ಕುಂದಾಪುರ: ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರ ಇದರ ಅಂಗಸಂಸ್ಥೆ ಶ್ರೀ ನಾರಾಯಣ ಗುರು ಶೈಕ್ಷಣಿಕ ಮತ್ತು ದತ್ತಿ ಸಂಸ್ಥೆಯ ಅಧ್ಯಕ್ಷರಾಗಿ ದಿ. ಸುರೇಶ್ ಎಸ್. ಪೂಜಾರಿ ಅವರ ಪುತ್ರ, ಉದ್ಯಮಿ ಭರತ್ ಎಸ್. ಪೂಜಾರಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿಯಾಗಿ ಆನಂದ್ ಪೂಜಾರಿ ಕೊಡೇರಿ, ಸದಸ್ಯರಾಗಿ ಅಶೋಕ್ ಪೂಜಾರಿ ಬೀಜಾಡಿ, ಯೋಗೇಶ್ ಪೂಜಾರಿ ಕೋಡಿ, ಪ್ರಕಾಶ್ ಕೆ. ಚರ್ಚ್‌ರೋಡ್, ಡಾ. ಪ್ರೇಮಾನಂದ್ ಆಯ್ಕೆಯಾದರು. ನೂತನ ಅಧ್ಯಕ್ಷ ಭರತ್ ಎಸ್. ಪೂಜಾರಿ ಮಾತನಾಡಿ, ಬಿಲ್ಲವ ಸಮಾಜದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಪ್ರೋತ್ಸಾಹಿಸುವುದಾಗಿ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ಬಿಜಾಡಿ ವಹಿಸಿದ್ದರು. ಸಂಸ್ಥೆ ಉಪಾಧ್ಯಕ್ಷರಾದ ರಾಮ ಪೂಜಾರಿ ಮುಲ್ಲಿಮನೆ, ಮೋಹನ್ ಪೂಜಾರಿ ಉಪ್ಪುಂದ, ಆಡಳಿತ ಮಂಡಳಿ ಸದಸ್ಯರಾದ ಶಂಕರ್ ಪೂಜಾರಿ ಕೋಡಿ, ಕುಪ್ಪಯ್ಯ ಬಿಲ್ಲವ, ಯೋಗೇಶ್ ಪೂಜಾರಿ ಕೋಡಿ, ಸುನಿಲ್ ಕೋಡಿ, ವಿನಯ ಬನ್ನಾಡಿ, ರಾಜು ಮೂಡ್ಲಕಟ್ಟೆ, ಶೇಖರ್ ಕೋಟ್ಯಾನ್, ಪ್ರಕಾಶ್ ಕೆ., ಡಾ. ಪ್ರೇಮಾನಂದ ಇದ್ದರು. ಕಾರ್ಯದರ್ಶಿ ಯೋಗೇಶ್ ಪೂಜಾರಿ ವಂದಿಸಿದರು.