ಹಳ್ಳಿಮೈಸೂರಿನಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಪ್ರತಿಭಟನೆ

| Published : Aug 19 2024, 12:52 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿಯನ್ನು ವಾಪನ್ ಪಡೆಯದೇ ಇದ್ದಲ್ಲಿ ನಾವು ಯಾವ ಹೋರಾಟಕ್ಕೂ ಸಿದ್ಧವೆಂದು ಕಾಂಗ್ರೆಸ್ ಮುಖಂಡ ಶ್ರೀಧರಗೌಡ ಎಚ್ಚರಿಸಿದರು. ತಾಲೂಕಿನ ಹಳ್ಳಿಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯವನರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರು ರಾಜ್ಯಪಾಲರ ಧೋರಣೆ ಖಂಡಿಸಿ ಆಯೋಜನೆ ಮಾಡಿದ್ದ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ನೀಡಿರುವ ಅನುಮತಿಯನ್ನು ವಾಪನ್ ಪಡೆಯದೇ ಇದ್ದಲ್ಲಿ, ರಾಜಭವನ ಚಲೋ ಆಂದೋಲನ ಮಾಡುವ ಜತೆಗೆ ನಮ್ಮ ನಾಯಕರ ಮೇಲೆ ವಿನಾಕಾರಣ ಆರೋಪ ಮಾಡಿ, ಮಾನಸಿಕ ಹಿಂಸೆ ನೀಡುತ್ತಾ, ತೇಜೋವಧೆ ಮಾಡುತ್ತಿರುವವರ ವಿರುದ್ಧ ಹೋರಾಡುತ್ತಿರುವ ನಾವು ಸಿದ್ದರಾಮಯ್ಯನವರ ಉಳಿವಿಗಾಗಿ ರಕ್ತಕಾಂತ್ರಿ ನಡೆಸಿದರೂ ಅಚ್ಚರಿಯಿಲ್ಲ. ನಾವು ಯಾವ ಹೋರಾಟಕ್ಕೂ ಸಿದ್ಧವೆಂದು ಕಾಂಗ್ರೆಸ್ ಮುಖಂಡ ಶ್ರೀಧರಗೌಡ ಎಚ್ಚರಿಸಿದರು.ತಾಲೂಕಿನ ಹಳ್ಳಿಮೈಸೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯವನರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಮುಖಂಡರು ರಾಜ್ಯಪಾಲರ ಧೋರಣೆ ಖಂಡಿಸಿ ಆಯೋಜನೆ ಮಾಡಿದ್ದ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿಮಾನಿಗಳಾದ ನಾವು ಬಿಜೆಪಿಯ ಕೈಗೊಂಬೆಯಂತೆ ವರ್ತಿಸುತ್ತಿರುವ ರಾಜ್ಯಪಾಲರ ವರ್ತನೆಯನ್ನು ಉಗ್ರವಾಗಿ ಖಂಡಿಸುವ ಜತೆಗೆ ಅವರ ರಾಜೀನಾಮೆಗೆ ಒತ್ತಾಯ ಮಾಡುತ್ತೇವೆ. ಬಡವರ ಬಂಧು, ಹಸಿದವರಿಗೆ ಅನ್ನಭಾಗ್ಯ ಯೋಜನೆ ಮೂಲಕ ಹಸಿವನ್ನು ನೀಗಿಸಿದ ಸಿದ್ದರಾಮಯ್ಯನವರ ಅಭಿವೃದ್ಧಿ ಸಹಿಸದೇ ಅವರ ವಿರುದ್ಧ ವ್ಯವಸ್ಥಿತವಾಗಿ ಪಿತೂರಿ ರೂಪಿಸಿದ್ದಾರೆ. ಇಂದು ಪ್ರಾರಂಭ ಮಾಡಿರುವ ಪ್ರತಿಭಟನೆಯೂ ಪ್ರತಿನಿತ್ಯ ನಡೆಯಲಿದ್ದು, ಸೋಮವಾರ ಹಾಸನದಲ್ಲಿ ಕಾಂಗ್ರೆಸ್ ಪಕ್ಷದ ನಿರ್ದೇಶನದಂತೆ ಹಾಗೂ ಶಾಸಕ ಶಿವಲಿಂಗೇಗೌಡರು ಈಗಾಗಲೇ ಬೃಹತ್ ಮಟ್ಟದ ಹೋರಾಟಕ್ಕೆ ಕರೆಕೊಟ್ಟಿರುವಂತೆ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗಿಯಾಗಿ ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದರು.ರಾಮನಾಥಪುರ ರಸ್ತೆಯಿಂದ ಪ್ರತಿಭಟನೆ ಪ್ರಾರಂಭಿಸಿದ ಸಿದ್ದರಾಮಯ್ಯ ಅಭಿಮಾನಿಗಳು ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗುತ್ತಾ, ರಾಜೀನಾಮೆಗೆ ಒತ್ತಾಯ ಮಾಡುತ್ತಾ, ಅವರ ಭಾವಚಿತ್ರವಿದ್ದ ಪ್ರತಿಕೃತಿ ಮೆರವಣಿಗೆ ನಡೆಸಿದರು. ನಂತರ ಹಳ್ಳಿಮೈಸೂರು ಪ್ರಮುಖ ವೃತ್ತದಲ್ಲಿ ಪ್ರತಿಕೃತಿಗೆ ಬೆಂಕಿ ಹಾಕಿ ಧಿಕ್ಕಾರ ಕೂಗಿದರು.ಪ್ರತಿಭಟನೆಯಲ್ಲಿ ಸಮಾಜ ಸೇವಕ ದಿವಾಕರಗೌಡ ಹಾಗೂ ಅನಿಲ್ ಕುಮಾರ್, ಹಳ್ಳಿಮೈಸೂರು ಹೋಬಳಿ ಕುರುಬರ ಸಂಘದ ಅಧ್ಯಕ್ಷ ಪುಟ್ಟೇಗೌಡ, ಮುಖಂಡರಾದ ಕೃಷ್ಣೇಗೌಡ, ಬಾಗಿವಾಳು ಮಂಜೇಗೌಡ, ಮಲ್ಲಪ್ಪನಹಳ್ಳಿ ಮೋಹನ್, ತಾತನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಹೇಮಂತಗೌಡ, ಜಿ.ಪಂ. ಮಾಜಿ ಸದಸ್ಯ ಪ್ರಸನ್ನ, ಅರಕಲಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸನ್ನ, ಜಿಲ್ಲಾ ಕುರುಬರ ಸಂಘದ ಉಪಾಧ್ಯಕ್ಷ ಗಣಪ, ಪುಟ್ಟಯ್ಯ, ತಿಪ್ಪೇಸ್ವಾಮಿ, ಬಾಲು, ಲೋಕೇಶ್, ಚಿಕ್ಕೇಗೌಡ, ಭರತ್ ರಾಜೇಶ್, ಮಂಜೇಗೌಡ, ಧರ್ಮಪಾಲ್, ಮಂಜು, ಗಣೇಶ್, ಯೋಗೇಶ್, ಅನಿಲ್, ಪ್ರದೀಪ್‌ ಇತರರು ಇದ್ದರು.