ಸಿದ್ಧಗಂಗಾ ಮಠದಲ್ಲಿ 10 ಸಾವಿರಕ್ಕೂ ಹೆಚ್ಚುಮಕ್ಕಳಿಗೆ ವಿದ್ಯಾದಾನ, ಅನ್ನದಾನ ಜ್ಞಾನದಾಸೋಹ ನೀಡಿ ವಿಶ್ವಮಟ್ಟದಲ್ಲಿ ಶ್ರೀ ಸಿದ್ಧಗಂಗಾ ಮಠ ಬೆಳದಿದೆ. ಇಂತಹ ಮಠವನ್ನು ಪಡೆದಿರುವುದು ನಮ್ಮ ಪುಣ್ಯ ಅವರ ನಡೆನುಡಿಗಳನ್ನು ಅಳವಡಿಸಿಕೊಂಡು ಅವರ ಸತ್ಕಾರ್ಯಗಳು ಸದಾ ಕಾಲ ಶಾಶ್ವತವಾಗಿರುತ್ತವೆ. ದುಶ್ಚಟ ದುರಭ್ಯಾಸಗಳಿಂದ ದೂರವುಳಿದು ಬದುಕಿನಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಬೇಕು. ಸಿದ್ಧಗಂಗಾ ಮಠ ಶಿಕ್ಷಣ ನೀಡಿ ಜ್ಞಾನಾರ್ಜನೆ ಬಿತ್ತುತ್ತಿವೆ. ಇಂದಿನ ಶ್ರೀಗಳು ಸಹ ಸಿದ್ಧಗಂಗಾ ಮಠದ ಭಕ್ತರ ಸಹಕಾರದಿಂದ ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿಗೆ ಶ್ರಮಿಸಿರುವುದು ಶ್ಲಾಘನೀಯ ಎಂದು ಮಧುಕರ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ರಾಮನಾಥಪುರ ಕಲಿಯುಗ ಬಸವಣ್ಣ, ನಡೆದಾಡುವ ದೇವರು, ತ್ರಿವಿಧ ದಾಸೋಹಿಗಳು ಅದ ಶ್ರೀ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮೀಜಿಗಳ ತತ್ವ, ಆದರ್ಶಗಳು ಅವರ ನಡೆಗಳನ್ನು ನಾವುಗಳು ಅಳವಡಿಸಿಕೊಂಡು ನಡೆಯೋಣ ಎಂದು ಶ್ರೀ ಸಿದ್ಧಗಂಗಾ ಫೈನಾನ್ಸ್ ಅಧ್ಯಕ್ಷರಾದ ಬಿ ಆರ್ ಮಧುಕರ್ ತಿಳಿಸಿದರು.ರಾಮನಾಥಪುರ ಹೋಬಳಿಯ ಬಸವಪಟ್ಟಣದ ಶ್ರೀ ಸಿದ್ಧಗಂಗಾ ಫೈನಾನ್ಸ್ ಕಚೇರಿ ಆವರಣದಲ್ಲಿ ಸಿದ್ಧಗಂಗಾ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆಯ ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ಧಗಂಗಾ ಮಠದಲ್ಲಿ 10 ಸಾವಿರಕ್ಕೂ ಹೆಚ್ಚುಮಕ್ಕಳಿಗೆ ವಿದ್ಯಾದಾನ, ಅನ್ನದಾನ ಜ್ಞಾನದಾಸೋಹ ನೀಡಿ ವಿಶ್ವಮಟ್ಟದಲ್ಲಿ ಶ್ರೀ ಸಿದ್ಧಗಂಗಾ ಮಠ ಬೆಳದಿದೆ. ಇಂತಹ ಮಠವನ್ನು ಪಡೆದಿರುವುದು ನಮ್ಮ ಪುಣ್ಯ ಅವರ ನಡೆನುಡಿಗಳನ್ನು ಅಳವಡಿಸಿಕೊಂಡು ಅವರ ಸತ್ಕಾರ್ಯಗಳು ಸದಾ ಕಾಲ ಶಾಶ್ವತವಾಗಿರುತ್ತವೆ. ದುಶ್ಚಟ ದುರಭ್ಯಾಸಗಳಿಂದ ದೂರವುಳಿದು ಬದುಕಿನಲ್ಲಿ ಶಾಂತಿ, ನೆಮ್ಮದಿ ಕಂಡುಕೊಳ್ಳಬೇಕು. ಸಿದ್ಧಗಂಗಾ ಮಠ ಶಿಕ್ಷಣ ನೀಡಿ ಜ್ಞಾನಾರ್ಜನೆ ಬಿತ್ತುತ್ತಿವೆ. ಇಂದಿನ ಶ್ರೀಗಳು ಸಹ ಸಿದ್ಧಗಂಗಾ ಮಠದ ಭಕ್ತರ ಸಹಕಾರದಿಂದ ದೂರದೃಷ್ಟಿ ಇಟ್ಟುಕೊಂಡು ಅಭಿವೃದ್ಧಿಗೆ ಶ್ರಮಿಸಿರುವುದು ಶ್ಲಾಘನೀಯ ಎಂದು ಮಧುಕರ್ ತಿಳಿಸಿದರು. ಈ ಸಂದರ್ಭದಲ್ಲಿ ಶ್ರೀ ಸಿದ್ಧಗಂಗಾ ಫೈನಾನ್ಸ್ ಸದಸ್ಯರಾದ ಅಂಬರೀಶ್, ಎಂ. ಎನ್. ಕುಮಾರಸ್ವಾಮಿ, ಮನು, ಕೆಂಡಗಣ್ಣ, ವಿರೂಪಾಕ್ಷ, ಮಹದೇವ, ಕುಮಾರಸ್ವಾಮಿ ಗೌಡ, ಸಿದ್ದರಾಜು, ಪ್ರಕಾಶ್, ಮಧುಕರ್, ಸುಮ್ಮಖ ಶೆಟ್ಟರು ಇದ್ದರು.