ಶಿವಯೋಗಿ ಸಿದ್ದರಾಮೇಶ್ವರರು ಸಕಲ ಜೀವರಾಶಿಗಳಿಗೆ ಅನುಕೂಲವಾಗಲಿ ಎಂದು ೧೨ನೇ ಶತಮಾನದಲ್ಲಿಯೇ ಕೆರೆ- ಕಟ್ಟೆಗಳನ್ನು ನಿರ್ಮಿಸಿದರು. ಸಿದ್ದರಾಮೇಶ್ವರರು ವೈಯಕ್ತಿಕ ಬದುಕಿನ ಸಂಗತಿಗಳು, ಜಿಜ್ಞಾಸೆ, ಧರ್ಮತತ್ವ ಹಾಗೂ ಸಾಮಾಜಿಕ ಕಳಕಳಿ ಸಾರುವ ೧೧೬೨ ವಚನಗಳು ಸಿಕ್ಕಿವೆ.

ಗಜೇಂದ್ರಗಡ: ೧೨ನೇ ಶತಮಾನದಲ್ಲಿ ನಡೆದ ಮಹಾನ್ ಸಾಮಾಜಿಕ ಕ್ರಾಂತಿಯ ಹರಿಕಾರರಲ್ಲಿ ಅಗ್ರಗಣ್ಯರಾಗಿದ್ದ ಸಿದ್ಧರಾಮೇಶ್ವರರು ವಚನಕಾರರಷ್ಟೇ ಅಲ್ಲದೆ, ಬಹುದೊಡ್ಡ ಶರಣರಾಗಿ, ಮಹಾನ್ ಕರ್ಮಯೋಗಿಗಳಾಗಿದ್ದರು ಎಂದು ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ತಿಳಿಸಿದರು.

