ಶಿವದಾಸಿಮಯ್ಯನವರ ತತ್ವಾದರ್ಶ ಪಾಲಿಸಿ: ಐಹೊಳ್ಳಿ

| Published : Mar 10 2024, 01:47 AM IST

ಸಾರಾಂಶ

ಅಮೀನಗಡ ಪಟ್ಟಣದಲ್ಲಿ ಜರುಗಿದ ಶಿವಸಿಂಪಿ ಸಮಾಜದ ಶ್ರೇಷ್ಠಶರಣ ಶಿವದಾಸಿಮಯ್ಯನವರ ಜಯಂತಿಯಲ್ಲಿ ಮಾತನಾಡಿದ ಶಿವಸಿಂಪಿ ಸಮಾಜದ ಹಿರಿಯರಾದ ಮಹಾಂತೇಶ ಐಹೊಳ್ಳಿ, ಶಿವಸಿಂಪಿ ಸಮಾಜದವರು ಕಾಯಕದ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ಶಿವಸಿಂಪಿ ಸಮಾಜದವರು ಕಾಯಕದ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಅಮೀನಗಡದ ಶಿವಸಿಂಪಿ ಸಮಾಜದ ಹಿರಿಯರಾದ ಮಹಾಂತೇಶ ಐಹೊಳ್ಳಿ ಹೇಳಿದರು.

ಪಟ್ಟಣದಲ್ಲಿ ಜರುಗಿದ ಶಿವಸಿಂಪಿ ಸಮಾಜದ ಶ್ರೇಷ್ಠಶರಣ ಶಿವದಾಸಿಮಯ್ಯನವರ ಜಯಂತಿಯಲ್ಲಿ ಮಾತನಾಡಿ, ಜೀವನಕ್ಕೆ ಅಗತ್ಯವಾಗಿ ಬೇಕಾಗಿರುವ ಕಾಯಕಧರ್ಮ ತೋರಿಸಿಕೊಟ್ಟವರು ಶ್ರೇಷ್ಠ ಶರಣಸಂತ ಶಿವದಾಸಿಮಯ್ಯನವರು. ಶಿವದಾಸಿಮಯ್ಯನವರ ತತ್ವಾದರ್ಶ ಎಲ್ಲರಿಗೂ ಮಾದರಿ. ಸೂಜಿಯನ್ನು ದಾರ ಹಿಂಬಾಲಿಸಿ ಬಟ್ಟೆಗೆ ರೂಪು ಕೊಡುತ್ತದೆ. ಅದರಂತೆ ಬೇಡವಾದ ಬಟ್ಟೆ ಕತ್ತರಿಸಿ ಒಗೆಯುವಂತೆ ಸಮಾಜ ಬಾಂಧವರು ಬೇಡವಾದ ವಿಷಯಗಳನ್ನು ಬದುಕಿನಲ್ಲಿ ಕಿತ್ತೆಸೆದು, ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

ಸಮಾಜದ ಹಿರಿಯರಾದ ಎ.ಕೆ. ತಾಳೀಕೋಟಿ, ಆರ್.ಕೆ.ಗೌಡರ, ಸಂತೋಷ ಐಹೊಳ್ಳಿ, ವೀರಣ್ಣ ಯಡ್ರಾಮಿ, ಮಲ್ಲಣ್ಣ ಟ್ವಾಣ್ಣವರ, ಸಿ.ಡಿ. ಇಲಕಲ್, ಯುವಕರಾದ ಚಂದ್ರು ಐಹೊಳ್ಳಿ, ಗುರು ವಂದಾಲ, ಆನಂದ ಜತ್ತಿ, ಅಶೋಕ ಜತ್ತಿ, ಅಶೋಕ ಕುಪ್ಪಸ್ತ, ವಿಜಯ ಯಡ್ರಾಮಿ, ಅಜಯ ಐಹೊಳ್ಳಿ ಹಾಗೂ ಸಮಾಜದ ಮುಖಂಡರು, ಮಹಿಳೆಯರು ಭಾಗವಹಿಸಿದ್ದರು.