ಸಾರಾಂಶ
ಮನುಷ್ಯನಿಗೆ ದೊರೆಯುವ ಪುರಸ್ಕಾರಗಳು ಆತನು ಗರ್ವ ಪಡುವುದಕ್ಕಲ್ಲ ತನ್ನ ಜವಾಬ್ದಾರಿ ಇನ್ನೂ ಹೆಚ್ಚಾಯಿತು ಎನ್ನಲು.ಯೋಗವು ನಮ್ಮ ದೈಹಿಕ ಹಾಗೂ ಮಾನಸಿಕ ದೃಢತೆಯನ್ನು ಹೆಚ್ಚಿಸಲಿದೆ
ಧಾರವಾಡ: ಪತಂಜಲಿ ವತಿಯಿಂದ ಶುಕ್ರವಾರ ಇಲ್ಲಿಯ ಚರಂತಿಮಠ ಗಾರ್ಡನನಲ್ಲಿರುವ ಸಭಾಭವನದಲ್ಲಿ ಮೃತ್ಯುಂಜಯ ಮಂತ್ರ ಪಠಣ ಜತೆಗೆ ಅಗ್ನಿಹೋತ್ರ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ವಿಶೇಷ ಯೋಗ ಶಿಬಿರ ಹಾಗೂ ಯೋಗಾಚಾರ್ಯ ಪುರಸ್ಕೃತ ಪತಂಜಲಿ ಭವರಲಾಲ ಆರ್ಯ ಅವರಿಗೆ ಅಭಿನಂದನೆ ನಡೆಯಿತು.
ಪ್ರತಿಯೊಬ್ಬ ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು. ಅಂದಾಗ ರಾಮರಾಜ್ಯ ಕಾಣಲು ಸಾಧ್ಯ. ಮನುಷ್ಯನಿಗೆ ದೊರೆಯುವ ಪುರಸ್ಕಾರಗಳು ಆತನು ಗರ್ವ ಪಡುವುದಕ್ಕಲ್ಲ ತನ್ನ ಜವಾಬ್ದಾರಿ ಇನ್ನೂ ಹೆಚ್ಚಾಯಿತು ಎನ್ನಲು.ಯೋಗವು ನಮ್ಮ ದೈಹಿಕ ಹಾಗೂ ಮಾನಸಿಕ ದೃಢತೆಯನ್ನು ಹೆಚ್ಚಿಸಲಿದೆ. ಯೋಗದಿಂದ ರೋಗ ಮುಕ್ತ ಎಂಬುದಾಗಿ ಜನರಲ್ಲಿ ನಾವು ಸ್ವಾಸ್ಥ್ಯ ಕೂಡಿಸುವುದು, ಧ್ಯಾನ ಸಂಯೋಜಿಸುವುದು, ಜನಮನ ಜೋಡಿಸುವುದನ್ನು ನೋಡುತ್ತೇವೆ. ಯೋಗವು ಅಂತರಂಗದ ದೃಢತೆ ಗಮನಿಸುವ ಮನಸ್ಸನ್ನು ಸಶಕ್ತ ಮಾಡಿಕೊಡುವ ಮನೋಬಲ ಹೆಚ್ಚಿಸಿಕೊಡುತ್ತದೆ ಎಂದು ಯೋಗಗುರು ಭವರಲಾಲ್ ಆರ್ಯ ಹೇಳಿದರು.ಪಾಲಿಕೆ ಸದಸ್ಯ ಶಂಕರ ಶೇಳಕೆ, ಜಿಲ್ಲಾ ಪತಂಜಲಿ ಮಹಿಳಾ ಪ್ರಭಾರಿ ಶೈಲಜಾ ಮಾಡಿಕರ, ಎಂ.ಡಿ.ಪಾಟೀಲ, ಧಾರವಾಡ ಪತಂಜಲಿ ಅಧ್ಯಕ್ಷ ರಮೇಶ ಸುಲಾಖೆ, ಹಿರಿಯ ಯೋಗ ಶಿಕ್ಷಕ ಎಚ್. ಟಕ್ಕಳಕಿ, ಉಮಾ ಅಗಡಿ, ತನುಜಾ ಪಾಟೀಲ, ನಾಗರತ್ನಾ ಸುಲಾಖೆ, ಆನಂದ ರೇಣಕೆ, ಯಲ್ಲಪ್ಪ ಕರಿಗಾರ ಇದ್ದರು.