ಸಾರಾಂಶ
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ದಿನೇಶ್ ಮಾಹಿತಿ
ಕನ್ನಡಪ್ರಭ ವಾರ್ತೆ, ಬೀರೂರುಜಿಲ್ಲಾ ಮತ್ತು ತಾಲೂಕು ತಂಬಾಕು ನಿಯಂತ್ರಣ ಕೋಶ ತನಿಖಾ ದಳದ ಅಧಿಕಾರಿಗಳ ತಂಡ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿ ಮಾಲೀಕರಿಗೆ ಬಿಸಿ ಮುಟ್ಟಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆಯಿತು.ಪತ್ರಿಕೆಯೊಂದಿಗೆ ಮಾತನಾಡಿದ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಲಹೆಗಾರ ದಿನೇಶ್, ಕಳೆದ ಹಲವು ದಿನಗಳಿಂದ ಜಿಲ್ಲಾದ್ಯಂತ ತಂಬಾಕು ಮಾರುವ ಅಂಗಡಿಗಳ ಮೇಲೆ ದಾಳಿ ನಡೆಸಲಾಗುತ್ತಿದ್ದು, ಹಲವರಿಗೆ ಮಾರಾಟ ಮಾಡದಂತೆ ಎಚ್ಚರಿಕೆ ನೀಡಲಾಗಿದೆ. ತಂಬಾಕು ಭಾರತದ ಎಲ್ಲ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ದೊಡ್ಡ ಅಪಾಯವಾಗಿದೆ. ಹೃದಯ ಸಂಬಂಧಿ, ಉಸಿರಾಟದ ಕಾಯಿಲೆ ಮತ್ತು ಕ್ಯಾನ್ಸರ್ ಸೇರಿದಂತೆ ಹೆಚ್ಚಿನ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬೆಳವಣಿಗೆಗೆ ಇದು ಅಪಾಯಕಾರಿ ಅಂಶ. ೨೦೧೬-೧೭ ರಲ್ಲಿ ನಡೆಸಿದ ಅಧ್ಯಯನದಲ್ಲಿ ಭಾರತದಲ್ಲಿ, ಎಲ್ಲಾ ವಯಸ್ಕರಲ್ಲಿ ಶೇ.೭% ಧೂಮಪಾನ ಮಾಡುತ್ತಿದ್ದರೆ, ಎಲ್ಲಾ ವಯಸ್ಕರಲ್ಲಿ ೨೧.೪ರಷ್ಟು % ಧೂಮಪಾನವಿಲ್ಲದ ತಂಬಾಕನ್ನು ಬಳಸುತ್ತಾರೆ. ತಂಬಾಕು ಬಳಸುತ್ತಿರುವ ವ್ಯಕ್ತಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮಾತ್ರವಲ್ಲದೆ ( ಸೆಕೆಂಡ್ ಹ್ಯಾಂಡ್ ಸ್ಮೂಕ್) ಪರೋಕ್ಷ ಧೂಮಪಾನ ಮೂಲಕ ಸುತ್ತಮುತ್ತಲಿನ ಜನರ ಮೇಲೂ ಪರಿಣಾಮ ಬೀರುತ್ತದೆ. ಇದರಿಂದ ನಾಗರಿಕರು ಎಚ್ಚೆತ್ತು ಕೊಳ್ಳಬೇಕು ಎಂದರು.ಪುರಸಭಾ ಹಿರಿಯ ಆರೋಗ್ಯ ನೀರೀಕ್ಷಕ ವೈ.ಎಂ. ಲಕ್ಷ್ಮಣ್ ಮಾತನಾಡಿ ೨೦೦೩ ರ ಕೋಟ್ಪಾ ಕಾಯ್ದೆ ಅಡಿ ಪಟ್ಟಣಾದ್ಯಂತ ದಾಳಿ ನಡೆಸಿ ಒಟ್ಟು ೧೯ ಪ್ರಕರಣ ದಾಖಲಿಸಿ ೧೮೫೦/- ರೂಗಳ ತಂಡ ವಿಧಿಸಲಾಯಿತು. ನಾಗರಿಕರು ಇಂತಹ ದುಶ್ಚಟ ಗಳಿಂದ ದೂರವಿದ್ದು ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಪುರಸಭೆ ನಿಮ್ಮೆಲ್ಲರ ಸಹಕಾರಕ್ಕೆ ಇರುತ್ತದೆ.ಅಕ್ರಮವಾಗಿ ತಂಬಾಕು ಮಾರುವವರ ಬಗ್ಗೆ ಮಾಹಿತಿ ನೀಡಿದಲ್ಲಿ ಅಂತಹವರ ಹೆಸರನ್ನು ಗೌಪ್ಯವಾಗಿಟ್ಟು ಕಾನೂನು ಕ್ರಮ ಜರುಗಿಸ ಲಾಗುತ್ತದೆ. ಸಾರ್ವಜನಿಕರ ಸಹಕಾರ ಅತ್ಯಗತ್ಯ ಎಂದರು. ಈ ಕಾರ್ಯಾಚರಣೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ದಿನೇಶ ಆರ್. ಸಮಾಜ ಕಾರ್ಯಕರ್ತ ರಾಘವೇಂದ್ರ ಎಮ್., ತಾಲೂಕು ಆರೋಗ್ಯ ಇಲಾಖೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಮತಾ, ಬೀರೂರು ಪೊಲೀಸ್ ಠಾಣೆಯ ಮಹಿಳಾ ಪೇದೆ ಆಶಾ ಉಪಸ್ಥಿತರಿದ್ದರು.೨೬ ಬೀರೂರು ೧ಬೀರೂರು ಪಟ್ಟಣದಲ್ಲಿ ಶುಕ್ರವಾರ ಜಿಲ್ಲಾ ಮತ್ತು ತಾಲ್ಲೂಕು ತಂಬಾಕು ನಿಯಂತ್ರಣ ಕೋಶ ತನಿಖಾ ದಳದ ಅಧಿಕಾರಿಗಳ ತಂಡ ಅಕ್ರಮವಾಗಿ ತಂಬಾಕು ಮಾರಾಟ ಮಾಡುತ್ತಿದ್ದ ಪಟ್ಟಣದ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಿ ದಂಡ ವಿಧಿಸಿತು. ದಿನೇಶ ಆರ್. ,ರಾಘವೇಂದ್ರ ಎಮ್., ತಾಲೂಕು ಆರೋಗ್ಯ ಇಲಾಖೆ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮಮತಾ, ವೈ.ಎಂ.ಲಕ್ಷ್ಮಣ್ ಇದ್ದರು.