ಸಾರಾಂಶ
ಎಂ.ಅಫ್ರೋಜ್ ಖಾನ್
ಕನ್ನಡಪ್ರಭ ವಾರ್ತೆ ರಾಮನಗರಆರು ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗವನ್ನು ಆಳಿದ ಬಾಲಿವುಡ್ ನ ‘ಹೀಮ್ಯಾನ್’ ಎಂದೇ ಖ್ಯಾತರಾಗಿದ್ದ ಧರ್ಮೇಂದ್ರ ಅವರಿಗೂ ರೇಷ್ಮೆನಾಡು ರಾಮನಗರಕ್ಕೂ ನಂಟು ಬೆಸೆದಿತ್ತು.
70 - 80ರ ದಶಕದಲ್ಲಿ ನಿರ್ಮಾಣಗೊಂಡ ‘ಶೋಲೆ’ ಸಿನಿಮಾದಲ್ಲಿ ನಟ ಧರ್ಮೇಂದ್ರ ‘ವೀರು’ ಪಾತ್ರದಲ್ಲಿ ಅಭಿನಯಿಸಿದ್ದರು. ವಿಶೇಷ ಎಂದರೆ ಈ ಚಿತ್ರ ರಾಮನಗರದ ರಾಮದೇವರ ಬೆಟ್ಟದಲ್ಲಿ ಸುಮಾರು ಎರಡು ವರ್ಷಗಳ ಕಾಲ ಚಿತ್ರೀಕರಣಗೊಂಡಿತ್ತು. ಹೀಗಾಗಿ ಧರ್ಮೇಂದ್ರ ಅವರಿಗೆ ರಾಮನಗರದೊಂದಿಗೆ ಬಾಂಧವ್ಯ ಬೆಳೆಯಲು ಶೋಲೆ ಚಿತ್ರ ಕಾರಣವಾಯಿತು.1975ರ ಆಗಸ್ಟ್ 15ರಂದು ತೆರೆಕಂಡಿದ್ದ ಶೋಲೆ ಸಿನಿಮಾವನ್ನು ರಮೇಶ್ ಸಿಪ್ಪಿ ನಿರ್ದೇಶನ ಮಾಡಿದ್ದರು. ಈ ಸಿನಿಮಾದಲ್ಲಿ ನಟರಾದ ಅಮಿತಾಭ್ ಬಚ್ಚನ್, ಧರ್ಮೇಂದ್ರ, ಸಂಜೀವ್ ಕುಮಾರ್, ಹೇಮಾ ಮಾಲಿನಿ, ಜಯಾ ಬಚ್ಚನ್, ಅಮ್ಜದ್ ಖಾನ್ ಅವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.
ಈ ಸಿನಿಮಾಗೆ ಸಲ್ಮಾನ್ ಖಾನ್ ತಂದೆ ಸಲೀಮ್ ಹಾಗೂ ಕಥೆ ಬರಹಗಾರ ಜಾವೇದ್ ಅಖ್ತರ್ ಅವರು ಕಥೆ ಬರೆದಿದ್ದರು. ಚಿತ್ರಕಥೆ ಪಕ್ಕಾ ಆದ ಮೇಲೆ ನಿರ್ದೇಶಕ ರಮೇಶ್ ಸಿಪ್ಪಿ ಅವರು ರಾಮನಗರದ ಬೆಟ್ಟಸಾಲನ್ನು ಚಿತ್ರೀಕರಣಕ್ಕೆ ಆಯ್ಕೆ ಮಾಡಿಕೊಂಡರು. ಸಿನಿಮಾದಲ್ಲಿನ ರಾಮಗಢ ಅಸಲಿಗೆ ಇದ್ದುದು ರಾಮದೇವರ ಬೆಟ್ಟದಲ್ಲಿ.‘ಶೋಲೆ’ ಸಿನಿಮಾದ ಹೆಸರು ಕೇಳಿದಾಕ್ಷಣ ರಾಮದೇವರ ಬೆಟ್ಟ ನೆನಪಾಗುತ್ತದೆ. ಚಿತ್ರದಲ್ಲಿನ ಕಾಲ್ಪನಿಕ ಗ್ರಾಮ ರಾಮಘಡ್ನ ನಿರ್ಮಾಣ ಸಿನಿಮಾದ ಚಿತ್ರೀಕರಣ ನಡೆದಿದ್ದು ರಾಮನಗರದಲ್ಲಿ. ಗಬ್ಬರ್ ಸಿಂಗ್ನ ದೃಶ್ಯಗಳ ಚಿತ್ರೀಕರಣ ನಡೆದ ಈ ಬೆಟ್ಟ ಇವತ್ತಿಗೂ ಶೋಲೆ ಬೆಟ್ಟ ಎಂದೇ ಫೇಮಸ್ ಆಗಿದೆ.
