ಸಾರಾಂಶ
ಉತ್ತರ ಕರ್ನಾಟಕದ ಪ್ರಸಿದ್ಧ ಸಿದ್ದೇಶ್ವರ ಜಾತ್ರೆಗೆ ಗೋಮಾತೆಗೆ ಹಾಗೂ ಪವಿತ್ರ ಸಪ್ತ ನಂದಿಕೋಲುಗಳಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪೂಜೆ ಸಲ್ಲಿಸುವ ಮೂಲಕ ವೈಭವಯುತ ಚಾಲನೆ ನೀಡಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಉತ್ತರ ಕರ್ನಾಟಕದ ಪ್ರಸಿದ್ಧ ಸಿದ್ದೇಶ್ವರ ಜಾತ್ರೆಗೆ ಗೋಮಾತೆಗೆ ಹಾಗೂ ಪವಿತ್ರ ಸಪ್ತ ನಂದಿಕೋಲುಗಳಿಗೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪೂಜೆ ಸಲ್ಲಿಸುವ ಮೂಲಕ ವೈಭವಯುತ ಚಾಲನೆ ನೀಡಿದರು.
ಗೋ ಮಾತೆ ಪೂಜೆಯನ್ನು ಮುರಗಯ್ಯಾ ಗಚ್ಚಿನಮಠ, ನಂದಿಕೋಲ ಪೂಜೆಯನ್ನು ಅರ್ಚಕ ಸಿದ್ದಯ್ಯ ಹಿರೇಮಠ, ಶಿವಾನಂದಯ್ಯ ಹಿರೇಮಠ, ನೀಲಕಂಠಯ್ಯಾ ಪೂಜಾರಿ ನೇರೆವೆರಿಸಿದರು. ಅಲ್ಲಿಂದ ಅರಂಭಗೊಂಡ ನಂದಿಕೋಲು ಮೆರವಣಿಗೆ ಅಟಲ್ ಬಿಹಾರಿ ವಾಜಪೇಯಿ ರಸ್ತೆಯಲ್ಲಿರುವ ಚರ್ತುಮುಖ ಗಣೇಶನ ದೇವಾಲಯಕ್ಕೆ ತಲುಪಿತು. ಅಲ್ಲಿಯೂ ಸಹ ವಿಶೇಷ ಪೂಜೆ ನೆರವೇರಿತು.
ನಗರದ ಐತಿಹಾಸಿ ಸಿದ್ದೇಶ್ವರ ದೇವಸ್ಥಾನದಲ್ಲಿ ನಂದಿಕೋಲುಗಳ ಪೂಜೆ ಜಾತ್ರಾ ಮಹೋತ್ಸವಗಳಲ್ಲಿ ಒಂದು. ಪವಿತ್ರ ಸಪ್ತ ನಂದಿಕೋಲುಗಳನ್ನು ಕಣ್ಮನ ಸೆಳೆಯುವ ರೀತಿಯಲ್ಲಿ ಅಲಂಕರಿಸಲಾಗುತ್ತದೆ.
ಭಕ್ತಾದಿಗಳು ಈ ನಂದಿಕೋಲುಗಳನ್ನು ಭಕ್ತಿಭಾವದಿಂದ ಮೆರವಣಿಗೆ ಮಾಡಿ ಕೃತಾರ್ಥರಾಗುತ್ತಾರೆ. ನಂದಿಕೋಲಗಳನ್ನು ಹಿಡಿಯುವ ಪಟುಗಳು ವಿಶೇಷ ಬಗೆಯ ಶುಭ್ರ ವರ್ಣದ ನೀಲುವಂಗಿ ದೋತ್ರ, ಪಟ್ಟವಡಿ ಧರಿಸಿ ಭಕ್ತಿಯಿಂದ ನಂದಿಕೋಲಗಳನ್ನು ಹಿಡಿದು ಹೆಜ್ಜೆ ಹಾಕಿದರು.
