ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕೋಡಿ
ಶ್ರೀ ಸಿದ್ಧಿ ವಿನಾಯಕ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘವು ಕಳೆದೆ ವರ್ಷಾಂತ್ಯಕ್ಕೆ ₹118 ಕೋಟಿ ಠೇವು ಸಂಗ್ರಹಿಸಿದ್ದು, ಬರುವ ಕೆಲವೇ ದಿನಗಳಲ್ಲಿ ₹150 ಕೋಟಿ ಠೇವು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸಂಜಯ ಅಡಕೆ ಹೇಳಿದರು.ಇಲ್ಲಿನ ಕೇಶವ ಕಲಾಭವನದಲ್ಲಿ ಆಯೋಜಿಸಿದ ಸಿದ್ಧಿ ವಿನಾಯಕ ಕ್ರೆಡಿಟ್ ಸೌಹಾರ್ದ ಸಹಕಾರಿಯ 23ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಹಕಾರಿಯು ಅಭಿವೃದ್ಧಿಯತ್ತ ಮುನ್ನಡೆದಿರುವುದರಿಂದ ಬರುವ ಕೆಲವೇ ದಿನಗಳಲ್ಲಿ ಐನಾಪೂರದಲ್ಲಿ ನೂತನ ಶಾಖೆ ಪ್ರಾರಂಭವಾಗಲಿದೆ. ನಮ್ಮ ಸಹಕಾರಿಯ ಜೊತೆಗೆ ಮಹಿಳೆಯರಿಗೆ ಪ್ರಾರಂಭಿಸಿದ ಸಿದ್ದಿಪ್ರೀಯಾ ಸಂಸ್ಥೆಯನ್ನು ಮಾತೃ ಸಂಸ್ಥೆ ಸಿದ್ದಿವಿನಾಯಕದಲ್ಲಿ ವಿಲೀನಗೊಳಿಸಲು ನಿರ್ಧರಿಸಿಲಾಗಿದೆ. ಗ್ರಾಹಕರಿಗೆ ಒಂದೇ ವೇದಿಕೆಯಲ್ಲಿ ಎಲ್ಲ ಸೇವೆಗಳನ್ನು ನೀಡಲು ನಿರ್ದರಿಸಲಾಗಿದ್ದು ಪ್ರಾರಂಭಿಕವಾಗಿ ಸಹಕಾರಿ ಸಂಸ್ಥೆಯ ಹಿರಿಯ ನಾಗರಿಕರಿಗೆ ಹಾಗೂ ಸದಸ್ಯರಿಗೆ ತೀರ್ಥಕ್ಷೇತ್ರಕ್ಕೆ ದರ್ಶನಕ್ಕೆ ಪ್ರವಾಸ ಪ್ಯಾಕೇಜ್ ಪ್ರಾರಂಭಿಸಲಾಗಿದೆ ಎಂದರು.
ಸಹಕಾರಿಯು ಆರ್ಥಿಕ ವರ್ಷದ ಕೊನೆಗೆ ಕಾಯ್ದಿಟ್ಟ ನಿಧಿ ₹1.66 ಕೋಟಿ, ₹3 ಕೋಟಿ ನಿಧಿಗಳು, ₹118 ಕೋಟಿ ಠೇವು ಸಂಗ್ರಹಿಸಿದೆ. ವರದಿ ಸಾಲಿನಲ್ಲಿ ₹80 ಕೋಟಿ ಸಾಲ ವಿತರಿಸಿದೆ. ₹29 ಕೋಟಿ ವಿವಿಧೆಡೆ ಗುಂತಾವಣೆ ಮಾಡಲಾಗಿದೆ. ಸಹಕಾರಿಯ ದುಡಿಯುವ ಬಂಡವಾಳ ವರ್ಷದ ಕೊನೆಗೆ ₹123 ಕೋಟಿ ಹೊಂದಿದ್ದು, ₹1.15 ಕೋಟಿ ನಿವ್ವಳ ಲಾಭಗಳಿಸಿದ್ದು ಸದಸ್ಯರಿಗೆ ಶೇ.15ರಷ್ಟು ಲಾಭಾಂಶ ವಿತರಿಸಲಾಗಿದೆ ಎಂದು ತಿಳಿಸಿದರು.ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿದ್ದ ಹಂಚಿನಾಳ ಕೆಎಸ್ಎನ್ ಭಕ್ತಿಯೋಗಾಶ್ರಮದ ಮಹೇಶಾನಂದ ಮಹಾಸ್ವಾಮೀಜಿ ಮಾತನಾಡಿ, ಸಹಕಾರಿಯಲ್ಲಿ ಗ್ರಾಹಕರು ಇಟ್ಟಿರುವ ಶ್ರದ್ಧೆ ಹಾಗೂ ವಿಶ್ವಾಸದಿಂದ ಸಂಸ್ಥೆ 23 ವರ್ಷಗಳ ಕಾಲ ತನ್ನ ಆರ್ಥಿಕ ಭದ್ರತೆ ಕಾಪಾಡಿಕೊಂಡಿರುವುದು ಶ್ಲಾಘನೀಯ ಎಂದರು. ಸಹಕಾರಿಯ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ವಿದ್ಯಾರ್ಥಿ ನಗದು ಬಹುಮಾನ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಮೃತ ಸದಸ್ಯರ ಕುಟುಂಬಗಳಿಗೆ ಸಹಕಾರಿಯು ₹10 ಲಕ್ಷ ವಿಮೆ ಹಣ ಸಿಗುವಂತಹ ಪಾಲಸಿಗಳನ್ನು ವಿತರಿಸಲಾಯಿತು.
ಸಹಕಾರಿಯ ಸದಸ್ಯರಿಗೆ ವಿಮೆ ಸೌಲಭ್ಯದ ಕುರಿತು ವಿಮೆ ಮುಖ್ಯಸ್ಥ ರಾಜಾರಾಮ ಪವಾರ ಮಾಹಿತಿ ನೀಡಿದರು. ಉಪಾಧ್ಯಕ್ಷ ಕೃಷ್ಣಾ ಭೋಸಲೆ, ನಿರ್ದೇಶಕರಾದ ಸುಜೀತ್ ದಿಕ್ಷೀತ, ಅಪ್ಪಾಸಾಹೇಬ ಚವ್ಹಾಣ, ಗೋವಿಂದ ಅಡಕೆ, ಸದಾಶಿವ ಮಾಳಿ, ನಯನಾ ಹಿರೇಕೊಡಿ, ಸುಧಾ ದಿಕ್ಷಿತ, ಪ್ರಕಾಶ ಹುಬರಟ್ಟಿ, ಆನಂದ ಕುಂಬಾರ, ಅರುಣ ನೇರ್ಲಿ, ರವೀಂದ್ರ ಬನಸೋಡೆ, ವಿಠಲ ಘಟ್ಟಿ ಹಾಗೂ ಕಲ್ಲೋಳ, ರಾಯಬಾಗ, ನಿಪ್ಪಾಣಿ, ಎಕ್ಸಂಬಾ, ಹಂದಿಗುಂದ, ಐನಾಪೂರ ಶಾಖೆಯ ಎಲ್ಲ ಸಲಹಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಮಹೇಶ ಬಾಕಳೆ ಸ್ವಾಗತಿಸಿದರು.