ಮೋಡಿ ಮಾಡಿದ ವೀರು - ಬಸಂತಿ ಜೋಡಿ :ಈಗ 50 ವರ್ಷ ಪೂರೈಸಿರುವ ‘ಶೋಲೆ’ ಚಿತ್ರ ಮಾಡಿದ ದಾಖಲೆಗಳು ಒಂದೆರಡಲ್ಲ. ಈ ಚಿತ್ರ ಅಮಿತಾಭ್ ಬಚ್ಚನ್ ಮತ್ತು ಧರ್ಮೇಂದ್ರ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿತು. ಚಿತ್ರದಲ್ಲಿ ನಟಿಸಿದ ಎಲ್ಲಾ ಕಲಾವಿದರು ಭರ್ಜರಿ ಮೈಲೇಜ್ ಪಡೆದರು.
ಶೂಟಿಂಗ್ ಸಮಯದಲ್ಲಿ ಧರ್ಮೆಂದ್ರ ಅವರು ನಟ ಅಮಿತಾಭ್ ಬಚ್ಚನ್ ಅವರೊಂದಿಗಿನ ಸಂಭಾಷಣೆ, ಹಾಡುಗಾರಿಕೆ ಮಾಡಿದ ಸ್ಥಳ, ನಟಿ ಹೇಮಾ ಮಾಲಿನಿ ಅವರೊಂದಿಗಿನ ಅಭಿನಯ, ನೃತ್ಯ ಹಾಗೂ ಖಳನಟ ಅಮ್ಜದ್ ಖಾನ್ ಅವರೊಂದಿಗಿನ ಹೊಡೆದಾಟದ ದೃಶ್ಯಗಳ ಸನ್ನಿವೇಶನಗಳನ್ನು ಜನರು ಶೋಲೆ ಸಿನಿಮಾದ ತುಣುಕುಗಳನ್ನು ನೋಡಿಕೊಂಡು ಈಗಲೂ ಮೆಲುಕು ಹಾಕುತ್ತಿದ್ದಾರೆ.ಧರ್ಮೇಂದ್ರ ಅವರು ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ. ''''''''ಶೋಲೆ'''''''' ಚಿತ್ರದ ವೀರು ಮಾತ್ರವಲ್ಲದೆ ಅವರು ನಿರ್ವಹಿಸಿದ ಪ್ರತಿ ಪಾತ್ರಕ್ಕೂ ಜೀವ ತುಂಬಿದ್ದಾರೆ. ಅವರ ನಟನೆಯನ್ನು ಅಭಿಮಾನಿಗಳು ಎಂದಿಗೂ ಮರೆಯುವುದಿಲ್ಲ....ಬಾಕ್ಸ್ ...
