ಐದು ವರ್ಷವೂ ಸಿದ್ದರಾಮಯ್ಯನವರೇ ಸಿಎಂ

| Published : Oct 14 2024, 01:17 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಮುಖ್ಯಮಂತ್ರಿಯಾಗಿಯೇ ಇದ್ದಾರೆ‌‌, ಮುಖ್ಯಮಂತ್ರಿ ಆಗಿಯೇ ಮುಂದುವರೆಯುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, 5 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ಕೆಲ ನಾಯಕರ ಅಭಿಮಾನಿಗಳು, ಅವರ ನಾಯಕರು ಸಿಎಂ ಆಗಲಿ ಎಂದು ಘೋಷಣೆ ಕೂಗುತ್ತಾರೆ. ಹಾಗೇ ಘೋಷಣೆ ಕೂಗೋದರಲ್ಲಿ ತಪ್ಪೆನಿಲ್ಲ. ಬಿಜೆಪಿ ಪಕ್ಷದಿಂದ ಮತ್ತೊಂದು ಸುತ್ತಿನ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ತಮ್ಮಲ್ಲೇ ನೆಲೆ ಇಲ್ಲ.

ಕನ್ನಡಪ್ರಭ ವಾರ್ತೆ ವಿಜಯಪುರ

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದರು, ಮುಖ್ಯಮಂತ್ರಿಯಾಗಿಯೇ ಇದ್ದಾರೆ‌‌, ಮುಖ್ಯಮಂತ್ರಿ ಆಗಿಯೇ ಮುಂದುವರೆಯುತ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, 5 ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ. ಕೆಲ ನಾಯಕರ ಅಭಿಮಾನಿಗಳು, ಅವರ ನಾಯಕರು ಸಿಎಂ ಆಗಲಿ ಎಂದು ಘೋಷಣೆ ಕೂಗುತ್ತಾರೆ. ಹಾಗೇ ಘೋಷಣೆ ಕೂಗೋದರಲ್ಲಿ ತಪ್ಪೆನಿಲ್ಲ. ಬಿಜೆಪಿ ಪಕ್ಷದಿಂದ ಮತ್ತೊಂದು ಸುತ್ತಿನ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ತಮ್ಮಲ್ಲೇ ನೆಲೆ ಇಲ್ಲ. ಬಿಜೆಪಿಯಲ್ಲಿ 20 ಗುಂಪುಗಳಿವೆ. ಮೊದಲು ತಮ್ಮ ಮನೆ ಸರಿ ಪಡಿಸಿಕೊಳ್ಳಲಿ ಬೇರೆಯವರದ್ದೇನು ನೋಡ್ತಾರೆ. 40% ಭ್ರಷ್ಟಾಚಾರದಿಂದ ಜನರು ಅವರನ್ನು ಬಿಜೆಪಿಯನ್ನ ಕಿತ್ತೆಸೆದಿದ್ದಾರೆ. ಬಿಜೆಪಿಯಲ್ಲಿ ಹೊಂದಾಣಿಕೆ ಇಲ್ಲ ಎಂದು ಟೀಕಿಸಿದರು.ಹುಬ್ಬಳ್ಳಿ ಗಲಭೆ ಕೇಸ್ ಹಿಂಪಡೆದ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಹೋರಾಟಗಳು ನಡೆದ ಸಂದರ್ಭದಲ್ಲಿ ನಡೆದ ಗಲಭೆ ಕೇಸ್‌ಗಳನ್ನು ಕಾಲ ಕಾಲಕ್ಕೆ ಹಿಂಪಡೆದಿದ್ದಾರೆ. ಎಲ್ಲ ಸರ್ಕಾರಗಳು ಕೇಸ್ ಹಿಂಪಡೆದಿವೆ. ಸಿ.ಟಿ.ರವಿ ಕೇಸ್ ಹಿಂಪಡೆದಿದ್ದೇವೆ, ಅದನ್ನು ಹೇಳಲ್ವಾ ಬಿಜೆಪಿಯವರು?. ಗಲಭೆಗಳಾದಾಗ ಅಮಾಯಕರ ಮೇಲೆ ಕೇಸ್ ದಾಖಲಾಗಿರುತ್ತವೆ. ಗಲಭೆ ಮಾಡಿದವರು ಓಡಿ ಹೋಗಿರ್ತಾರೆ, ಸಿಕ್ಕಿ ಹಾಕಿಕೊಂಡಿರಲ್ಲ. ಗಲಭೆ ನೋಡುತ್ತ ನಿಂತವರು ಸಿಕ್ಕಿಹಾಕಿಕೊಂಡಿರುತ್ತಾರೆ. ರೈತ ಹೋರಾಟ, ವಿದ್ಯಾರ್ಥಿ ಹೋರಾಟ, ಜನರ ಹೋರಾಟಗಳ ಕೇಸನ್ನು ಎಲ್ಲ ಸರ್ಕಾರಗಳು ಹಿಂಪಡೆದಿರುತ್ತವೆ. ಅದೆ ರೀತಿ ಹುಬ್ಬಳ್ಳಿ ಗಲಭೆ ವಾಪಸ್ ಪಡೆದಿರಬಹುದು.ಕಾಂಗ್ರೆಸ್ ಸರ್ಕಾರ ಬಂದರೆ ಮುಸ್ಲಿಂ ಭಯೋತ್ಪಾದಕರಿಗೆ ಹಬ್ಬ ಎಂದು ಆರ್.ಅಶೋಕ‌ ಹೇಳಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿ, ಬಿಜೆಪಿಯವರು ಇದನ್ನೆ ಮಾಡಿದ್ದಾರೆ, ಆರ್.ಅಶೋಕ ಇದನ್ನೇ ಮಾಡಿದ್ದಾರೆ. ಹಿಜಾಬ್, ಹಲಾಲ್, ಅಜಾನ್ ಇದನ್ನೆ ಮಾಡಿಕೊಂಡು ಬಂದಿದ್ದಾರೆ. ನಾವು ಎಲ್ಲ ಜನರನ್ನ ರಕ್ಷಣೆ ಮಾಡುತ್ತೇವೆ ಹಿಂದೂ, ಮುಸ್ಲಿಂ, ಸಿಖ್, ಬೌದ್ಧರು ಎಲ್ಲರನ್ನೂ ರಕ್ಷಣೆ ಮಾಡುತ್ತೇವೆ, ಎಲ್ಲರಿಗೂ ಪ್ರೋತ್ಸಾಹ ಕೊಡುತ್ತೇವೆ ಎಂದರು.