ಪ್ರಗತಿಯತ್ತ ಸಿದ್ದೇನಳ್ಳಿ ಡೈರಿ

| Published : Sep 26 2025, 01:00 AM IST

ಸಾರಾಂಶ

ಸೂಲಿಬೆಲೆ: ಸಿದ್ದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ವೆಂಕಟೇಶ್ ಹೇಳಿದರು.

ಸೂಲಿಬೆಲೆ: ಸಿದ್ದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ವೆಂಕಟೇಶ್ ಹೇಳಿದರು. ಹೋಬಳಿಯ ಸಿದ್ದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಮಾತನಾಡಿ, ಪ್ರಸಕ್ತ ಸಾಲಿನಲ್ಲಿ 120 ಷೇರುದಾರರನ್ನು ಹೊಂದಿದೆ. 180 ಲೀಟರ್ ಹಾಲು ಸರಬರಾಜು ಮಾಡುತ್ತಿದೆ. ಪ್ರಸಕ್ತ ಸಾಲಿನಲ್ಲಿ 1 ಲಕ್ಷ ಲಾಭಾಂಶ ಬಂದಿದೆ ಎಂದರು. ಹೊಸಕೋಟೆ ಶಿಬಿರದ ವಿಸ್ತರಣಾಧಿಕಾರಿ ವಿದ್ಯಾಶ್ರೀ, ಡೈರಿ ಕಾರ್ಯದರ್ಶಿ ವೆಂಕಟೇಶ್, ಕೃಷಿ ಅಧಿಕಾರಿ ಸೌಮ್ಯ, ಗ್ರಾಪಂ ಮಾಜಿ ಸದಸ್ಯ ಎಸ್.ವಿ.ರಮೇಶ್, ಸುರೇಶ್, ಜಗದೀಶ್, ಸಂಘದ ಅಧ್ಯಕ್ಷ ವೆಂಕಟೇಶ್, ಉಪಾಧ್ಯಕ್ಷ ಆನಂದಪ್ಪ, ನಿರ್ದೇಶಕರಾದ ನಾಗೇಶ್, ರಾಜಣ್ಣ, ಚನ್ನಪ್ಪ, ಗೋಪಾಲ್, ರವಿಕುಮಾರ್, ಚಿಕ್ಕಮುನಿಯಪ್ಪ, ಗೌರಮ್ಮ, ಲಕ್ಷ್ಮೀ ಇತರರಿದ್ದರು.