ವೀರು ಪಾತ್ರಕ್ಕಾಗಿ ಧರ್ಮೆಂದ್ರಗೆ 1.5 ಲಕ್ಷ ಸಂಭಾವನೆ''''''''ಶೋಲೆ'''''''' ಚಿತ್ರದ ವೀರು ಪಾತ್ರದಲ್ಲಿ ನಟಿಸಲು ಧರ್ಮೆಂದ್ರ ಮೊದಲು ಹಿಂದೇಟು ಹಾಕಿದ್ದರು. ನಿರ್ದೇಶಕ ರಮೇಶ್ ಸಿಪ್ಪಿ ಅವರೊಂದಿಗೆ ಮಾತನಾಡಿದಾಗ, ಧರ್ಮೆಂದ್ರ ಅವರು ಥಾಕೂರ್ ಅಥವಾ ಗಬ್ಬರ್ ಸಿಂಗ್ ಪಾತ್ರಗಳಲ್ಲಿ ಅಭಿನಯಿಸಲು ಆಸಕ್ತಿ ತೋರಿಸಿದ್ದರು. ಆದರೆ, ಸಿಪ್ಪಿ ಅವರು ವೀರುನ ಪಾತ್ರಕ್ಕೆ ಬಸಂತಿ (ಹೇಮಾ ಮಾಲಿನಿ) ಪಾತ್ರವನ್ನು ಜೋಡಿಸಲಾಗುವುದು ಎಂದು ತಿಳಿಸಿದಾಗ, ಧರ್ಮೆಂದ್ರ ಒಪ್ಪಿಗೆ ನೀಡಿದರು. ಈ ಚಿತ್ರದಲ್ಲಿ ಧರ್ಮೆಂದ್ರ ಅವರು ಅತಿ ಹೆಚ್ಚು ಸಂಭಾವನೆ ಪಡೆದ ನಟರಾಗಿದ್ದರು.
ಈ ಚಿತ್ರದಲ್ಲಿ ಧರ್ಮೆಂದ್ರ 1.5 ಲಕ್ಷ ಸಂಭಾವನೆ ಪಡೆದರೆ, ಅಮಿತಾಭ್ ಬಚ್ಚನ್ 1 ಲಕ್ಷ, ಸಂಜೀವ್ ಕುಮಾರ್ 1.25 ಲಕ್ಷ ಮತ್ತು ಅಮ್ಜದ್ ಖಾನ್ 50ಸಾವಿರ ಪಡೆದರು. ಹೇಮಾ ಮಾಲಿನಿ 75 ಸಾವಿರ ಪಡೆದರೆ, ಜಯಾ ಬಚ್ಚನ್ 35 ಸಾವಿರ ಪಡೆದರು. ಮತ್ತೊಂದು ಅಚ್ಚರಿಯ ಸಂಗತಿ ಏನೆಂದರೆ ಧರ್ಮೆಂದ್ರ ಅವರೇ ಅಮಿತಾಭ್ ಬಚ್ಚನ್ ಅವರನ್ನು ಈ ಚಿತ್ರಕ್ಕೆ ಶಿಫಾರಸು ಮಾಡಿದ್ದರು.--------
24ಕೆಆರ್ ಎಂಎನ್ 4,5,6.ಜೆಪಿಜಿ4.ರಾಮನಗರದ ರಾಮದೇವರ ಬೆಟ್ಟದಲ್ಲಿ ಚಿತ್ರೀಕರಣಗೊಂಡ ಶೋಲೆ ಸಿನಿಮಾದ ದೃಶ್ಯಗಳಲ್ಲಿ ಧರ್ಮೆಂದ್ರ ಅವರೊಂದಿಗೆ ಅಮಿತಾಭ್ ಬಚ್ಚನ್ ಮತ್ತು ಇತರೆ ಕಲಾವಿದರು ಇರುವುದು.
5.ಶೋಲೆ ಸಿನಿಮಾದ ದೃಶ್ಯಗಳಲ್ಲಿ ಧರ್ಮೆಂದ್ರ ಅವರೊಂದಿಗೆ ಅಮಿತಾಭ್ ಬಚ್ಚನ್6.ಶೋಲೆ ಸಿನಿಮಾ ಚಿತ್ರೀಕರಣ ವೇಳೆ ನಟರಾದ ಅಮಿತಾಭ್ ಬಚ್ಚನ್ ,ಧರ್ಮೆಂದ್ರ, ಸಂಜೀವ್ ಕುಮಾರ್, ಅಮ್ಜದ್ ಖಾನ್
;Resize=(128,128))