ದೇಶದ ಏಕತೆಗೆ ಹೋರಾಡಿದ ಶ್ಯಾಮ ಪ್ರಸಾದ್‌ ಮುಖರ್ಜಿ

| Published : Jul 07 2024, 01:15 AM IST

ಸಾರಾಂಶ

ಕಾಶ್ಮೀರ ರಕ್ಷಣಾ ಸತ್ಯಾಗ್ರಹದ ಮುಂದಾಳತ್ವವನ್ನು ವಹಿಸಿಕೊಂಡು 1950ರ ಅವಧಿಯಲ್ಲಿ 370ನೇ ವಿಧಿಯನ್ನು ಧಿಕ್ಕರಿಸಿ ಕಾಶ್ಮೀರ ಪ್ರವೇಶ ಮಾಡಿದ್ದಕ್ಕೆ ಅಂದಿನ ಪ್ರಧಾನಿ ನೆಹರು ಮತ್ತು ಷೇಕ್ ಅಬ್ದುಲ್ಲಾ ಸರ್ಕಾರ ಅವರನ್ನು ಗೃಹಬಂಧನಕ್ಕೆ ಒಳಪಡಿಸಿತ್ತು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇಶಭಕ್ತರಾಗಿದ್ದ ಶ್ಯಾಮ ಪ್ರಸಾದ್‌ ಮುಖರ್ಜಿ ಅವರು ಭಾರತದ ಅಭಿವೃದ್ಧಿಗೆ ಆದರ್ಶ ಪ್ರಾಯವಾದ ಕೊಡುಗೆಗಳನ್ನು ನೀಡಿದ್ದಾರೆ. ದೇಶದ ಏಕತೆಗಾಗಿ ದಿಟ್ಟತನದಿಂದ ಶ್ರಮಿಸಿದ್ದಾರೆ. ಅವರ ಚಿಂತನೆಗಳು, ಆದರ್ಶಗಳು ದೇಶದ ಲಕ್ಷಾಂತರ ಜನತೆಗೆ ಶಕ್ತಿ ತುಂಬಿವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಿ.ವಿ.ರಾಮಲಿಂಗಪ್ಪ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ ಶ್ಯಾಮ ಪ್ರಸಾದ್‌ ಮುಖರ್ಜಿ ಜಯಂತಿ ಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿ, ಕೈ ಜಾರಿ ಹೋಗುತ್ತಿದ್ದ ಕಾಶ್ಮೀರ ರಕ್ಷಣೆ ಮಾಡಿದ ಕೀರ್ತಿ ಮುಖರ್ಜಿ ಅವರಿಗೆ ಸಲ್ಲುತ್ತದೆ ಎಂದರು.

ಕಾಶ್ಮೀರ ರಕ್ಷಣಾ ಸತ್ಯಾಗ್ರಹದ ಮುಂದಾಳತ್ವವನ್ನು ವಹಿಸಿಕೊಂಡು 1950ರ ಅವಧಿಯಲ್ಲಿ 370ನೇ ವಿಧಿಯನ್ನು ಧಿಕ್ಕರಿಸಿ ಕಾಶ್ಮೀರ ಪ್ರವೇಶ ಮಾಡಿದ್ದಕ್ಕೆ ಅಂದಿನ ಪ್ರಧಾನಿ ನೆಹರು ಮತ್ತು ಷೇಕ್ ಅಬ್ದುಲ್ಲಾ ಸರ್ಕಾರ ಅವರನ್ನು ಗೃಹಬಂಧನಕ್ಕೆ ಒಳಪಡಿಸಿತು ಎಂದರು ಜಿಲ್ಲಾ ಕಾರ್ಯದರ್ಶಿ ಮುರಳಿಧರ್ ಮಾತನಾಡಿ, ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಅಖಂಡ ಭಾರತದ ಏಕತೆಗಾಗಿ ಹೋರಾಡಿದ ಧೀಮಂತ ನಾಯಕ. ಅವರ ಸಾಧನೆ ಮತ್ತು ದೇಶಸೇವೆಗಳನ್ನು ದೇಶ ಎಂದಿಗೂ ಮರೆಯುವುದಿಲ್ಲ. ರಾಜಕಾರಣಿ ಮತ್ತು ಶಿಕ್ಷಣ ತಜ್ಞರಾಗಿದ್ದರು. ಸ್ವಾತಂತ್ರ್ಯದ ನಂತರ, ಮುಖರ್ಜಿ ವಿರೋಧ ಪಕ್ಷದ ಪ್ರಮುಖ ಸದಸ್ಯರಾದರು. 1951 ರಲ್ಲಿ, ಅವರು ಭಾರತೀಯ ಜನಸಂಘವನ್ನು ಸ್ಥಾಪಿಸಿದರು ಎಂದರು.

ಈ ವೇಳೆ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧುಸೂಧನ್ ನಾರಾಯಣರೆಡ್ಡಿ,ಮಂಡಲಾಧ್ಯಕ್ಷರಾದ ಅನು ಆನಂದ್,ಸಂತೋಷ್,ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷ ಪ್ರೇಮಲೀಲಾವೆಂಕಟೇಶ್, ಮಹಿಳಾ ಮೋರ್ಚಾ ಜಿಲ್ಲಾ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್,ಉಪಾಧ್ಯಕ್ಷೆ ಸುಮಿತ್ರ,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಅಭಿಷೇಕ್, ಮತ್ತಿತರರು ಇದ್ದರು.