ಕರಿಘಟ್ಟ ಬೆಟ್ಟದಲ್ಲಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಶ್ರಮದಾನ

| Published : Apr 11 2025, 12:32 AM IST

ಕರಿಘಟ್ಟ ಬೆಟ್ಟದಲ್ಲಿ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಶ್ರಮದಾನ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಪದವಿ ಕಾಲೇಜಿನ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶ್ರಮದಾನ ನಡೆಸಿ ಕರಿಘಟ್ಟ ಬೆಟ್ಟದ ವ್ಯೂ ಪಾಯಿಂಟ್ ಗುಡ್ಡದಲ್ಲಿ ನೆಟ್ಟಿರುವ ಸುಮಾರು 300ಕ್ಕೂ ಹೆಚ್ಚು ಆಲ, ಅರಳಿ ಬೇವು, ಹಿಪ್ಪೇ, ಹೊಂಗೆ, ಗೋಣಿ, ಬೇಲಾ, ಬೆಟ್ಟದ ನಿಲ್ಲಿ ಗಿಡ, ತಪಸಿ, ನೇರಳೆ ಕಾಡು ಮಾವು ಸೇರಿದಂತೆ ಇತರೆ ಗಿಡಗಳ ಸುತ್ತ ಬೆಳೆದಿದ್ದ ಒಣ ಹುಲ್ಲು ತೆಗೆದು ಪಾತಿ ಮಾಡಿದರು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ತಾಲೂಕಿನ ಕರಿಘಟ್ಟ ಬೆಟ್ಟದಲ್ಲಿ ಮೈಸೂರಿನ ಸಿದ್ದಾರ್ಥ ನಗರ ಸರ್ಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ಗಿಡಗಳಿಗೆ ಫಾತಿ ಮಾಡುವ ಮೂಲಕ ಶ್ರಮದಾನ ನಡೆಯಿತು.

ಪರಿಸರ ರಮೇಶ್ ಮಾರ್ಗದರ್ಶನದಲ್ಲಿ ಸರ್ಕಾರಿ ಪದವಿ ಕಾಲೇಜಿನ ಸುಮಾರು 80ಕ್ಕೂ ಹೆಚ್ಚು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶ್ರಮದಾನ ನಡೆಸಿ ಕರಿಘಟ್ಟ ಬೆಟ್ಟದ ವ್ಯೂ ಪಾಯಿಂಟ್ ಗುಡ್ಡದಲ್ಲಿ ನೆಟ್ಟಿರುವ ಸುಮಾರು 300ಕ್ಕೂ ಹೆಚ್ಚು ಆಲ, ಅರಳಿ ಬೇವು, ಹಿಪ್ಪೇ, ಹೊಂಗೆ, ಗೋಣಿ, ಬೇಲಾ, ಬೆಟ್ಟದ ನಿಲ್ಲಿ ಗಿಡ, ತಪಸಿ, ನೇರಳೆ ಕಾಡು ಮಾವು ಸೇರಿದಂತೆ ಇತರೆ ಗಿಡಗಳ ಸುತ್ತ ಬೆಳೆದಿದ್ದ ಒಣ ಹುಲ್ಲು ತೆಗೆದು ಪಾತಿ ಮಾಡಿದರು.

ನಂತರ ವಿದ್ಯಾರ್ಥಿಗಳೊಂದಿಗೆ ಪರಿಸರ ಕಾಡು ವನ್ಯ ಜೀವಿಗಳ ಕುರಿತು ಸಂವಾದ ನಡೆಸಲಾಯಿತು. ಮೈಸೂರಿನ ಮುಖ್ಯಸ್ಥ ಪ್ರೊಫೆಸರ್ ಪ್ರಸನ್ನ ಕುಮಾರ್ ವಿದ್ಯಾರ್ಥಿಗಳಿಗೆ ಕಾಡು ವನ್ಯಜೀವಿಗಳಿಗೂ ಮನುಷ್ಯನಿಗೂ ಇರುವ ಸಂಬಂಧವನ್ನು ಸವಿವರವಾಗಿ ತಿಳಿಸಿ ಅರಿವು ಮೂಡಿಸಿದರು.

ಈ ವೇಳೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಮಾಯದೇವಿ, ಅರಣ್ಯ ಅಧಿಕಾರಿ ವಿನೋದ್ ಗೌಡ, ಪಾರ್ವತಿ ಎಂ.ಶ್ರೀ ನಾಯಕ್, ಸುಪ್ರಿಯಾ, ಪುನೀತ್, ಲೋಕೇಶ್ ಕಲ್ಕುಣಿ ಸೇರಿದಂತೆ ಇತರರು ಇದ್ದರು.ಏ.೧೨-೧೩ರಂದು ಬೂದನೂರು ಕಬಡ್ಡಿ ಉತ್ಸವ

ಕನ್ನಡಪ್ರಭ ವಾರ್ತೆ ಮಂಡ್ಯ

ಕಸಬಾ ಹೋಬಳಿಯ ಹೊಸಬದನೂರು ಗ್ರಾಮದಲ್ಲಿ ಏ.೧೨ ಹಾಗೂ ೧೩ರಂದು ಮೈಸೂರು ವಿಭಾಗಿಯ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿಯ ಬೂದನೂರು ಕಬಡ್ಡಿ ಉತ್ಸವವನ್ನು ಗ್ರಾಮದ ಶ್ರೀಕಾಶಿ ವಿಶ್ವನಾಥ ದೇವಸ್ಥಾನದ ಆವರಣದಲ್ಲಿ ಆಯೋಜಿಸಲಾಗಿದೆ.

ಏ.೧೨ರಂದು ಶನಿವಾರ ಸಂಜೆ ೪ ಗಂಟೆಗೆ ಪಂದ್ಯಾವಳಿಯನ್ನು ಶಾಸಕ ರವಿಕುಮಾರ್‌ಗೌಡ ಉದ್ಘಾಟಿಸಲಿದ್ದು, ಗ್ರಾಮದ ಮುಖಂಡರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಮನ್‌ಮುಲ್ ನಿರ್ದೇಶಕ ಶಿವಕುಮಾರ್, ಜಿಪಂ ಮಾಜಿ ಸದಸ್ಯ ಎಚ್.ಎನ್.ಯೋಗೇಶ್, ಸಮಾಜ ಸೇವಕ ಕೆ.ಕೆ.ರಾಧಾಕೃಷ್ಣ ಅವರು ಪಾಲ್ಗೊಳ್ಳಲಿದ್ದಾರೆ.

ಪಂದ್ಯಾವಳಿಗೆ ೧೦೦೧ ರು.ಗಳ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಪ್ರಥಮ ಬಹುಮಾನ ೩೩,೩೦೦ ರು., ದ್ವಿತೀಯ ೨೨,೨೦೦ ತೃತೀಯ ೧೩,೩೦೦ ಹಾಗೂ ಚತುರ್ಥ ೭,೭೦೦ ರು.ಗಳ ಬಹುಮಾನ ಘೋಷಿಸಲಾಗಿದೆ.

ಆಸಕ್ತ ತಂಡಗಳು ಮಂಜು: ೯೭೪೦೭೩೫೯೯, ಚೈತ್ರೇಶ್: ೯೯೬೪೦೦೦೫೩೮, ಸುನಿಲ್: ೯೮೮೬೬೫೨೧೩೩ ಇವರನ್ನು ಸಂಪರ್ಕಿಸಲು ಕೋರಲಾಗಿದೆ.