ಸಿದ್ದರಾಮಯ್ಯನವರಿಗೆ ಬದಲಾವಣೆ ಮಾಡಬೇಕಾದರೆ ನಮ್ಮಿಂದ ಹಾಗೂ ನಿಮ್ಮಿಂದ ಸಾಧ್ಯವಿಲ್ಲ, ಹೈಕಮಾಂಡ್ ಏನು ಸೂಚನೆ ನೀಡುತ್ತದೆ.

ಡಿ.ಕೆ. ಶಿವಕುಮಾರ್‌ ಗೆ ಚುನಾವಣೆ ಮಾಡುವ ತಂತ್ರ ಚೆನ್ನಾಗಿ ಗೊತ್ತಿದೆ । ಬಿಜೆಪಿ ಬಡವರಿಗೆ ಒಂದು ಮನೆಯನ್ನು ಕೊಟ್ಟಿಲ್ಲ

ಕನ್ನಡಪ್ರಭ ವಾರ್ತೆ ಚಿಂತಾಮಣಿ

2028ರವರೆಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಗಳಾಗಿ ಮುಂದುವರೆಯುತ್ತಾರೆ. ಸದ್ಯ ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲವೆಂದು ರಾಜ್ಯ ಸರ್ಕಾರದ ವಕ್ಫ್ ಹಾಗೂ ವಸತಿ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ತಿಳಿಸಿದರು.

ತಾಲೂಕಿನ ಚಿನ್ನಸಂದ್ರ ಗ್ರಾಮಕ್ಕೆ ಭೇಟಿ ನೀಡಿದ್ದ ಅವರು ಮಾತನಾಡಿ, ಸಿದ್ದರಾಮಯ್ಯನವರಿಗೆ ಬದಲಾವಣೆ ಮಾಡಬೇಕಾದರೆ ನಮ್ಮಿಂದ ಹಾಗೂ ನಿಮ್ಮಿಂದ ಸಾಧ್ಯವಿಲ್ಲ, ಹೈಕಮಾಂಡ್ ಏನು ಸೂಚನೆ ನೀಡುತ್ತದೆ. ಅದು ನಾವೆಲ್ಲರೂ ಪಾಲಿಸುತ್ತೇವೆ. ಡಿಕೆ ಶಿವಕುಮಾರ್‌ರಿಗೆ ಎಲ್ಲಾ ರಾಜ್ಯಗಳಲ್ಲೂ ಡಿಮ್ಯಾಂಡ್ ಇದೆ. ಚುನಾವಣೆ ನಡೆಸುವ ತಂತ್ರ ಚೆನ್ನಾಗಿ ಗೊತ್ತಿದೆ. ಆ ಕಾರಣದಿಂದಾಗಿ ಅವರಿಗೆ ಅಸ್ಸಾಂನ ಚುನಾವಣಾ ವೀಕ್ಷಕರಾಗಿ ಮಾಡಲಾಗಿದೆಯೆಂದು ತಿಳಿಸಿದರು.

2019ರಿಂದ 2022ರ ಅವಧಿಯಲ್ಲಿ ಆಡಳಿತದಲ್ಲಿ ಬಿಜೆಪಿ ಸರ್ಕಾರ ಇತ್ತು. ಅವರ ಆಡಳಿತದಲ್ಲಿ ಸ್ಲಂ ಬೋರ್ಡ್‌ನಿಂದ ಒಂದು ಮನೆ ಕೊಟ್ಟಿದ್ದಾರೆ ನಾನು ರಾಜಕೀಯದಿಂದ ನಿವೃತ್ತಿ ಪಡೆದು ರಾಜೀನಾಮೆ ಕೊಡುತ್ತೇನೆಂದು ಹೇಳಿದ್ದೆ. ನಾನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಯಾರಿಗೂ ಸಹ ನಾವು ಉಚಿತವಾಗಿ ಮನೆಗಳನ್ನು ಕೊಡುತ್ತೇವೆಂದು ಹೇಳಿರಲಿಲ್ಲ, ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗ 1 ಲಕ್ಷ 80 ಸಾವಿರ ಮನೆಗಳು ಮಂಜೂರು ಮಾಡಿದ್ದೆವು, ನಂತರ ರಾಜ್ಯದಲ್ಲಿ ಸಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಒಂದೂವರೆ ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದು, ಒಂದು ಮನೆಯನ್ನು ಸಹ ಬಡವರಿಗೆ ಕೊಡಲಿಲ್ಲ, ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಎರಡು ವರ್ಷಗಳ ಕಾಲ ಮುಖ್ಯಮಂತ್ರಿ ಆಗಿದ್ದರು. ಅವರ ಅವಧಿಯಲ್ಲಿ ಸಹ ಒಂದು ಮನೆಯನ್ನಾಗಲಿ ಸಹ ನೀಡಲಿಲ್ಲ ಎಂದರು.

ರಾಜ್ಯದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ನಂತರ ಬಡವರ ಬಗ್ಗೆ ಕಾಳಿಜಿ ವಹಿಸಿ ರಾಜ್ಯದಲ್ಲಿ 36 ಸಾವಿರ ಮನೆಗಳು ಬಡವರಿಗೆ ಕೊಟ್ಟಿದ್ದೇವೆಂದು, ಅತಿ ಶೀಘ್ರದಲ್ಲೇ ಹುಬ್ಬಳ್ಳಿಯಲ್ಲಿ 46 ಸಾವಿರ ಮನೆಗಳನ್ನು ಕೊಡುತ್ತಿದ್ದೇವೆಂದು ಬಿಜೆಪಿಗೆ ಇದೆಲ್ಲಾ ಯಾಕೆ ಸಾಧ್ಯವಾಗಲಿಲ್ಲ ನಾಚಿಕೆಯಾಗಬೇಕೆಂದು ಕಿಡಿಕಾಡಿದರು.

ಕೈವಾರದ ಶಾದಿಮಹಲ್‌ನಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ್ದವರಿಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಡಾ.ಎಂ.ಸಿ.ಸುಧಾಕರ್‌ರ ಸಹೋದರ ಡಾ.ಎಂ.ಸಿ.ಬಾಲಾಜಿ, ಕಾಂಗ್ರೆಸ್ ಯುವ ಮುಖಂಡ ಸಾದಿಕ್, ಇಂತಿಯಾಜ್, ಚಿನ್ನಸಂದ್ರ ಏಜು, ಗೊಲ್ಲಪಲ್ಲಿ ಬಾಬು, ಮೆಹಬೂಬ್ ಸಾಬ್, ಖಾದರ್, ಕೀಜರ್, ಪರ್ವೀಜ್, ಅಕ್ಮಲ್, ಮುನ್ನಾ, ವೆಂಕಟರವಣಸ್ವಾಮಿ, ಜಗದೀಶ್, ನಾಗೇಶ್, ನಾರಾಯಣಸ್ವಾಮಿ, ಸದಾತ್ ಉಲ್ಲಾ ಖಾನ್, ಸಮೀಉಲ್ಲಾ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತಿತ್ತರರು ಉಪಸ್ಥಿತರಿದ್ದರು.