ಸಾರಾಂಶ
ವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಬುದ್ಧ, ಬಸವ, ಯೇಸು, ಗಾಂಧಿ, ಅಂಬೇಡ್ಕರ್ ಸೇರಿದಂತೆ ಜಗತ್ತಿನ ನೂರಾರು ಚಿಂತಕರ, ದಾರ್ಶನಿಕರ, ಮಹಾತ್ಮರ, ಮಹನೀಯರ ತತ್ವ್ಞಾದರ್ಶಗಳ ಒಟ್ಟು ಮೊತ್ತದಂತಿದ್ದರು
ಕನ್ನಡಪ್ರಭ ವಾರ್ತೆ ಮೈಸೂರು
ಸಾಮಾನ್ಯರಾಗಿ ಹುಟ್ಟಿ ಅಸಾಮಾನ್ಯರಾಗಿ ಬೆಳೆದು ಮನುಷ್ಯತ್ವದಿಂದ ದೈವತ್ವಕ್ಕೇರಿದ ದೇವಪುರುಷರು ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳು ಎಂದು ಸಾಹಿತಿ ಬನ್ನೂರು ಕೆ. ರಾಜು ಬಣ್ಣಿಸಿದರು.ನಗರದ ಕೃಷ್ಣಮೂರ್ತಿಪುರಂನ ನಮನ ಕಲಾ ಮಂಟಪದಲ್ಲಿ ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನವು ಸೋಮವಾರ ಆಯೋಜಿಸಿದ್ದ ಶ್ರೀ ಡಾ. ಶಿವಕುಮಾರ ಸ್ವಾಮೀಜಿಗಳ 117ನೇ ಜಯಂತಿ ಮತ್ತು ಶ್ರೀ ಸಿದ್ಧಗಂಗಾ ಸಿರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳು ಬುದ್ಧ, ಬಸವ, ಯೇಸು, ಗಾಂಧಿ, ಅಂಬೇಡ್ಕರ್ ಸೇರಿದಂತೆ ಜಗತ್ತಿನ ನೂರಾರು ಚಿಂತಕರ, ದಾರ್ಶನಿಕರ, ಮಹಾತ್ಮರ, ಮಹನೀಯರ ತತ್ವ್ಞಾದರ್ಶಗಳ ಒಟ್ಟು ಮೊತ್ತದಂತಿದ್ದರು. ಸಿದ್ಧಗಂಗಾ ಶ್ರೀಗಳು ಅಕ್ಷರಶಃ 12ನೇ ಶತಮಾನದ ಬಸವಾದಿ ಶರಣರ ಆಶಯದ ಅನ್ವರ್ಥದಂತಿದ್ದು 111 ವರ್ಷಗಳ ಸುದೀರ್ಘಕಾಲ ಕನ್ನಡ ನಾಡಿನ ಬೆಳಕಾಗಿ ಬದುಕಿದ್ದರು ಎಂದು ಅವರು ತಿಳಿಸಿದರು.ವಿವಿಧ ಕ್ಷೇತ್ರಗಳ ಸಾಧಕರಾದ ಎಚ್.ವಿ. ಮುರಳೀಧರ್ (ಶಿಕ್ಷಣ), ರಾಮದಾಸ್ (ಸಾರ್ವಜನಿಕ ಸೇವೆ), ಟಿ.ಎಂ. ರವಿಕುಮಾರ್ (ಉದ್ಯಮಿ), ಉಮ್ಮತ್ತೂರು ಚಂದ್ರು (ಸಮಾಜ ಸೇವೆ), ಸುರೇಶ್ ಗೌಡ (ಕಲಾ ಕ್ಷೇತ್ರ), ರುಕ್ಮಿಣಿ (ಸಮಾಜ ಸೇವೆ) ಅವರಿಗೆ ಶ್ರೀ ಸಿದ್ಧಗಂಗಾ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕನ್ನಡ ಸಾಹಿತ್ಯ ಕಲಾಕೂಟದ ಅಧ್ಯಕ್ಷ ಎಂ. ಚಂದ್ರಶೇಖರ್, ಕವಯಿತ್ರಿ ಡಾ. ಲೀಲಾ ಪ್ರಕಾಶ್, ಸಮಾಜ ಸೇವಕ ಕೆ. ರಘುರಾಂ, ಉದ್ಯಮಿ ವಿ.ಎಂ. ಮಣಿಕಂಠ ಇದ್ದರು. ಅನಘಾ ಪ್ರಾರ್ಥಿಸಿದರು. ಶ್ರೀ ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷ ಬಸವ ರಾಜೇಂದ್ರಸ್ವಾಮಿ ಸ್ವಾಗತಿಸಿದರು.-----------------
eom/mys/shekar/