ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಸಿದ್ದಗಂಗಾ ಶ್ರೀಗಳು ಸಮಾಜಮುಖಿ ಮತ್ತು ಧಾರ್ಮಿಕ ಚಿಂತನೆ ಇಟ್ಟುಕೊಂಡು ಸೇವೆ ಮಾಡಿದವರು. ಅವರು ನಮ್ಮನ್ನು ಮಗುವನ್ನು ಯಾವ ರೀತಿ ಪ್ರೀತಿ ವಾತ್ಸಲ್ಯದಿಂದ ನೋಡುತ್ತಿದ್ದರು ಹಾಗೆಯೇ ಭಕ್ತರನ್ನು ನೋಡುತ್ತಿದ್ದರು ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಜಗದೀಶ್‌ ಶೆಟ್ಟರ್ ತಿಳಿಸಿದರು.ದಾಸರಹಳ್ಳಿಯ ನೆಲೆ ಮಹೇಶ್ವರಮ್ಮ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಘಟಕ, ವೀರಶೈವ- ಲಿಂಗಾಯಿತ ಕ್ಷೇಮಾಭಿವೃದ್ಧಿ ವೇದಿಕೆ ದಾಸರಹಳ್ಳಿ ಕ್ಷೇತ್ರ, ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ, ಕಾಯಕಯೋಗಿ ಸಹಕಾರ ಸಂಘ ನಿಯಮಿತ ಮತ್ತು ಅಕ್ಕಮಹಾದೇವಿ ಮಹಿಳಾ ಸಂಘದ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 119ನೇ ಜನ್ಮದಿನೋತ್ಸವ, ಬಸವ ಜಯಂತಿ ಮತ್ತು ಅಕ್ಕಮಹಾದೇವಿ ಜಯಂತಿಗೆ ಚಾಲನೆ ನೀಡಿ ಮಾತನಾಡಿದರು.ಇವತ್ತಿನ ಕಾರ್ಯಕ್ರಮ ಸಮಾಜದಲ್ಲಿ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮ. 12ನೇ ಶತಮಾನದಲ್ಲಿ ಬಸವಣ್ಣ ಮತ್ತು ಅಕ್ಕಮಹಾದೇವಿಯವರು ಸಮಾಜದ ಅಂದಿನ ಜಾತಿ ವ್ಯವಸ್ಥೆ, ಮೂಢನಂಬಿಕೆ ಮತ್ತು ಮೇಲು ಕೀಳುಗಳ ಬಗ್ಗೆ ವಚನದ ಮೂಲಕ ಸಮರ ಸಾರಿದರು. ಅಂದಿನ ಅವರ ವಿಚಾರಧಾರೆಗಳು ಇಂದಿಗೂ ಕೂಡ ಪ್ರಸ್ತುತವಾಗಿದೆ ಎಂದು ತಿಳಿಸಿದರು.ಶಾಸಕ ಎಸ್. ಮುನಿರಾಜು ಮಾತನಾಡಿ, ಬಡವ ಬಲ್ಲಿದನೆಂಬುದ ನೋಡದೆ ಕರೆದ ಭಕ್ತರ ಮನೆಗೆ ಹೋಗಿ ಆಶೀರ್ವಾದ ಮಾಡಿ ಬರುತ್ತಿದ್ದ ನಡೆದಾಡುವ ದೇವರಾಗಿದ್ದರು ಸಿದ್ದಗಂಗಾ ಶ್ರೀಗಳು ಎಂದು ಹೇಳಿದರು. ಅಥಣಿಯ ಮೊಟಗಿ ಮಠದ ಪ್ರಭು ಚೆನ್ನಬಸವ ಸ್ವಾಮೀಜಿ ಮಾತನಾಡಿದರು.ಸಮಾರಂಭದಲ್ಲಿ ಹೃದ್ರೋಗ ತಜ್ಞ ಡಾ. ಸತೀಶ್ ಮತ್ತು ಸುಮಂಗಲಿ ಸೇವಾಶ್ರಮದ ಅಧ್ಯಕ್ಷೆ ಎಸ್.ಜಿ. ಸುಶೀಲಮ್ಮ ಅವರಿಗೆ ''''''''''''''''ಕಾಯಕಯೋಗಿ ಪ್ರಶಸ್ತಿ'''''''''''''''' ಪ್ರದಾನ ಮಾಡಲಾಯಿತು.119 ಶರಣ ದಂಪತಿಗಳನ್ನು ಅಭಿನಂದಿಸಲಾಯಿತು.ಈ ವೇಳೆ ಸಿದ್ದಗಂಗಾ ಮಠದ ಶಿವ ಸಿದ್ದೇಶ್ವರ ಮಹಾಸ್ವಾಮಿಜೀ, ನಾಟಕ ಅಕಾಡೆಮಿ ಅಧ್ಯಕ್ಷ ಕೆ.ವಿ. ನಾಗರಾಜ ಮೂರ್ತಿ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ಕಾರ್ಯಕ್ರಮದ ಆಯೋಜಕ ಬಸವರಾಜಣ್ಣ, ದಾಸರಹಳ್ಳಿ ಕ್ಷೇತ್ರ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ವೈ.ಬಿ.ಎಚ್. ಜಯದೇವ್, ಎಂ.ಬಿ. ದಯಾನಂದ್, ಮನೋಹರ್, ಸುಜಾತ ಮೇಲೇಗೌಡ, ವಿ. ಲಕ್ಷ್ಮಣಗೌಡ, ಲಾರಿ ಮುನಿರಾಜು ಹಾಜರಿದ್ದರು.