ಸಿದ್ದರಾಮ ಉಪ್ಪಿನಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ

| Published : Dec 26 2023, 01:30 AM IST

ಸಿದ್ದರಾಮ ಉಪ್ಪಿನಗೆ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಆಲಮೇಲ: ಪಟ್ಟಣದ ಹಿರಿಯ ಕಾದಂಬರಿಕಾರ, ಬಂಡಾಯ ಸಾಹಿತಿ ಸಿದ್ದರಾಮ ಉಪ್ಪಿನ ಅವರಿಗೆ ಸಮಗ್ರ ಸಾಹಿತ್ಯ ಮತ್ತು ಜೀವಮಾನ ಸಾಧನೆಯ ಗೌರವಾರ್ಥ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಉಪ್ಪಿನ ಅವರು ಕಾದಂಬರಿ, ಜೀವನ ಚರಿತ್ರೆ, ಆತ್ಮಕಥನ, ಲಲಿತ ಪ್ರಬಂಧ, ವ್ಯಕ್ತಿ ಚಿತ್ರಣ, ಕಾವ್ಯ ಈ ಎಲ್ಲ ಪ್ರಕಾರಗಳ ಸಾಹಿತ್ಯ ಕೃಷಿಯಲ್ಲಿ ತೊಡಗಿ ಅವರು ಸರಿಸುಮಾರು 23ಕ್ಕೂ ಅಧಿಕ ಗ್ರಂಥಗಳನ್ನು ರಚಿಸಿದ್ದಾರೆ.

ಆಲಮೇಲ: ಪಟ್ಟಣದ ಹಿರಿಯ ಕಾದಂಬರಿಕಾರ, ಬಂಡಾಯ ಸಾಹಿತಿ ಸಿದ್ದರಾಮ ಉಪ್ಪಿನ ಅವರಿಗೆ ಸಮಗ್ರ ಸಾಹಿತ್ಯ ಮತ್ತು ಜೀವಮಾನ ಸಾಧನೆಯ ಗೌರವಾರ್ಥ ವಿಶ್ವೇಶ್ವರಯ್ಯ ರಾಷ್ಟ್ರೀಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಉಪ್ಪಿನ ಅವರು ಕಾದಂಬರಿ, ಜೀವನ ಚರಿತ್ರೆ, ಆತ್ಮಕಥನ, ಲಲಿತ ಪ್ರಬಂಧ, ವ್ಯಕ್ತಿ ಚಿತ್ರಣ, ಕಾವ್ಯ ಈ‌ ಎಲ್ಲ ಪ್ರಕಾರಗಳ‌ ಸಾಹಿತ್ಯ ಕೃಷಿಯಲ್ಲಿ ತೊಡಗಿ ಅವರು ಸರಿಸುಮಾರು 23ಕ್ಕೂ ಅಧಿಕ ಗ್ರಂಥಗಳನ್ನು ರಚಿಸಿದ್ದಾರೆ.

ಡಿ.30ರಂದು ಸಂಜೆ 5 ಗಂಟೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗುವುದು. ಡಾ.ಮಲ್ಲೇಶ್ವರಂ ಜಿ.ವೆಂಕಟೇಶ, ಸಾರ್ವಜನಿಕ ಕೇಂದ್ರ ಗ್ರಂಥಾಲಯ ಇಲಾಖೆ ಬೆಂಗಳೂರಿನ ನಿರ್ದೇಶಕ ಡಾ.ಸತೀಶಕುಮಾರ ಹಾಗೂ ಸಾಹಿತಿಗಳು, ಕವಿಗಳು, ಸಾಹಿತ್ಯಾಸಕ್ತರು ಭಾಗವಹಿಸುವರು. ನಾಡಿನ‌ ಹೆಸರಾಂತ‌ ಕಲಾ ತಂಡಗಳಿಂದ ಕಲಾ ಪ್ರದರ್ಶನ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ರಮೇಶ ಸುರ್ವೆ‌ ಅವರು‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.