ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಡಿಂಕಾ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಶಿವಲಿಂಗಪ್ಪ ಮತ್ತು ಡಿ.ಎಂ.ಶ್ರೀನಿವಾಸಯ್ಯ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಹಿಂದಿನ ಅಧ್ಯಕ್ಷ ಮಹೇಶ್, ಉಪಾಧ್ಯಕ್ಷೆ ಸೌಮ್ಯ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಗಳಿಗೆ ಬುಧವಾರ ಚುನಾವಣೆ ನಡೆದು ಶಿವಲಿಂಗಪ್ಪ, ಡಿ.ಎಂ.ಶ್ರೀನಿವಾಸಯ್ಯ ಅವರು ಹೊರತು ಪಡಿಸಿ ಬೇರೆ ಯಾವ ನಿರ್ದೇಶಕರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಯೂ ಆದ ಸಂಘದ ಕಾರ್ಯದರ್ಶಿ ಡಿ.ಎಂ.ಶಿವಪ್ಪ ಅವರು ಘೋಷಿಸಿದರು.

ಸಂಘದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಆಯ್ಕೆಯಾದ ಶಿವಲಿಂಗಪ್ಪ, ಡಿ.ಎಂ.ಶ್ರೀನಿವಾಸಯ್ಯ ಅವರನ್ನು ಎಲ್ಲಾ ನಿರ್ದೇಶಕರು ಅಭಿನಂದಿಸಿದರು, ಸಿಹಿಹಂಚಿ ಸಂಭ್ರಮಿಸಿದರು. ಮಾಜಿ ಅಧ್ಯಕ್ಷ ಜೆಸಿಬಿ ಗಿರೀಶ್ ಮಾತನಾಡಿ, ಸಂಘದ ಹಿಂದಿನ ಅಧ್ಯಕ್ಷರು, ಉಪಾಧ್ಯಕ್ಷರು ಒಡಂಬಡಿಕೆಯಂತೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ನಮ್ಮ ನಾಯಕರಾದ ಮಾಜಿ ಸಚಿವರಾದ ಸಿ.ಎಸ್. ಪುಟ್ಟರಾಜು ಮತ್ತು ಮನ್ಮುಲ್ ನಿರ್ದೇಶಕರಾದ ಸಿ.ಶಿವಕುಮಾರ್ ಅವರ ಸಲಹೆಯಂತೆ ಎಲ್ಲಾ ನಿರ್ದೇಶಕರು ಚರ್ಚಿಸಿ ಸಂಘದ ಅಧ್ಯಕ್ಷರಾಗಿ ಶಿವಲಿಂಗಪ್ಪ, ಉಪಾಧ್ಯಕ್ಷರಾಗಿ ಡಿ.ಎಂ.ಶ್ರೀನಿವಾಸಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ ಎಂದರು.

ಸಂಘವು ಹಾಲು ಉತ್ಪಾದನೆಯಲ್ಲಿ ಜಿಲ್ಲೆಗೆಯೇ ಎರಡನೇ ಸ್ಥಾನದಲ್ಲಿದ್ದು, ಮುಂದಿನ ದಿನಗಳಲ್ಲಿ ಎಲ್ಲರು ಜತೆಗೂಡಿ ಕೆಲಸ ಮಾಡುವ ಮೂಲಕ ಸಂಘದ ಅಭಿವೃದ್ದಿಗೆ ಸಹಕಾರ ನೀಡುತ್ತೇವೆ ಎಂದರು.


ಈ ವೇಳೆ ಸಂಘದ ಮಾಜಿ ಅಧ್ಯಕ್ಷರಾಗಿ ಡಿ.ಇ.ಕಲಿಗಣೇಶ್, ಜೆಸಿಬಿ ಗಿರೀಶ್, ಡಿ.ವಿ.ಶಿವಣ್ಣ, ಮಹೇಶ್, ನಿರ್ದೇಶಕರಾದ ಮಹದೇವಪ್ಪ, ಡಿ.ಎಂ.ಇಂದ್ರೇಶ್,ಪ್ರೇಮಮ್ಮ, ಸೌಮ್ಯ, ಕೃಷ್ಣಶೆಟ್ಟಿ, ಡಿ.ಎಂ.ಪುಟ್ಟೇಗೌಡ, ರಮಾದೇವಿ, ಕಾರ್‍ಯದರ್ಶಿ ಡಿ.ಎಂ.ಶಿವಪ್ಪ, ಮುಖಂಡರಾದ ಡಿ.ಇ.ಲೋಕೇಶ್, ಕಪ್ಪಡಿಗೌಡ, ಡಿ.ಸಿ.ರುದ್ರಣ್ಣ, ಡಿ.ಸಿ.ಚನ್ನಪ್ಪ, ಯ.ಪುಟ್ಟಪ್ಪ, ರಾಜಪ್ಪ, ಗ್ರಾಪಂ ಮಾಜಿ ಅಧ್ಯಕ್ಷರಾದ ನಂಜೇಗೌಡ, ಜಗದೀಶ್, ಮಾಜಿ ಸದಸ್ಯ ಮಹದೇವಪ್ಪ ಸೇರಿದಂತೆ ಗ್ರಾಮಸ್ಥರು, ಮುಖಂಡರು ಹಾಜರಿದ್ದರು.