ಸಾರಾಂಶ
12ನೇ ಶತಮಾನದ ಶರಣರು ಕಾಯಕಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಅದರಿಂದ ದೊರೆಯುತ್ತಿದ್ದ ಆದಾಯದಿಂದ ದಾಸೋಹ ನೆರವೇರಿಸುತ್ತ, ಸೌಹಾರ್ದತೆ ಮೆರೆಯುತ್ತಿದ್ದರು. ತಾರತಮ್ಯ ಎಣಿಸದೇ ಸರ್ವರನ್ನು ಸಮಾನ ಭಾವದಿಂದ ಕಾಣುವಂತಹ ಕಾಲ ಅದಾಗಿತ್ತು ಎಂದು ರಾಜ್ಯ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಹೇಳಿದ್ದಾರೆ.
- ಪಾಂಡೋಮಟ್ಟಿ ವಿರಕ್ತ ಮಠದ ಶಿವಾನುಭಗೋಷ್ಠಿಯಲ್ಲಿ ರಾಮಚಂದ್ರಪ್ಪ ಅಭಿಮತ
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
12ನೇ ಶತಮಾನದ ಶರಣರು ಕಾಯಕಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಅದರಿಂದ ದೊರೆಯುತ್ತಿದ್ದ ಆದಾಯದಿಂದ ದಾಸೋಹ ನೆರವೇರಿಸುತ್ತ, ಸೌಹಾರ್ದತೆ ಮೆರೆಯುತ್ತಿದ್ದರು. ತಾರತಮ್ಯ ಎಣಿಸದೇ ಸರ್ವರನ್ನು ಸಮಾನ ಭಾವದಿಂದ ಕಾಣುವಂತಹ ಕಾಲ ಅದಾಗಿತ್ತು ಎಂದು ರಾಜ್ಯ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಹೇಳಿದರು.ತಾಲೂಕಿನ ಪಾಂಡೋಮಟ್ಟಿ ಗ್ರಾಮದಲ್ಲಿನ ವಿರಕ್ತ ಮಠದಲ್ಲಿ ಶನಿವಾರ ಸಂಜೆ ಏರ್ಪಡಿಸಿದ್ದ ಶರಣ ಜೇಡರ ದಾಸಿಮಯ್ಯ ಸ್ಮರಣೋತ್ಸವ ಮತ್ತು 868ನೇ ಮಾಸಿಕ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶರಣರ ಕಾಲದಲ್ಲಿ ಲಿಂಗಾಯಿತ ಧರ್ಮ ಶ್ರಮದ ಬೆವರಿಗೆ ಬೆಲೆಯನ್ನು ಕೊಡುತ್ತಿತ್ತು. ಆಗಿನ ಕಾಲದ ಶರಣರು ಸಾಮಾಜಿಕ ಜಾಗೃತಿ ಮೂಡಿಸಿ, ಮೌಢ್ಯಗಳ ತೊಲಗಿಸಲು ಶ್ರಮಿಸುತ್ತಿದ್ದ ವಿಚಾರವಂತ ಶರಣರಾಗಿದ್ದರು ಎಂದು ತಿಳಿಸಿದರು.ತುಮ್ಕೋಸ್ ನಿರ್ದೇಶಕ ಎಚ್.ಎಸ್. ಶಿವಕುಮಾರ್ ಮಾತನಾಡಿ, ಸ್ವರ್ಗ ನರಕ ಎನ್ನುವುದು ಎಲ್ಲಿಯೂ ಇಲ್ಲ. ನಾವುಗಳು ಮಾಡುವ ಕಾಯಕದಲ್ಲಿಯೇ ಸ್ವರ್ಗ ಮತ್ತು ನರಕಗಳು ಇರುತ್ತವೆ ಎಂದು ಜಗಜ್ಯೋತಿ ಬಸವೇಶ್ವರ ಹೇಳಿದ್ದಾರೆ. ಪ್ರತಿಯೊಬ್ಬರು ಸಾಮಾಜಿಕವಾಗಿ ಜೀವಿಸುವಾಗ ಸೌಹಾರ್ದದಿಂದ ಬದುಕು ಸಾಗಿಸಿದರೆ ನೆಮ್ಮದಿ ಜೀವನ ನಡೆಸಬೇಕು. ಆದ ಯಶಸ್ಸು ನಮ್ಮದಾಗಲಿದೆ ಎಂದರು.
ಶ್ರೀ ಮಠದ ಡಾ.ಶ್ರೀ ಗುರುಬಸವ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿ, ಜೇಡರ ದಾಸಿಮಯ್ಯ ಮೊದಲಿಗೆ ವಚನ ಸಾಹಿತ್ಯ ರಚಿಸಿದವರಾಗಿದ್ದಾರೆ. ಅವರ ಚಿಂತನೆಗಳು ಇಂದಿನ ದಿನಗಳಿಗೆ ಅವಶ್ಯಕವಾಗಿ ಬೇಕಾಗಿದೆ. ಶರಣರ ಪರಂಪರೆ ಕಾಯಕ, ದಾಸೋಹ ಮತ್ತು ದಾನಕ್ಕೆ ಮಹತ್ವ ನೀಡಿತ್ತು ಎಂದು ಹೇಳಿದರು.ಮಾಯಕೊಂಡ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಬಸವರಾಜ ನಾಯ್ಕ್, ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಪಾಟೀಲ್, ಬಿಇಒ ಎಲ್.ಜಯಪ್ಪ, ಹಾಸ್ಯ ಕಲಾವಿದ ಜಗನ್ನಾಥ್, ಡಾ.ಇಂಚರ, ಕು.ಇಂಪನ ಮಾತನಾಡಿದರು.
ಸಮಾರಂಭದಲ್ಲಿ ಬಸವ ತತ್ವ ಸಮ್ಮೇಳನದ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಗರಗ ಶಿವಲಿಂಗಪ್ಪ, ಬಿದರೆ ಸಿದ್ದಲಿಂಗ ಮೂರ್ತಿ, ಖಗ್ಗಿ ಶ್ರೀಕಂಠ ಮೂರ್ತಿ, ಅತ್ತಿಮೊಗ್ಗೆ ಚಂದ್ರಶೇಖರ್, ಸಿದ್ದಮಠದ ಎಸ್.ಆರ್. ಕುಮಾರ್, ಕಾಕನೂರು ಎಂ.ಬಿ.ನಾಗರಾಜ್, ಶಿವಮೂರ್ತಪ್ಪ, ಧನಂಜಯ ಉಪಸ್ಥಿತರಿದ್ದರು.- - - -16ಕೆಸಿಎನ್‌ಜಿ2:
ಬಸವ ತತ್ವ ಸಮ್ಮೇಳನದಲ್ಲಿ ಸ್ಫರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಶ್ರೀಗಳು ಬಹುಮಾನ ವಿತರಿಸಿದರು.