ಸಂಸ್ಥೆಯ ಉಪಾಧ್ಯಕ್ಷ ಸಂ.ಗು. ಸಜ್ಜನ, ಚೇರಮನ್ ಬಸಯ್ಯಾ ಹಿರೇಮಠ, ಸದಾನಂದ ದೇಸಾಯಿ, ಎಂ.ಎಂ.ಸಜ್ಜನ, ಬಿ.ಎಸ್. ಸುಗೂರ, ಶಿವಾನಂದ ನೀಲಾ, ಗುರು ಗಚ್ಚಿನಮಠ, ಶಿವರುದ್ರ ಬಾಗಲಕೋಟ, ರಾಹುಲ ಜಾಧವ, ಎಸ್.ಎಂ. ಪಾಟೀಲ, ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಎಸ್.ಸಿ. ಉಪ್ಪಿನ, ಎಸ್.ಎಚ್.ನಾಡಗೌಡ, ಚಂದು ಹುಂಡೆಕಾರ, ಎಂ.ಎಸ್. ಕರಡಿ, ಬಸವರಾಜ ಗಣಿ, ಸುಧೀರ ಚಿಂಚಲಿ, ಶಿವಾನಂದ ನೀಲಾ, ರಮೇಶ ಹಳ್ಳದ, ಸಾಯಿಬಣ್ಣ ಬೋವಿ.
ಶಶಿಕಾಂತ ಮುದಕಾಮಠ, ಬಾಗಪ್ಪ ಕನ್ನೋಳ್ಳಿ, ಶ್ರೀಮಂತ ಜಂಬಗಿ, ಪ್ರವೀಣ ಬಿಜ್ಜರಗಿ, ಈರಣ್ಣ ಪಾಟೀಲ, ಶಿವಾನಂದ ಚಿಮ್ಮಲಗಿ, ಚಂದ್ರು ಚೌಧರಿ, ಸುರೇಶ ಇಟಗಿ, ಮಲ್ಲಿಕಾರ್ಜುನ ಹಿಟ್ನಳಿ, ಬಸವರಾಜ ಬೆಲ್ಲದ, ಬಸವರಾಜ ಕಂದಗಲ, ಬಸವರಾಜ ಬಿರಾದಾರ, ಮಲಕಪ್ಪ ಗಾಣಿಗೇರ, ಲಕ್ಷ್ಮಣ ಜಾಧ ಮುಂತಾದವರು ಇದ್ದರು.
ನಂದಿಕೋಲು ಮೆರವಣೆಗೆ: ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನಗರದ ಸಿದ್ಧೇಶ್ವರ ದೇವಾಲಯದಲ್ಲಿ ಜಾತ್ರೆಯ ನಂದಿಕೋಲ ಪೂಜೆಗಳನ್ನು ಸಂಸ್ಥೆಯ ಅಧ್ಯಕ್ಷ ಹಾಗೂ ನಗರದ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿಶೇಷ ನೆರವೇರಿಸಿ, ಮೆರವಣಿಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ನಂದಿಕೋಲು ಸಿದ್ಧೇಶ್ವರ ದೇವಸ್ಥಾನದಿಂದ ಗಣಪತಿ ಚೌಕ, ಗಾಂಧಿ ಚೌಕ, ಕಿರಾಣಿ ಬಜಾರ, ಸರಾಫ ಬಜಾರ್, ೭೭೦ ಲಿಂಗದ ದೇವಾಲಯಗಳಿಗೆ ಹಾಗೂ ಶ್ರೀ ನೀಲಕಂಠೇಶ್ವರ ದೇವಾಲಯಕ್ಕ ಹೋಗಿ ಪೂಜೆ ಸಲ್ಲಿಸಿ, ಪುನಃ ಸಿದ್ದೇಶ್ವರ ದೇವಸ್ಥಾನಕ್ಕೆ ಮರಳಿತು.