ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದ ಶಿವರಾಮು

| Published : Dec 01 2024, 01:32 AM IST

ಸಾರಾಂಶ

ಕನ್ನಡ ಭಾಷೆ ಅಕ್ಷರ ಮಾತ್ರವಲ್ಲ, ಕನ್ನಡಿಗರ ನರನಾಡಿಗಳಲ್ಲಿ ಇರುವ ಭಾಷೆ ಕನ್ನಡ ಎಂದು ನಾಗಶ್ರೀ ಆಂಗ್ಲ ಮಾಧ್ಯಮ ಶಾಲೆಯ ಬಿ.ಎಸ್ ಶಿವರಾಮು ಹೇಳಿದರು. ಟೈಮ್ಸ್‌ ಪಿಯು ಕಾಲೇಜು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಸಂಪ್ರದಾಯಕ ದಿನ, ಪ್ರಯೋಗ ಶಾಲೆ ಹಾಗೂ, ಸವಿರುಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಂದಿವೆ. ಕನ್ನಡ ಭಾಷೆಯನ್ನು ಬೆಳೆಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗೆ ಸಿದ್ಧರಾಗಬೇಕು. ಪದವಿಪೂರ್ವ ಕಾಲೇಜು ಹಂತ ವಿದ್ಯಾರ್ಥಿಗಳ ಪಾಲಿಗೆ ಪ್ರಮುಖ ಘಟ್ಟವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಕನ್ನಡ ಭಾಷೆ ಅಕ್ಷರ ಮಾತ್ರವಲ್ಲ, ಕನ್ನಡಿಗರ ನರನಾಡಿಗಳಲ್ಲಿ ಇರುವ ಭಾಷೆ ಕನ್ನಡ ಎಂದು ನಾಗಶ್ರೀ ಆಂಗ್ಲ ಮಾಧ್ಯಮ ಶಾಲೆಯ ಬಿ.ಎಸ್ ಶಿವರಾಮು ಹೇಳಿದರು.

ಟೈಮ್ಸ್‌ ಪಿಯು ಕಾಲೇಜು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಸಂಪ್ರದಾಯಕ ದಿನ, ಪ್ರಯೋಗ ಶಾಲೆ ಹಾಗೂ, ಸವಿರುಚಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರೆತಿದೆ. ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಸಂದಿವೆ. ಕನ್ನಡ ಭಾಷೆಯನ್ನು ಬೆಳೆಸಬೇಕು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಗೆ ಸಿದ್ಧರಾಗಬೇಕು. ಪದವಿಪೂರ್ವ ಕಾಲೇಜು ಹಂತ ವಿದ್ಯಾರ್ಥಿಗಳ ಪಾಲಿಗೆ ಪ್ರಮುಖ ಘಟ್ಟವಾಗಿದೆ ಎಂದರು. ಟೈಮ್ಸ್ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಬಿ.ಕೆ. ಗಂಗಾಧರ್ ಮಾತನಾಡಿ, ಕನ್ನಡ ಭಾಷೆಯನ್ನ ಬಳಸಬೇಕು ಹಾಗೂ ಉಳಿಸಬೇಕು. ಹಾಸನ ಜಿಲ್ಲೆಯಲ್ಲಿ ದೊರೆತ ಹಲ್ಮಿಡಿ ಶಾಸನ ಕನ್ನಡದ ಪ್ರಪ್ರಥಮ ಶಿಲಾಶಾಸನವಾಗಿದೆ. ಕನ್ನಡ ಬಾರದಿರುವ ಅನ್ಯ ಭಾಷಿಕರಿಗೆ ಕನ್ನಡವನ್ನು ಕಲಿಸುವ ಕಾರ್ಯವಾಗಬೇಕು, ಭೌತಶಾಸ್ತ್ರ, ರಸಾಯನ, ಜೀವಶಾಸ್ತ್ರ ಪರೀಕ್ಷೆಗಳನ್ನು ಕನ್ನಡದಲ್ಲಿ ಯಾರೂ ಬರೆಯುತ್ತಿಲ್ಲ. ಕೋಲಾರದ ಶಾಲೆಯೊಂದರಲ್ಲಿ ಮಾತ್ರ ಈ ಕಾರ್ಯ ನಡೆಯುತ್ತಿದೆ. ನಿಮ್ಮ ಕನಸುಗಳು ಕನ್ನಡದಲ್ಲಿ ಬೀಳುತ್ತದೆ, ನಿಮ್ಮ ಭಾಷೆಯೂ ಕನ್ನಡ ವಾಗಲಿ ಎಂದರು.

ಪ್ರಾಂಶುಪಾಲರಾದ ಎಚ್.ಎಂ ಶ್ರೀಕಂಠ, ಹೆಗ್ಗಡ ದೇವನಕೋಟೆ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಹನುಮಂತ ರಾವ್, ಮಾತನಾಡಿ, ಕನ್ನಡ ಭಾಷೆಯ ಶ್ರೀಮಂತಿಕೆ ವೈವಿಧ್ಯತೆ ತಿಳಿಸಿ, ಸಾಹಿತ್ಯಗಳನ್ನ ಅಧ್ಯಯನ ಮಾಡುವ ಮೂಲಕ ಕನ್ನಡದ ತೇರು ಎಳೆಯುವ ಜವಾಬ್ದಾರಿ ನಮ್ಮದಾಗಬೇಕೆಂದರು. ಈ ವೇಳೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳಾದ ನಮ್ರತಾ, ನಯನ, ರಜತ್ ಕಾರ್ಯಕ್ರಮ ನಡೆಸಿಕೊಟ್ಟರು.