ಸಾರಾಂಶ
ಶಿಗ್ಗಾಂವಿ: ಗುರು ಸಿದ್ದರಾಮೇಶ್ವರರು ಕಾಯಕ ನಿಷ್ಠೆಯ ಜೀವನ ಸಾಗಿಸಿದವರು. ಅವರ ತತ್ವ ಆದರ್ಶಗಳನ್ನು ನಾವೆಲ್ಲರೂ ಪಾಲಿಸಬೇಕು, ಅಂದಾಗ ಜೀವನ ಸಾರ್ಥಕವಾಗುತ್ತದೆ ಎಂದು ಸಾಹಿತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶಿವಾನಂದ ಮ್ಯಾಗೇರಿ ತಿಳಿಸಿದರು.ಪಟ್ಟಣದಲ್ಲಿರುವ ಹಂಚಿನಮನಿ ಆರ್ಕೇಡ್‌ನಲ್ಲಿ ತಾಲೂಕು ಭೋವಿ ಸಮಾಜದ ವತಿಯಿಂದ ಹಮ್ಮಿಕೊಂಡ ಗುರು ಸಿದ್ದರಾಮೇಶ್ವರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿದ್ದರಾಮೇಶ್ವರರು ಅಲ್ಲಮ ಪ್ರಭುಗಳ ಶಿಷ್ಯರಾಗಿದ್ದವರು, ಅವರು ಮಾನವ ಕುಲದ ಬದುಕಿಗೆ ಉತ್ತಮ ಸಂದೇಶ ಸಾರಿದವರು, ಇಂದು ಭೋವಿ ಸಮಾಜ ಕಷ್ಟದಲ್ಲಿದೆ. ಸರ್ಕಾರ ಈ ಸಮಾಜದ ಕಷ್ಟಗಳಿಗೆ ಸ್ಪಂದಿಸಬೇಕು ಎಂದರು.ಭೋವಿ ಸಮಾಜದ ತಾಲೂಕು ಅಧ್ಯಕ್ಷ ಅರ್ಜುನ ಹಂಚಿನಮನಿ ಮಾತನಾಡಿ, ಸಿದ್ದರಾಮೇಶ್ವರರು ಒಂದೇ ಸಮೂದಾಯಕ್ಕೆ ಸೀಮಿತರಾದವರಲ್ಲ, ಎಲ್ಲ ಸಮೂದಾಯದವರೂ ಸ್ಮರಿಸುವ ಯೋಗಿಗಳು, ಗುರುಗಳ ಸೇವೆಯನ್ನು ಸತ್ಯದಿಂದ ಆಚರಿಸಬೇಕು, ಅವರ ಮಾರ್ಗದರ್ಶನದಲ್ಲಿ ಮತ್ತು ಅವರ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು. ಸಮಾಜ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಸ್ಪಂದಿಸುವ ಕೆಲಸ ಮಾಡಬೇಕು ಎಂದರು.ಮುಖಂಡ ಮಹೇಶ ಕುರಂದವಾಡ ಮಾತನಾಡಿ, ಗುರು ಸಿದ್ದರಾಮೇಶ್ವರರು ೬೮ ಸಾವಿರ ಪ್ರವಚನ ಬರೆದಿದ್ದಾರೆ, ಅದರಲ್ಲಿ ಇನ್ನೂ ಕೆಲವು ಲಭ್ಯವಾಗಿಲ್ಲ. ಅವರ ತತ್ವ ಸಿದ್ದಾಂತಗಳನ್ನು ಅನುಸರಿಸಿದರೆ ಸಮಾಜ ಮುಂದೆ ಬರುತ್ತದೆ ಎಂದರು.ಕಾರ್ಯಕ್ರಮದಲ್ಲಿ ಮುಖಂಡರಾದ ಶೇಕಣ್ಣ ಹಾದಿಮನಿ, ಸದಾಶಿವಸ್ವಾಮಿ ಕಂಕನವಾಡ, ಉಮೇಶ ಗೌಳಿ, ಜಿಲಾನಿ ಜಂಗ್ಲಿ, ಹನಮಂತಪ್ಪ ಬಡ್ನಿ, ಮಂಜುನಾಥ ಗುಡಗೇರಿ, ಬಸವರಾಜ ವಡ್ಡರ, ಹನಮಂತಪ್ಪ ಬಾರಂಗಿ, ಹನಮಂತಪ್ಪ ತೆಮ್ಮನಕೊಪ್ಪ, ಬೀರಪ್ಪ ತಣ್ಣತಮ್ಮನವರ, ರಾಜು ಬಂಕಾಪೂರ, ಹನಮಂತಪ್ಪ ಬಂಡಿವಡ್ಡರ, ರಾಮಣ್ಣ ಧಾರವಾಡ, ಸಂತೋಷ ಬಂಡಿವಡ್ಡರ, ಸಾಗರ ವಡ್ಡರ, ಸುರೇಶ ವಡ್ಡರ, ಮಂಜು ವಡ್ಡರ, ಸುರೇಶ ವಡ್ಡರ ಸೇರಿದಂತೆ ಸಮಾಜದ ಮುಖಂಡರು ಯುವಕರು ಉಪಸ್ಥಿತರಿದ್ದರು.