ಬ್ರಹ್ಮಾವರಕ್ಕೆ ಬಂದ ‘ಶ್ರೀರಾಮ ದಿಗ್ವಿಜಯ ರಥ’

| Published : Nov 16 2025, 03:00 AM IST

ಸಾರಾಂಶ

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ, ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯ ಸ್ವಾಮೀಜಿಯವರ ಮಠಪರಂಪರೆಯ 550ನೇ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲಾಗಿರುವ ‘ಶ್ರೀರಾಮ ದಿಗ್ವಿಜಯ ರಥ’ಯಾತ್ರೆಯು ಬದರಿ ಕ್ಷೇತ್ರದಿಂದ ಆರಂಭಗೊಂಡು ವಾರಣಾಸಿ, ಅಯೋಧ್ಯೆ ಮುಂತಾದ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ, ನ.14ರಂದು ಬ್ರಹ್ಮಾವರಕ್ಕೆ ಆಗಮಿಸಿತು.

ಗೋಕರ್ಣ ಪರ್ತಗಾಳಿ ಮಠದ 550ನೇ ವರ್ಷಾಚರಣೆಯ ಪ್ರಯುಕ್ತ ರಥಯಾತ್ರೆ

ಕನ್ನಡಪ್ರಭ ವಾರ್ತೆ ಬ್ರಹ್ಮಾವರ

ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ, ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ವಡೆಯ ಸ್ವಾಮೀಜಿಯವರ ಮಠಪರಂಪರೆಯ 550ನೇ ವರ್ಷಾಚರಣೆಯ ಪ್ರಯುಕ್ತ ಆಯೋಜಿಸಲಾಗಿರುವ ‘ಶ್ರೀರಾಮ ದಿಗ್ವಿಜಯ ರಥ’ಯಾತ್ರೆಯು ಬದರಿ ಕ್ಷೇತ್ರದಿಂದ ಆರಂಭಗೊಂಡು ವಾರಣಾಸಿ, ಅಯೋಧ್ಯೆ ಮುಂತಾದ ವಿವಿಧ ಪುಣ್ಯಕ್ಷೇತ್ರಗಳಿಗೆ ಭೇಟಿ ನೀಡಿ, ನ.14ರಂದು ಬ್ರಹ್ಮಾವರಕ್ಕೆ ಆಗಮಿಸಿತು.ಈ ಸಂದರ್ಭ ‘ಶ್ರೀರಾಮ ದಿಗ್ವಿಜಯ ರಥ’ವನ್ನು ಶ್ರೀಮಠದ ಭಕ್ತರು ಪೂರ್ಣಕುಂಭ ಸ್ವಾಗತಿಸಿದರು. ನಂತರ ಮಂಗಳವಾದ್ಯ, ಚಂಡೆ ವಾದನದೊಂದಿಗೆ ಇಲ್ಲಿನ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಮೆರವಣಗೆಯಲ್ಲಿ ಕರೆ ತರಲಾಯಿತು.ನಂತರ ದೇವಾಲಯದ ಶ್ರೀ ದೇವರ ಸನ್ನಿಧಿಯಲ್ಲಿ ಸಾಮೂಹಿಕ ಪ್ರಾರ್ಥನೆ, ಧಾರ್ಮಿಕ ಕಾರ್ಯಗಳನ್ನು ಪ್ರಧಾನ ಅರ್ಚಕ ಬಿ. ಪಾಂಡುರಂಗ ಭಟ್ ಮಾರ್ಗದರ್ಶನದಲ್ಲಿ ರಾಮಕೃಷ್ಣ ಭಟ್ ಮತ್ತು ಇತರ ಅರ್ಚಕವೃಂದವರು ನೆಡೆಸಿಕೊಟ್ಟರು. ಶ್ರೀ ರಾಮದೇವರಿಗೆ ವಿಶೇಷ ಅಲಂಕಾರ, ಶ್ರೀ ರಾಮನಾಮ ಪಠಣ, ಮಹಾಪೂಜೆ, ಪ್ರಸಾದ ವಿತರಣೆ ಜರುಗಿತು.ಈ ಕಾರ್ಯಕ್ರಮದಲ್ಲಿ ದೇವಳದ ಆಡಳಿತ ಮೊಕ್ತೇಸರರಾದ ಕೆ. ನರೇಂದ್ರ ಪೈ, ಬಿ.ಪಿ. ಗೋಪಾಲಕೃಷ್ಣ ಪೈ, ಸತ್ಯನಾಥ ಪೈ, ಪುರೋಷತ್ತಮ ಪೈ ಹಾಗೂ ರಾಮ ನಾಮ ಜಪ ಅಭಿಯಾನ ಸಮಿತಿ ಸಂಚಾಲಕ ಬಿ.ಪಿ. ಮೋಹನದಾಸ ಪೈ, ಸಮಿತಿಯ ಪದಾಧಿಕಾರಿಗಳು, ಜಿ.ಎಸ್.ಬಿ. ಮಹಿಳಾ ಮಂಡಳಿ ಮತ್ತು ಯುವಕ ಮಂಡಳಿಯ ಸದಸ್ಯರು ನೂರಾರು ಸಮಾಜಬಾಂಧವರು ಉಪಸ್ಥಿತರಿದ್ದರು.