ಸಾರಾಂಶ
ಶ್ರೀ ಕೃಷ್ಣ ತನ್ನ ನಡೆ-ನುಡಿ ಮೂಲಕ ಲೋಕಕ್ಕೆ ಮನುಷ್ಯತ್ವದ ಮಹತ್ವ ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.
ತುಮಕೂರು: ಶ್ರೀ ಕೃಷ್ಣ ತನ್ನ ನಡೆ-ನುಡಿ ಮೂಲಕ ಲೋಕಕ್ಕೆ ಮನುಷ್ಯತ್ವದ ಮಹತ್ವ ಸಾರಿದ್ದಾರೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಎನ್.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.ನಗರದ ಡಾ. ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ಗೊಲ್ಲರ(ಯಾದವ) ಸಂಘದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶ್ರೀ ಕೃಷ್ಣ ಅನ್ಯಾಯ-ಅಧರ್ಮದ ವಿರುದ್ಧ ಆಯುಧಗಳಿಲ್ಲದೆ ಹೋರಾಡಿ ನ್ಯಾಯವನ್ನು ಒದಗಿಸಿದ್ದಾರೆ. ಭಗವದ್ಗೀತೆ ಮೂಲಕ ಮನುಷ್ಯ ಜೀವನದ ಪ್ರತಿ ಹಂತಗಳನ್ನೂ ವಿವರಿಸುವ ಮೂಲಕ ಸದಾ ಮನುಷ್ಯರಿಗೋಸ್ಕರ ಬದುಕಿದ ಶ್ರೀ ಕೃಷ್ಣನ ತತ್ವಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ. ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಶ್ರೀ ಕೃಷ್ಣನ ಭಕ್ತಿ, ಇತಿಹಾಸ, ಆದರ್ಶಗಳು ಇಂದಿನ ಸಮಾಜಕ್ಕೆ ಅಗತ್ಯ ಎಂದು ಹೇಳಿದರು. ಉಪ ತಹಶೀಲ್ದಾರ್ ಕಮಲಮ್ಮ, ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಜಿಲ್ಲಾ ಗೊಲ್ಲರ ಸಂಘ ಅಧ್ಯಕ್ಷ ಜಿ. ಚಂದ್ರಶೇಖರ ಗೌಡ, ಜಿಲ್ಲಾ ಗೊಲ್ಲರ ಸಂಘ ಖಜಾಂಚಿ ಚಿಕ್ಕೇಗೌಡ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪ್ರೇಮಾ ಮಹಾಲಿಂಗಪ್ಪ, ಪ್ರಾಂಶುಪಾಲರು ಮತ್ತು ಕಲಾವಿದರಾದ ಅಕ್ಕಮ್ಮ, ಶ್ರೀ ಕೃಷ್ಣ ಕಲಾ ಸಂಘ ಅಧ್ಯಕ್ಷ ಚಿಕ್ಕಪ್ಪಯ, ಮಾದ್ಯಮ ವಕ್ತಾರ ನಿಕೇತ್ ರಾಜ್ ಮೌರ್ಯ, ಜಿಲ್ಲಾ ಉಪಾಧ್ಯಕ್ಷ ಹನುಮಂತರಾಜು, ಜಿಲ್ಲಾ ಗೊಲ್ಲರ ಸಂಘದ ಪದಾಧಿಕಾರಿಗಳು ಸೇರಿದಂತೆ ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ಸಮುದಾಯದ ತುರುವೇಕೆರೆ ಮಚೇನಹಳ್ಳಿ ಕರಿಯಪ್ಪ, ತುಮಕೂರಿನ ಟಿ. ಮುರಳೀಕೃಷ್ಣಪ್ಪ, ಸಾಗರನಹಳ್ಳಿ ಜಯಮ್ಮ ಅವರನ್ನು ಸನ್ಮಾನಿಸಲಾಯಿತು.