ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
12ನೇ ಶತಮಾನದ ಜಗಜ್ಯೋತಿ ಬಸವೇಶ್ವರರು ಹಾಗೂ ಕಾಯಕ ಯೋಗಿ ಸಿದ್ಧರಾಮೇಶ್ವರರರು ಶ್ರೇಷ್ಠ ವಚನಕಾರರಾಗಿದ್ದರು ಎಂದು ಉಪನ್ಯಾಸಕ ಗಣೇಶ ಪವಾರ ಬೀದರ ಹೇಳಿದರು.ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಭೋವಿ ವಡ್ಡರ ಸಮಾಜದಿಂದ ನಡೆದ ಕಾಯಕಯೋಗಿ ಸಿದ್ಧರಾಮೇಶ್ವರರ ಜಯಂತ್ಯುತ್ಸವ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಮಾತನಾಡಿದರು. ಬಸವಣ್ಣನವರು ಸಾಮಾಜಿಕವಾಗಿ ಹೆಚ್ಚು ಒತ್ತು ಕೊಡುತ್ತಿದ್ದರು, ಸಿದ್ಧರಾಮೇಶ್ವರರು ಸಮಾಜ ಸೇವೆಯಲ್ಲಿ ತೃಪ್ತಿ ಪಡೆಯುತ್ತಿದ್ದರು ಎಂದರು. ೧೨ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ಧರಾಮೇಶ್ವರರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ ಮೂಲಕ ಮಾಡಿದವರು, ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ ಎಂದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶರಣರನ್ನು, ಮಹಾಪುರುಷರನ್ನು ಒಂದೊಂದು ಜಾತಿಗೆ ಸೀಮಿತ ಮಾಡಿ ಜಯಂತಿ ಆಚರಿಸುತ್ತಿರುವುದು ದುರ್ದೈವದ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.ಸಮಾರಂಭವನ್ನು ತಹಸೀಲ್ದಾರ್ ಸಯ್ಯಾದ್ ಷಾಷಾವಲ್ಲಿ ಉದ್ಘಾಟಿಸಿದರು. ದಿಗ್ಗಾಂವ ಕಂಚಗಾರಹಳ್ಳದ ಶ್ರೀ ಮಲ್ಲಯ್ಯಸ್ವಾಮಿ ಸ್ಥಾವರಮಠ, ಮಸ್ಕನಳ್ಳಿ ಶ್ರೀ ಮಾರುತಿ ತಾತನವರು ಸಾನಿಧ್ಯ ವಹಿಸಿದ್ದರು. ನ್ಯಾಯವಾದಿ ಶ್ರವಣಕುಮಾರ ಮುಸಲಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ಸಾಲಿ, ಭೋವಿ ಸಮಾಜದ ತಾಲೂಕು ಅಧ್ಯಕ್ಷ ಹಣಮಂತ ಚೌದರಿ ಕಟ್ಟಿಮನಿ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಕಾಶಿ, ಮಲ್ಲಿಕಾರ್ಜುನ ಕಾಳಗಿ, ಸದಸ್ಯ ಸಂತೋಷ ಚೌದರಿ, ಭೋವಿ ಸಮಾಜದ ಮುಖಂಡರಾದ ಸೂರ್ಯಕಾಂತ ಕಟ್ಟಮನಿ, ರಾಮಯ್ಯ ಪೂಜಾರಿ, ಮಲ್ಲಪ್ಪ ಚೌದರಿ, ರವಿಚಂದ್ರ ಗುತ್ತೇದಾ ಜೇವರ್ಗಿ, ರಾಜು ಮುಡಬೂಳ, ಭೀಮು ಮುಡಬೂಳ, ಚಂದ್ರಶೇಖರ ಗದ್ವಾಲ್, ಗುಂಡಪ್ಪ ಬಿಜಾಪೂರ, ಮಹೇಶ ಕಾಶಿ, ರಾಮು ಹರವಾಳ, ರಘುವೀರ ಪವಾರ, ದೇವು ಭಂಡಾರಿ, ಭೀಮಾಶಂಕರ ವಾಡಿ, ಶಿವಕುಮಾರ ಚೌದರಿ, ಸಿದ್ದು ಪವಾರ, ರವಿ ವಿಟ್ಕರ್, ವೆಂಕಟೇಶ ಹರವಾಳ, ಶಿವಾಜಿ ಭೀಮನಳ್ಳಿ, ಬಾಬುರಾವ ವಲ್ಯಾಪೂರೆ, ಸಂಥೋಷ ಕಾಶಿ, ಮೋಹನ ಕಾಶಿ, ರಾಮಲಿಂಗ ಡೋಣಗಾಂವ, ಚಂದ್ರಕಾಂತ ಸಣ್ಣಮನಿ, ಯಂಕಪ್ಪ ಹರವಾಳ, ವಿಶ್ವನಾಥ ಚೌದರಿ, ತಮ್ಮಣ್ಣ ಚೌದರಿ, ಹುಲಗಪ್ಪ ಇಂಗಳಗಿ, ಯಮನಪ್ಪ ಬೋಸಗಿ, ವೆಂಕಟೇಶ ಇಂಗಳಗಿ, ರಾಜು ಆಂದೋಲಿ, ಭೀಮು ಕರದಾಳ, ಶಂಕರ ಚೌದರಿ ಈರಣ್ಣ ದೊಡ್ಡಮನಿ, ಶರಣಪ್ಪ ರಾವೂರ, ಕೃಷ್ಣಾ ಭಂಕಲಗಿ, ಸುಭಾಷ ಕಟ್ಟಿಮನಿ, ವಿಠ್ಠಲ್ ಕಟ್ಟಿಮನಿ ಇತರರು ಇದ್ದರು.ಇದೇ ಸಂದರ್ಭದಲ್ಲಿ ಕರಾಟೆ ಶಿಕ್ಷಕರಾದ ವಿಜಯಕುಮಾರ ಹರವಾಳ, ಸಂಜಯಕುಮಾರ ಚೌದರಿ, ಮಾರುತಿ ಬೋಸಗಿ, ಚಂದ್ರಶೇಖರ ಉಡಗಿರನ್ನು ಸನ್ಮಾನಿಸಿ ಗೌರವಿಸಲಾಯಿತು. ಸುಭಾಶ್ಚಂದ್ರ ಪವಾರ ನಿರೂಪಿಸಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಿದ್ಧರಾಮೇಶ್ವರರರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.