ನಾಳೆಯಿಂದ ಷೋಡಶ ಪವಿತ್ರ ನಾಗಮಂಡಲೋತ್ಸವ

| Published : Mar 14 2024, 02:04 AM IST

ಸಾರಾಂಶ

ನಾಗಪಾತ್ರಿ ವೇ.ಮೂ. ಶಂಕರನಾರಾಯಣ ಬಾಯರಿ ಗೋಪಾಡಿ, ವೈದ್ಯರಾಗಿ ವಾಸುದೇವ ವೈದ್ಯ ಬಳಹ ಗೋಳಿ ಅಂಗಡಿ ಹಾಗೂ ಕೃಷ್ಣಪ್ರಸಾದ ಬಳಗ ಮುದ್ದೂರು ಪಾಲ್ಗೊಳಲ್ಲಿದ್ದಾರೆ.

ಭಟ್ಕಳ: ತಾಲೂಕಿನ ಶಿರಾಲಿ ಅಳ್ವೆಕೋಡಿ ಸಣಬಾವಿಯ ವಿಶ್ವಶಕ್ತಿ ದೇವಸ್ಥಾನದ ಆರ್ಕಟಿಮನೆ ದೇವಿದಾಸ ಸ್ವಾಮಿಗಳು ಮತ್ತು ಅವರ ಕುಟುಂಬಿಕರು ಪೂಜಿಸಿಕೊಂಡು ಬರುತ್ತಿರುವ ನಾಗಬನದಲ್ಲಿ ಮಾ. 15ರಿಂದ 21ರ ವರೆಗೆ ಷೋಡಶ ಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಲ್ಲದೇ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಪ್ರಮುಖ ವಿಠಲ್ ದೈಮನೆ, 2022ರಲ್ಲಿ ಆರ್ಕಟಿಮನೆ ದೇವಿದಾಸ ಸ್ವಾಮಿಗಳ ನೇತೃತ್ವದಲ್ಲಿ ವಿಶ್ವಶಕ್ತಿ ದೇವಸ್ಥಾನ ನಿರ್ಮಿಸಲಾಗಿದೆ. ಶ್ರೀ ದೇವಿಯ ಪ್ರೇರಣೆಯಿಂದ ಸ್ಥಳದ ನಾಗಬನದಲ್ಲಿ ಲೋಕಕಲ್ಯಾಣಾರ್ಥವಾಗಿ ಷೋಡಶ ಪವಿತ್ರ ನಾಗಮಂಡಲ ನಡೆಸಲು ನಿರ್ಧರಿಸಲಾಗಿದೆ.

ಷೋಡಶ ಪವಿತ್ರ ನಾಗಮಂಡಲೋತ್ಸವ ಕಾರ್ಯಕ್ರಮ ವೇ.ಮೂ. ನಾಗರಾಜ ಪುತ್ರಾಯ, ವೇ.ಮೂ. ಮುರಳಿಧರ ಪುತ್ರಾಯ, ವೇ.ಮೂ. ಲಕ್ಷ್ಮೀಪ್ರಸಾದ ಭಟ್ ಸಂತ್ಯಾರು ಅವರ ಆಚಾರ್ಯತ್ವದಲ್ಲಿ ಮತ್ತು ವೇ.ಮೂ. ಕುಮಾರ ಶಾಸ್ತ್ರಿಯವರ ಸಹಭಾಗಿತ್ವದಲ್ಲಿ ನಡೆಯಲಿದೆ ಎಂದರು.

ನಾಗಪಾತ್ರಿ ವೇ.ಮೂ. ಶಂಕರನಾರಾಯಣ ಬಾಯರಿ ಗೋಪಾಡಿ, ವೈದ್ಯರಾಗಿ ವಾಸುದೇವ ವೈದ್ಯ ಬಳಹ ಗೋಳಿ ಅಂಗಡಿ ಹಾಗೂ ಕೃಷ್ಣಪ್ರಸಾದ ಬಳಗ ಮುದ್ದೂರು ಪಾಲ್ಗೊಳಲ್ಲಿದ್ದಾರೆ.

ಮಾ. 15ರಂದು ಬೆಳಗ್ಗೆ 9.30 ಕ್ಕೆ ಚಿತ್ರಾಪುರ ಮಠದ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ, ಮಾ. 16ರಂದು ಹರಿಹರಪುರದ ಸಚ್ಛಿದಾನಂದ ಸರಸ್ವತಿ ಸ್ವಾಮೀಜಿ, ಮಾ. 17ರಂದು ಬೆಳಗ್ಗೆ 9.30 ಗಂಟೆಗೆ ಉಜಿರೆ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಸಂಜೆ 3.30ಕ್ಕೆ ಪರ್ಯಾಯ ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಮಾ. 18ರಂದು ಬೆಳಗ್ಗೆ 9.30 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು, ಮಾ. 19ರಂದು ಬೆಳಗ್ಗೆ ಹಂಗಾಕಟ್ಟೆ ಬಾಳೆಕುಂದ್ರು ಮಠದ ಶ್ರೀ ನೃಸಿಂಹಾಶ್ರಮ ಸ್ವಾಮೀಜಿ, ಮಾ. 20ರಂದು ಬೆಳಗ್ಗೆ ಮಂಡ್ಯದ ಜೈನ ಮಠದ ಶ್ರೀ ಭಾನುಕೀರ್ತಿ ಭಟ್ಟಾರಕ ಸ್ವಾಮೀಜಿ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ವಿಶ್ವಶಕ್ತಿ ದೇವಸ್ಥಾನದ ಧರ್ಮದರ್ಶಿ ದೇವಿದಾಸ ಸ್ವಾಮಿಗಳು ಹಾಗೂ ವಿವಿಧ ಗಣ್ಯರು, ರಾಜಕೀಯ, ಧಾರ್ಮಿಕ ಕ್ಷೇತ್ರದ ಮುಖಂಡರು ಪಾಲ್ಗೊಳ್ಳಲಿದ್ದಾರೆ. ಅಲ್ಲದೇ ಕಾರ್ಯಕ್ರಮದ ಅಷ್ಟೂ ದಿನವೂ ಅನ್ನಸಂತರ್ಪಣೆ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ನಾರಾಯಣ ಮೊಗೇರ ಆರ್ಕಟಿಕಮನೆ, ಕುಮಾರ ಹೆಬಳೆ, ಪತ್ರಕರ್ತ ಸುಬ್ರಹ್ಮಣ್ಯ ಭಟ್‌ ದಾಸನಕುಡಿಗೆ ಇದ್ದರು.