ಬುಧವಾರ ಸ್ಥಳೀಯ ಪುರಸಭೆ ಸಭಾಭವನದಲ್ಲಿ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಹಿನ್ನೆಲೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.ಶಿವಯೋಗಿ ಸಿದ್ದರಾಮೇಶ್ವರರು ಸಕಲ ಜೀವರಾಶಿಗಳಿಗೆ ಅನುಕೂಲವಾಗಲಿ ಎಂದು ೧೨ನೇ ಶತಮಾನದಲ್ಲಿಯೇ ಕೆರೆ- ಕಟ್ಟೆಗಳನ್ನು ನಿರ್ಮಿಸಿದರು. ಸಿದ್ದರಾಮೇಶ್ವರರು ವೈಯಕ್ತಿಕ ಬದುಕಿನ ಸಂಗತಿಗಳು, ಜಿಜ್ಞಾಸೆ, ಧರ್ಮತತ್ವ ಹಾಗೂ ಸಾಮಾಜಿಕ ಕಳಕಳಿ ಸಾರುವ ೧೧೬೨ ವಚನಗಳು ಸಿಕ್ಕಿವೆ ಎಂದರು.ಸಾಹಿತಿ ಎಫ್.ಎಸ್. ಕರಿದುರಗನವರ ಮಾತನಾಡಿ, ಗುರು ಸಿದ್ದರಾಮೇಶ್ವರರು ಕಾಯಕವೇ ಕೈಲಾಸವೆಂದು ನಂಬಿದ್ದರು. ಧರ್ಮದ ಪಾಲನೆ ಜತೆಗೆ ಪ್ರತಿಯೊಬ್ಬರೂ ಕೆಲಸದ ಮೂಲಕ ಸಾಧನೆ ಮಾಡಿದಾಗ ಬದುಕಿಗೂ ಸಾರ್ಥಕತೆ ದೊರಕುತ್ತದೆ ಎಂದು ಪ್ರತಿಪಾದಿಸಿದ್ದರು. ದುಡಿಮೆಯಲ್ಲಿ ದಾಸೋಹ ಮಾಡಬೇಕು ಎನ್ನುವುದರ ಜತೆಗೆ ವಿಶ್ವಜ್ಯೋತಿ ಬಸವಣ್ಣನವರ ಸಮಸಮಾಜದ ಕನಸು ಸಾಕಾರಕ್ಕೆ ಶಿವಯೋಗಿ ಸಿದ್ದರಾಮೇಶ್ವರರು ಬಲವಾಗಿ ನಿಂತಿದ್ದರು. ಪ್ರತಿಯೊಬ್ಬರೂ ಸಿದ್ದರಾಮೇಶ್ವರರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಜೀವನದಲ್ಲಿ ಮುಂದೆ ಸಾಗಬೇಕು ಎಂದರು.ಸಮಾಜದ ಅಧ್ಯಕ್ಷ ಮಾರುತೆಪ್ಪ ಕಲ್ಲೊಡ್ಡರ, ದುರ್ಗಾದೇವಿ ದೇವಸ್ಥಾನ ಟ್ರಸ್ಟ ಕಮಿಟಿ ಅಧ್ಯಕ್ಷ ಬಸವರಾಜ ಬಂಕದ, ದುರ್ಗಾದೇವಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಸಂಘದ ಅಧ್ಯಕ್ಷ ಯಲ್ಲಪ್ಪ ಬಂಕದ, ಮುಖಂಡರಾದ ಶರಣಪ್ಪ ಚಳಗೇರಿ, ಮುದಿಯಪ್ಪ ಮುಧೋಳ, ಷಣ್ಮುಖಪ್ಪ ಚಿಲಝರಿ, ಮೂಕಪ್ಪ ಗುಡೂರ, ಗಿಡ್ಡಪ್ಪ ಪೂಜಾರ, ಕಳಕಪ್ಪ ಮನ್ನೇರಾಳ, ಮೂಕಪ್ಪ ನಿಡಗುಂದಿ, ವೆಂಕಟೇಶ ಬಂಕದ, ಮುತ್ತಪ್ಪ ಲಕ್ಕಲಕಟ್ಟಿ, ರಾಮಣ್ಣ ನಿಡಗುಂದಿ, ದುರಗಪ್ಪ ನಿಡಗುಂದಿ, ನೇಮಣ್ಣ ಉಳ್ಳಾಗಡ್ಡಿ, ಹನುಮಂತಪ್ಪ ಲಕ್ಕಲಕಟ್ಟಿ, ಹೊಳಿಯಪ್ಪ ಮುಧೋಳ, ಕನಕಪ್ಪ ಕಲ್ಲೊಡ್ಡರ, ಹನುಮಂತಪ್ಪ ಕಲ್ಲೊಡ್ಡರ ಸೇರಿ ಇತರರು ಇದ್ದರು.

ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ

ಗದಗ: ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಶಿವಯೋಗಿ ಸಿದ್ಧರಾಮೇಶ್ವರರ ಜಯಂತಿ ಆಚರಿಸಲಾಯಿತು. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಶಿವಯೋಗಿ ಸಿದ್ಧರಾಮೇಶ್ವರರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಪೂಜೆ ಸಲ್ಲಿಸಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್. ತಹಸೀಲ್ದಾರ್ ಶ್ರೀನಿವಾಸ ಮೂರ್ತಿ ಕುಲಕರ್ಣಿ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಂ. ತುಂಬರಮಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಸವರಾಜ ಬಳ್ಳಾರಿ, ಎಚ್.ವೈ. ಸಂದಕದ, ರವಿ ಗುಂಜೀಕರ, ವಿದ್ಯಾಧರ ದೊಡ್ಡಮನಿ, ಚಿನ್ನಪ್ಪ ವಡ್ಡಟ್ಟಿ, ವೆಂಕಟೇಶ ಗೆಜ್ಜಿ, ಆಂಜನೇಯ ಕಟಗಿ, ನಾಗರಡ್ಡಿ ನಿಡಗುಂದಿ, ಸಹದೇವ ಕೋಟಿ, ರಾಘವೇಂದ್ರ ವಿ.ಎಸ್., ತಿಮ್ಮಣ್ಣ ಡೋಣಿ, ವಿಜಯ ಗಿಂಜಿ, ರವಿ ಕೋಟಿ ಸೇರಿದಂತೆ ಗಣ್ಯರು, ಹಿರಿಯರು ಇತರರಿದ್ದರು.