ಸಾರಾಂಶ
ಮಹಿಳೆಯರ ನೆಚ್ಚಿನ ವರಮಹಾಲಕ್ಷ್ಮಿ ಹಬ್ಬಕ್ಕೆ ಎಲ್ಲಡೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮನೆಯಲ್ಲೇ ಸ್ವಚ್ಛಗೊಳಿಸಿರುವ ಮಹಿಳೆಯರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ: ಮಹಿಳೆಯರ ನೆಚ್ಚಿನ ವರಮಹಾಲಕ್ಷ್ಮಿ ಹಬ್ಬಕ್ಕೆ ಎಲ್ಲಡೆ ಸಿದ್ಧತೆ ಜೋರಾಗಿ ನಡೆಯುತ್ತಿದೆ. ಮನೆಯಲ್ಲೇ ಸ್ವಚ್ಛಗೊಳಿಸಿರುವ ಮಹಿಳೆಯರು ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಹಬ್ಬದ ಹಿನ್ನೆಲೆಯಲ್ಲಿ ಸಾಮಗ್ರಿ ಖರೀದಿಸಲು ಗುರುವಾರವೇ ಮಾರುಕಟ್ಟೆಗೆ ಮಹಿಳೆಯರು ದಾಂಗುಡಿ ಇಟ್ಟಿದ್ದು, ಖರೀದಿ ಭರಾಟೆ ಜೋರಾಗಿತ್ತು.ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಹೂ, ತರಕಾರಿ, ಹಣ್ಣುಗಳ ಬೆಲೆಯಲ್ಲಿ ಏರಿಕೆ ಕಂಡರೂ ಗ್ರಾಹಕರ ಖರೀದಿಗೆ ಕೊರತೆ ಇಲ್ಲ. ಇನ್ನೂ ಕಳೆದ ವಾರಕ್ಕೆ ಹೋಲಿಸಿದರೆ ಹೂ, ತರಕಾರಿ, ಹಣ್ಣುಗಳ ಬೆಲೆ ಗಗನಕ್ಕೆರಿವೆ. ಬೆಲೆ ಏರಿಕೆ ನಡೆಯೂ ಖರೀದಿ ಜೋರಾಗಿತ್ತು. ಪಟ್ಟಣದ ಹಲವೆಡೆ ಬೀದಿ ಬದಿಗಳಲ್ಲಿ ಗುರುವಾರ ವ್ಯಾಪಾರದ ಭರಾಟೆ ಜೋರಾಗಿಯೇ ಜರುಗಿತು. ಗಾಂಧಿಬಜಾರ್, ದುರ್ಗಿಗುಡಿ, ಹೂವಿನ ಮಾರುಕಟ್ಟೆ ಸೇರಿದಂತೆ ಹಲವೆಡೆ ಜನರು ಹಬ್ಬಕ್ಕೆ ಸಾಮಗ್ರಿ ಖರೀದಿಸಲು ಮುಗಿಬಿದ್ದರು.ವರಲಕ್ಷ್ಮಿ ಪೂಜೆಗೆ ಅವಶ್ಯ ಇರುವ ಮಹಾಲಕ್ಷ್ಮಿ ಆಕರ್ಷಕ ಮೂರ್ತಿಗಳು ಜನರನ್ನು ಸೆಳೆಯುತ್ತಿದ್ದವು. ಮಹಿಳೆಯರು, ಯುವತಿಯರು ವರಮಹಾಲಕ್ಷ್ಮೀ ಹಬ್ಬಕ್ಕಾಗಿ ಹೊಸ ಸೀರೆ ಬಟ್ಟೆ, ಬಳೆ ತೊಡಗಿಸಿಕೊಳ್ಳುತ್ತಿದ್ದು, ಪೂಜಾ ಸಾಮಗ್ರಿ ಖರೀದಿ ಮಾಡಿದರು.