ಸಾರಾಂಶ
ಸಿದ್ದನೂರ ಗ್ರಾಮದಿಂದ ರೇವೂರ ಸಂಪರ್ಕ ಮಾಡುವ ರಸ್ತೆಯಲ್ಲಿ ಬರುವ ಹಳ್ಳ ತುಂಬಿಕೊಂಡಿದ್ದು ಹಳ್ಳಕ್ಕೆ ಕಟ್ಟಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದೆ.
ಕನ್ನಡಪ್ರಭ ವಾರ್ತೆ ಚವಡಾಪುರ
ಕಳೆದ ಎರಡ್ಮೂರು ದಿನಗಳಿಂದ ಅಫಜಲ್ಪುರ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು ಹಳ್ಳ ಕೊಳ್ಳಗಳಿಗೆ ನೀರು ತುಂಬಿಕೊಳ್ಳುತ್ತಿದೆ. ಅದರಲ್ಲೂ ಸಿದ್ದನೂರ ಗ್ರಾಮದಿಂದ ರೇವೂರ ಸಂಪರ್ಕ ಮಾಡುವ ರಸ್ತೆಯಲ್ಲಿ ಬರುವ ಹಳ್ಳ ತುಂಬಿಕೊಂಡಿದ್ದು ಹಳ್ಳಕ್ಕೆ ಕಟ್ಟಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದೆ.ಪ್ರತಿವರ್ಷ ಉತ್ತಮ ಮಳೆಯಾದಾಗಲೊಮ್ಮೆ ಈ ಹಳ್ಳದ ಸೇತುವೆ ಮೇಲಿಂದ ನೀರು ಹರಿಯುತ್ತದೆ. ಹೀಗಾಗಿ ಎರಡು ಗ್ರಾಮಗಳ ಜನ ಸಂಚರಿಸಲು ಸಮಸ್ಯೆ ಆಗುತ್ತಿದೆ. ಹೀಗಾಗಿ ಸೇತುವೆಯನ್ನು ಇನ್ನಷ್ಟು ಎತ್ತರಕ್ಕೆ ಕಟ್ಟಿಸಬೇಕೆಂದು ಅನೇಕ ವರ್ಷಗಳಿಂದ ಬೇಡಿಕೆ ಇಡಲಾಗುತ್ತಿದ್ದರೂ ಕೂಡ ಸಂಬಂಧ ಪಟ್ಟವರು ತಲೆ ಕೆಡಿಸಿಕೊಳ್ಳುತ್ತಿಲ್ಲ. ಅವಗಢಗಳು ಸಂಭವಿಸುವ ಮುನ್ನ ಸಂಬಂಧ ಪಟ್ಟವರು ಕೂಡಲೇ ಹಳ್ಳದ ಸೇತುವೆಯನ್ನು ಎತ್ತರಿಸಿ ಸಿದ್ದನೂರ, ರೇವೂರ ಜನರಿಗೆ ಸಂಚರಿಸಲು ಅನುಕೂಲ ಮಾಡಿಕೊಡಬೇಕು ಮತ್ತು ರೈತರ ಬೆಳೆಗಳಿಗೆ ನೀರು ನುಗ್ಗಿ ಬೆಳೆ ಹಾಳಾಗುತ್ತಿದ್ದು ಹಾಳಾದ ಬೆಳೆಗೆ ಸರ್ಕಾರ ಪರಿಹಾರ ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.