ಸಾರಾಂಶ
ಮೂಡಲಗಿ ಪಟ್ಟಣದ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ಮಾ.31ಕ್ಕೆ 6.40 ಕೊಟಿ ನಿವ್ವಳ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಬಸವರಾಜ ಗುಲಗಾಜಂಬಗಿ ಹೇಳಿದರು.
ಕನ್ನಡಪ್ರಭ ವಾರ್ತೆ ಮೂಡಲಗಿ
ಪಟ್ಟಣದ ಶಿವಬೋಧರಂಗ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸೈಟಿಯು ಪ್ರಸಕ್ತ ಮಾ.31ಕ್ಕೆ ₹6.40 ಕೊಟಿ ನಿವ್ವಳ ಲಾಭ ಗಳಿಸಿ ಪ್ರಗತಿಯಲ್ಲಿ ಸಾಗಿದೆ ಎಂದು ಸೊಸೈಟಿಯ ಅಧ್ಯಕ್ಷ ಬಸವರಾಜ ಗುಲಗಾಜಂಬಗಿ ಹೇಳಿದರು.ಪಟ್ಟಣದ ಶ್ರೀ ಶಿವಬೋಧರಂಗ ಅರ್ಬನ್ ಸೊಸೈಟಿಯ 2024-25ನೇ ಸಾಲಿನ ಪ್ರಗತಿ ಕುರಿತು ಕರೆದಿದ್ದ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಸೊಸೈಟಿಯು ಸದ್ಯ ₹6.41 ಕೋಟಿ ಶೇರು ಬಂಡವಾಳ, ₹ 401.62 ಕೋಟಿ ಠೇವುಗಳನ್ನು ಸಂಗ್ರಹಿಸಿದೆ. ₹ 245.06 ಕೋಟಿ ವಿವಿಧ ಕ್ಷೇತ್ರದ ಜನರಿಗೆ ಸಾಲ ನೀಡಲಾಗಿದೆ. ₹ 30.70 ಕೋಟಿ ನಿಧಿಗಳನ್ನು ಹೊಂದಿ ₹128.54 ಕೋಟಿ ಗ್ರಾಹಕರ ಭದ್ರತೆಗಾಗಿ ವಿವಿಧ ಬ್ಯಾಂಕ್‌ಗಳಲ್ಲಿ ಗುಂತಾವಣಿಗಳನ್ನು ಮಾಡಿದ್ದು, ₹ 474.01 ಕೋಟಿ ದುಡಿಯುವ ಬಂಡವಾಳ ಹೊಂದಿ ₹ 1585.72 ಕೋಟಿ ವಾರ್ಷಿಕ ವಹಿವಾಟವನ್ನು ಹೊಂದಿದೆ ಎಂದರು.ಸೊಸೈಟಿಯು ಈವರೆಗೆ 18 ಶಾಖೆಗಳನ್ನು ಹೊಂದಿದ್ದು ಎಲ್ಲವೂ ಪ್ರಗತಿಯಲ್ಲಿವೆ. ಸದ್ಯ 16,692 ಸಂಘದ ಸದಸ್ಯರಿದ್ದು, ಪ್ರಸಕ್ತ ಸಾಲಿಗೆ ಶೇ.16ರಷ್ಟು ಲಾಭಾಂಶ ಪ್ರಕಟಿಸಿದ್ದು, ಅಡಿಟ್ ವರ್ಗದಲ್ಲಿ ಅ ಶ್ರೇಣಿಯನ್ನು ಹೊಂದಿ ಗ್ರಾಹಕರ ವಿಶ್ವಾಸವನ್ನು ಗಳಿಸಿದೆ ಎಂದರು. ಸಭೆಯಲ್ಲಿ ಸೊಸೈಟಿ ಉಪಾಧ್ಯಕ್ಷ ಸುಭಾಸ ಸೋನವಾಲಕರ, ನಿರ್ದೇಶಕರಾದ ಶಂಕರ ದಂಡಪ್ಪನವರ, ಅಶೋಕ ಹೊಸೂರ, ರೇವಪ್ಪ ಕುರಬಗಟ್ಟಿ, ರವೀಂದ್ರ ಸೋನವಾಲಕರ, ಪುಲಕೇಶಿ ಸೋನವಾಲಕರ, ಶಿವಬಸು ಬೂದಿಹಾಳ, ಗಂಗವ್ವ ಸಣ್ಣಪ್ಪನವರ, ಶಾರದಾ ಗುಲಗಾಜಂಬಗಿ, ವಿದ್ಯಾವತಿ ಸೋನವಾಲಕರ, ಮಂಜುಳಾ ಬಳಿಗಾರ, ಹಣಮಂತ ಸಣ್ಣಕ್ಕಿ ಹಾಗೂ ಪ್ರಧಾನ ವ್ಯವಸ್ಥಾಪಕ ಸುರೇಶ ನಾಶಿ, ಮಾರಾಟಾಧಿಕಾರಿ ಹಣಮಂತ ಕುಂಬಾರ ಇದ್ದರು.