ಸಿಜೆಐ ಮೇಲೆ ಶೂ ಎಸೆತ: ವಕೀಲರಿಂದ ಕಲಾಪ ಬಹಿಷ್ಕಾರ

| Published : Oct 11 2025, 01:00 AM IST

ಸಾರಾಂಶ

ದೊಡ್ಡಬಳ್ಳಾಪುರ: ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶರಾದ ಬಿ.ಆರ್.ಗವಾಯಿ ಅವರತ್ತ ನ್ಯಾಯಾಲಯದಲ್ಲೇ ಶೂ ಎಸೆಯಲು ಯತ್ನಿಸಿದ ವಕೀಲ ರಾಕೇಶ್‌ ಕಿಶೋರ್‌ರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕು. ನ್ಯಾಯಾಲಯಗಳಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಬೇಕು ಎಂದು ಒತ್ತಾಯಿಸಿ, ತಾಲೂಕು ವಕೀಲರ ಸಂಘದ ಪದಾಧಿಕಾರಿಗಳು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿದರು.

ತಾಲೂಕು ವಕೀಲರ ಸಂಘದ ಅಧ್ಯಕ್ಷ ರವಿಮಾವಿನಕುಂಟೆ ಮಾತನಾಡಿ, ಅ.6ರಂದು ನ್ಯಾಯಾಲಯ ಕಲಾಪ ನಡೆಯುತ್ತಿದ್ದಾಗ ರಾಕೇಶ್ ಕಿಶೋ‌ರ್ ಶೂ ಎಸೆಯಲು ಯತ್ನಿಸಿರುವ ಘಟನೆ ಖಂಡನೀಯ. ಈ ನ್ಯಾಯವಾದಿಗೆ ಯಾವುದೇ ಕಠಿಣ ಶಿಕ್ಷೆಗೆ ಒಳಪಡಿಸದಿರುವುದು ಸರಿಯಲ್ಲ. 71 ವರ್ಷ ವಯಸ್ಸಿನ ಇಂತಹ ಹಿರಿಯರೇ ಹೀಗೆ ಮಾಡಿದರೆ ಹೇಗೆ ಎನ್ನುವ ಪ್ರಶ್ನೆ ಕಾಡುತ್ತದೆ. ಇವರಿಗೆ ಶಿಕ್ಷೆಯಾದರೆ ಮಾತ್ರ ಜನರಿಗೆ ನ್ಯಾಯಾಂಗದ ವ್ಯವಸ್ಥೆ ಮೇಲೆ ನಂಬಿಕೆ ಬರುತ್ತದೆ. ಈ ದಿಸೆಯಲ್ಲಿ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಪ್ರತಿಭಟನೆ ನಡೆಸಿ, ಖಂಡನಾ ನಿರ್ಣಯಗಳನ್ನು ರಾಷ್ಟ್ರಪತಿ ಹಾಗೂ ಮುಖ್ಯ ನ್ಯಾಯಮೂರ್ತಿಗಳಿಗೆ ಕಳುಹಿಸಲಾಗುವುದು ಎಂದರು.

ವಕೀಲ ರೇಣುಕಾರಾಧ್ಯ ಮಾತನಾಡಿ, ಇದು ನ್ಯಾಯಾಧೀಶರ ಮೇಲಿನ ಹಲ್ಲೆಯಲ್ಲ ನ್ಯಾಯಾಂಗ ವ್ಯವಸ್ಥೆಗೆ ಹಾಗೂ ಸಂವಿಧಾನದ ಮೇಲೆ ನಡೆದಿರುವ ಹಲ್ಲೆಯಾಗಿದೆ. ಸ್ಥಾನಮಾನಗಳ ತಾರತಮ್ಯದ ಮನೋಸ್ಥಿತಿ ಇಂತಹ ಕೃತ್ಯ ನೀಡಲು ಪ್ರೇರೇಪಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ಆಗಬೇಕಿದೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ತಾಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಜಂಟಿ ಕಾರ್ಯದರ್ಶಿ ವಿಜಯಕುಮಾ‌ರ್, ಎಂ.ಮುನಿರಾಜು, ಹಿರಿಯ ವಕೀಲರಾದ ಆಂಜನಗೌಡ, ಮೋಹನ್ ಕುಮಾರ್, ರೇಣುಕಾಮೂರ್ತಿ ಭಾಗವಹಿಸಿದ್ದರು.

9ಕೆಡಿಬಿಪಿ3- ದೊಡ್ಡಬಳ್ಳಾಪುರದಲ್ಲಿ ಗುರುವಾರ ವಕೀಲರ ಸಂಘದ ನೇತೃತ್ವದಲ್ಲಿ ಕಲಾಪ ಬಹಿಷ್ಕರಿಸಿ ಪ್ರತಿಭಟನೆ ನಡೆಸಲಾಯಿತು.