೇಶ ನೀಡಿದ ಮಹಾನ್ ಪುರುಷರಾದ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಪ್ರಖ್ಯಾತಿ ಪಡೆದಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ವರ್ಷದ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಶ್ರೀ ಸಿದ್ದಗಂಗಾ ಬಳಗದವರು ಮತ್ತು ಎಲ್ಲಾ ಸಮಾಜ ಬಾಂಧವರ ವತಿಯಿಂದ ಅಚರಿಸಲಾಯಿತು. ಕಾಯಕವೇ ಕೈಲಾಸ, ದಾಸೋಹವೇ ಮುಕ್ತಿಯ ದಾರಿ ಎಂಬ ಶರಣರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಇಂತಹ ಪುಣ್ಯಸ್ಮರಣೆಗಳು ಸಾರ್ಥಕವಾಗುತ್ತವೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ರಾಮನಾಥಪುರಸಮಾಜದ ಎಲ್ಲಾ ವರ್ಗಗಳಿಗೂ ವಿದ್ಯೆ, ಅನ್ನ ನೀಡಿ ಸೇವೆಯಲ್ಲಿ ಸಂದೇಶ ನೀಡಿದ ಮಹಾನ್ ಪುರುಷರಾದ ಪದ್ಮಭೂಷಣ, ಕರ್ನಾಟಕ ರತ್ನ, ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಪ್ರಖ್ಯಾತಿ ಪಡೆದಿರುವ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ 119ನೇ ವರ್ಷದ ಜನ್ಮ ದಿನೋತ್ಸವ ಕಾರ್ಯಕ್ರಮವನ್ನು ಶ್ರೀ ಸಿದ್ದಗಂಗಾ ಬಳಗದವರು ಮತ್ತು ಎಲ್ಲಾ ಸಮಾಜ ಬಾಂಧವರ ವತಿಯಿಂದ ಅಚರಿಸಲಾಯಿತು. ರಾಮನಾಥಪುರದ ಶ್ರೀ ನಂಜುಂಡೇಶ್ವರ ಜನರಲ್ ಸ್ಟೋರ್ ಮುಂಭಾಗದ ಮೈದಾನದಲ್ಲಿ ಶ್ರೀ ಸಿದ್ದಗಂಗಾ ಶ್ರೀಗಳವರ ಭಾವಚಿತ್ರ ಪ್ರತಿಷ್ಠಾಪಿಸಿ, ಪುಷ್ಪಾರ್ಚನೆ ಮಾಡಿದ ನಂತರ ವೀರಶೈವ ಸಮಾಜದ ಮುಖಂಡರಾದ ಕೋಟವಾಳು ಕೆ.ಎಸ್. ಮಹದೇವ್ ಅವರು ಮಾತನಾಡಿ, ಕಾಯಕವೇ ಕೈಲಾಸ, ದಾಸೋಹವೇ ಮುಕ್ತಿಯ ದಾರಿ ಎಂಬ ಶರಣರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಇಂತಹ ಪುಣ್ಯಸ್ಮರಣೆಗಳು ಸಾರ್ಥಕವಾಗುತ್ತವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ವಕ್ಕಲಿಗರ ಸಮಾಜದ ಮುಖಂಡರಾದ ಉಪ್ಪರಿಕೇಗೌಡರು, ಹೋನ್ನೇಗೌಡರು, ಕಾಳಬೋಯಿ, ಸಿದ್ದರಾಜು, ಪಶುಪತಿ ಸೋಮಶೇಖರ್‌, ಶಿರದನಹಳ್ಳಿ ಜಯಲಿಂಗಪ್ಪ, ಬಸವಪಟ್ಟಣ ಬಿ. ಆರ್‌. ಮಧುಕರ್‌, ವಿರೂಪಾಷ್, ಮಲ್ಲಾಪುರ ಪಂಚಾಕ್ಷರಿ, ಮಹೇಶ್, ಅಶ್ವತ್, ಎಂ.ಎನ್. ಕುಮಾರಸ್ವಾಮಿ, ರವಿ. ಪ್ರಕಾಶ್ ಹನ್ಯಾಳು ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಭಕ್ತರಿಗೆ ದಾಸೋಹದ ವ್ಯವಸ್ಥೆ ಮಾಡಿದ್ದರು.