ದೀಪಾವಳಿ ಹಬ್ಬಕ್ಕೆ ಖರೀದಿ ಬಲು ಜೋರು

| Published : Nov 01 2024, 12:19 AM IST

ಸಾರಾಂಶ

ದೀಪಾವಳಿಯ ಆಚರಣೆಗೆ ನಗರದ ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳು ಬಾಳೇಕಂದು, ಮಾವಿನಸೊಪ್ಪು, ತರಕಾರಿ ಇತ್ಯಾದಿ ಅಗತ್ಯ ವಸ್ತುಗಳನ್ನು ನಾಗರಿಕರು ಸಡಗರದಿಂದ ಖರೀದಿಸಿದರು. ತಾಲೂಕಿನ ಜನತೆದೀಪಾವಳಿ ಹಬ್ಬದ ನರಕ ಚತುದರ್ಶಿ ಹಾಗೂ ಬಲಿಪಾಡ್ಯಮಿ ಹಬ್ಬಗಳನ್ನು ಸಂಭ್ರಮದಲ್ಲಿ ಆಚರಿಸಲು ಅಗತ್ಯ ವಸ್ತುಗಳ ಕೊಳ್ಳಲು ನಾಗರಿಕರು ಇಂದು ಮಾರುಕಟ್ಟೆಗೆ ಲಗ್ಗೆ ಹಾಕಿದ್ದರು.

ಅರಸೀಕೆರೆ: ದೀಪಾವಳಿಯ ಆಚರಣೆಗೆ ನಗರದ ಮಾರುಕಟ್ಟೆಯಲ್ಲಿ ಹೂವು, ಹಣ್ಣುಗಳು ಬಾಳೇಕಂದು, ಮಾವಿನಸೊಪ್ಪು, ತರಕಾರಿ ಇತ್ಯಾದಿ ಅಗತ್ಯ ವಸ್ತುಗಳನ್ನು ನಾಗರಿಕರು ಸಡಗರದಿಂದ ಖರೀದಿಸಿದರು.

ತಾಲೂಕಿನ ಜನತೆದೀಪಾವಳಿ ಹಬ್ಬದ ನರಕ ಚತುದರ್ಶಿ ಹಾಗೂ ಬಲಿಪಾಡ್ಯಮಿ ಹಬ್ಬಗಳನ್ನು ಸಂಭ್ರಮದಲ್ಲಿ ಆಚರಿಸಲು ಅಗತ್ಯ ವಸ್ತುಗಳ ಕೊಳ್ಳಲು ನಾಗರಿಕರು ಇಂದು ಮಾರುಕಟ್ಟೆಗೆ ಲಗ್ಗೆ ಹಾಕಿದ್ದರು. ದೀಪಾವಳಿ ಹಬ್ಬದ ಸಂಭ್ರಮದ ಪರಿಸ್ಥಿತಿಯಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಮಾಮೂಲಿಗಿಂತ ಸ್ವಲ್ಪ ಮಟ್ಟಿಗೆ ಏರಿಕೆಯಾಗಿದ್ದು, ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಮುಗಿ ಬೀಳುತ್ತಿದ್ದ ದೃಶ್ಯಕಂಡು ಬಂದಿತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಅಷ್ಟು ಪ್ರಮಾಣದಲ್ಲಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಏರಿಕೆ ಆಗದಿರುವುದು ಜನ ಸಾಮಾನ್ಯರಿಗೆ ಪಾಲಿಗೆ ತೃಪ್ತಿ ತಂದಿದೆ.