ಸಾರಾಂಶ
ಜಾತಿ ಗೊತ್ತಿಲ್ಲದವರು ಜಾತ್ಯತೀತರು. ಸಿದ್ದರಾಮುಲ್ಲಾಖಾನ್ ಅಂದರೆ ಶುದ್ಧ ಜಾತ್ಯತೀತ ಪ್ರಶಸ್ತಿ ಎಂದು ಕೆನರಾ ಸಂಸದ ಅನಂತಕುಮಾರ ಹೆಗಡೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ಏಕವಚನದಲ್ಲೇ ವ್ಯಂಗ್ಯವಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಬೆಳಗಾವಿ
ಜಾತಿ ಗೊತ್ತಿಲ್ಲದವರು ಜಾತ್ಯತೀತರು. ಸಿದ್ದರಾಮುಲ್ಲಾಖಾನ್ ಅಂದರೆ ಶುದ್ಧ ಜಾತ್ಯತೀತ ಪ್ರಶಸ್ತಿ ಎಂದು ಕೆನರಾ ಸಂಸದ ಅನಂತಕುಮಾರ ಹೆಗಡೆಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮತ್ತೆ ಏಕವಚನದಲ್ಲೇ ವ್ಯಂಗ್ಯವಾಡಿದ್ದಾರೆ.ಬೈಲಹೊಂಗಲ ತಾಲೂಕಿನ ಸಂಪಗಾಂವಿ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ ಉದ್ದೇಶಿಸಿ ಅವರು ಮಾತನಾಡಿದರು. ಸಿದ್ದರಾಮಯ್ಯನವರು ನಮ್ಮ ತೆರಿಗೆ ನಮ್ಮ ಹಕ್ಕು ಎನ್ನುತ್ತಾರೆ. ಆದರೆ, ದೇಶದಲ್ಲಿ ಶೇ.99.99ರಷ್ಟು ತೆರಿಗೆ ಕೊಡುವವರು ಹಿಂದೂಗಳು. ಷರಿಯಾ ಕಾನೂನಿನ ಪ್ರಕಾರ ತೆರಿಗೆ ಕೊಡಬಾರದು. ಕೊಟ್ಟರೆ ಅದು ಹರಾಮ್ ಅಂದರೆ ಪಾಪ ಆಗುತ್ತದೆ. ಇದು ಇಸ್ಲಾಮಿಕ್ ದೇಶ ಆಗಿಲ್ಲ, ಹೀಗಾಗಿ, ನೀವು ಟ್ಯಾಕ್ಸ್ ಕೊಡಬೇಡಿ. ಇಸ್ಲಾಮಿಕ್ ದೇಶ ಆದ ಮೇಲೆ ಟ್ಯಾಕ್ಸ್ ಕೊಡಿ ಎಂದು ಅವರ ಧರ್ಮಶಾಸ್ತ್ರ ಹೇಳುತ್ತದೆ. ಅದಕ್ಕಾಗಿ ಮುಸ್ಲಿಮರು ಟ್ಯಾಕ್ಸ್ ಕೊಡುವುದಿಲ್ಲ. ಆದರೆ, ನಂಬರ್ 2 ಬಿಜಿನೆಸ್ ಮಾಡುವುದರಲ್ಲಿ ಅವರೇ ಇರುತ್ತಾರೆ. ಹೀಗಾಗಿ, ನಮ್ಮ ದುಡ್ಡನ್ನು ಚರ್ಚ್, ಮಸೀದಿಗೆ ಕೊಡಬೇಡಿ, ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಅಂತಾ ನಾವು ಹೇಳಿದರೆ ಬೆಂಕಿ ಬೀಳುತ್ತದೆ ಎಂದು ಕುಟುಕಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಈ ಸರ್ಕಾರದಲ್ಲಿ ದುಡ್ಡೇ ಇಲ್ಲ. ಕಳೆದ ಹತ್ತು ತಿಂಗಳುಗಳಲ್ಲಿ ರಾಜ್ಯ ಸರ್ಕಾರ ದಿವಾಳಿ ಆಗಿದೆ. ಅಂಗನವಾಡಿ ಮಕ್ಕಳಿಗೆ ಕೊಡುವ ಆಹಾರ ಕಡಿತ ಮಾಡುತ್ತಿದ್ದಾರೆ. ಹೊಸ ಶಾಸಕರಿಗೆ ಕೊಡಲು ಇವರ ಬಳಿ ದುಡ್ಡಿಲ್ಲ. ಒಂದೇ ವರ್ಷದಲ್ಲಿ ಹಣ ಕೊಡದಷ್ಟು ದುರ್ಗತಿ ಈ ಕಾಂಗ್ರೆಸ್‌ಗೆ ಬಂದಿದೆ ಎಂದರು.