ಸಂಪುಟ ಸಭೆಗೆ ಕೆಂಪು ಬಸ್ಸಲ್ಲಿ ಬಂದ ಸಿದ್ದರಾಮಯ್ಯ, ಸಚಿವರು

| Published : Sep 18 2024, 02:02 AM IST

ಸಾರಾಂಶ

ಪೋಲಿಸರು, ಕಾಂಗ್ರೆಸ್‌ ಸರ್ಕಾರದ ನಡೆ ಖಂಡನೀಯ. ರೈತರ ಶಕ್ತಿಯನ್ನು ಕುಗ್ಗಿಸಲು ಹೊರಟಿರುವ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷ ಗಡಂತಿ ಖಂಡಿಸಿದ್ದಾರೆ.

ಕಲಬುರಗಿ: ಕಲಬುರಗಿಯ ಐತಿಹಾಸಿಕ ಸಂಪುಟ ಸಭೆಗೆ ಸಿಎಂ ಸಿದ್ದರಾಮಯ್ಯ ಮತ್ತು ಸಂಪುಟದ ಹಿರಿಯ ಸಚಿವರೆಲ್ಲರೂ ಕೆಕೆಆರ್‌ಟಿಸಿ ಸಾರಿಗೆ ಸಂಸ್ಥೆ ಬಸ್‌ನಲ್ಲಿ ಬಂದಿಳಿಯುವ ಮೂಲಕ ಗಮನ ಸೆಳೆದರು.

ಮಧ್ಯಾಹ್ನ 3.45ಕ್ಕೆ ಸರಿಯಾಗಿ ವಿಕಾಸ ಭವನದ ಪ್ರಾದೇಶಿಕ ಆಯುಕ್ತರ ಕಚೇರಿ ಮುಂದೆ ಬಸ್ಸಿಂದ ಬಂದಿಳಿದ ಸಿದ್ದರಾಮಯ್ಯ ಮತ್ತವರ ಸಂಪುಟ ಸಚಿವರು ಎಲ್ಲರತ್ತ ಕೈಬೀಸಿ ಸಂಪುಟ ಸಭೆಗೆ ಹೋದರು.

ಕೆಂಪು ಬಸ್‌ನ ಮುಂದಿನ ಸೀಟ್‌ನಲ್ಲಿ ಕುಳಿತು ಆಗಮಿಸಿದ ಸಿದ್ದರಾಮಯ್ಯನವರ ಹಿಂಬದಿ ಸೀಟಿನಲ್ಲೇ ಡಿಸಿಎಂ ಡಿಕೆ ಶಿವಕುಮಾರ ಕುಳಿತಿದ್ದರು.

ಸಚಿವರಾದ ಜಿ.ಪರಮೇಶ್ವರ, ಎಚ್.ಕೆ.ಪಾಟೀಲ್, ಡಾ. ಶರಣಪ್ರಕಾಶ ಪಾಟೀಲ್, ಪ್ರಿಯಾಂಕ್ ಖರ್ಗೆ, ಸಂತೋಷ ಲಾಡ್, ದಿನೇಶ್ ಗುಂಡೂರಾವ ಇನ್ನಿತರ ಸಚಿವರೊಂದಿಗೆ ವಿಧಾನ ಸೌಧಕ್ಕೆ ಬಸ್‌ನಲ್ಲೇ ಬಂದರು. ಎಲ್ಲರೂ ವಿಕಾಸ ಭವನದ ಮೆಟ್ಟಿಲುಗಳ ಮುಂದೆ ನಿಂತು ಕೈ ಬೀಸಿದರು.

ಓಡೋಡಿ ಬಂದ ಸಚಿವೆ ಹೆಬ್ಬಾಳ್ಕರ್‌: ಸಂಪುಟ ಸಭೆಗೆ ಸಿಎಂ ಮತ್ತು ಸಂಪುಟ ದರ್ಜೆ ಸಚಿವರೆಲ್ಲರೂ ವಿಕಾಸಸೌಧದ ಮೆಟ್ಟಿಲ ಮೇಲೆ ನಿಂತು ಕೈ ಬೀಸುತ್ತಿರುವಾಗ ಕಾರಲ್ಲಿ ಬಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಅವಸರದಲ್ಲಿ ಮೆಟ್ಟಿಲು ಹತ್ತಿ ಓಡೋಡಿ ಬಂದು ಎಲ್ಲರ ಜೊತೆ ನಿಂತು ಕೈ ಬೀಸಿದರು.