ಕನ್ನಡಪ್ರಭ ವಾರ್ತೆ ಬೇಲೂರು
ಮಹಿಳಾ ಮೀಸಲಾತಿಯನ್ನು 33% ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸಿ ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಸಹಿ ಸಂಗ್ರಹಣಾ ಅಭಿಯಾನ ನಡೆಸಲಾಯಿತು.ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪುರಸಭೆ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ತೀರ್ಥಕುಮಾರಿ ವೆಂಕಟೇಶ್ ಮಾತನಾಡಿ ಮಹಿಳಾ ಮೀಸಲಾತಿ ಕುರಿತು ಲೋಕಸಭೆಯಲ್ಲಿ ನಡೆದ ಬೆಳವಣಿಗೆಗಳನ್ನು ಉಲ್ಲೇಖಿಸಿದ, ಮಹಿಳಾ ಮೀಸಲಾತಿ ಹಾಗೂ ಕ್ಷೇತ್ರ ಪುನರ್ ವಿಂಗಡಣೆ ಕಾಯ್ದೆಗಳನ್ನು ಒಟ್ಟಿಗೆ ತರಲಾಗಿದ್ದು, ಇದರಿಂದ ಬಿಲ್ ಪಾಸ್ ಆಗಲು ಅಡ್ಡಿಯಾಗಿದೆ. ಕಾಂಗ್ರೆಸ್ ವಿರೋಧಿಸಿದೆ ಎಂಬ ಮಾತು ತಪ್ಪು ಕಲ್ಪನೆ ಎಂದರು.ಚುನಾವಣಾ ಗಿಮಿಕ್‌ಗಾಗಿ ಮಹಿಳಾ ಮೀಸಲಾತಿ ಬಿಲ್ ಅನ್ನು ಕ್ಷೇತ್ರ ಪುನರ್ ವಿಂಗಡಣೆಯೊಂದಿಗೆ ತರಲಾಗುತ್ತಿದೆ. ಇದರಿಂದ ಮಹಿಳಾ ಪರ ಸರ್ಕಾರ ಎಂಬ ಭಾವನೆ ಮೂಡಿಸಲು ಯತ್ನಿಸಲಾಗುತ್ತಿದೆ ಮಹಿಳಾ ಸಬಲೀಕರಣದ ಬಗ್ಗೆ ನಿಜವಾದ ಬದ್ಧತೆ ಇದ್ದರೆ, 33% ಮೀಸಲಾತಿ ಬಿಲ್ ಅನ್ನು ಪ್ರತ್ಯೇಕವಾಗಿ ಪಾಸ್ ಮಾಡಬೇಕು ಕ್ಷೇತ್ರ ಪುನರ್ ವಿಂಗಡಣೆ ಕುರಿತು ಆತಂಕ ವ್ಯಕ್ತಪಡಿಸಿದ ಅವರು, “ಜನಸಂಖ್ಯೆ ಆಧಾರಿತ ಪುನರ್ವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಇದು ಉತ್ತರ ಭಾರತದ ಕೆಲವು ಭಾಗಗಳಿಗೆ ಹೆಚ್ಚಿನ ಲಾಭ ನೀಡುವಂತಿದೆ” ಎಂದು ಅಭಿಪ್ರಾಯಪಟ್ಟರು.ಇದೇ ವೇಳೆ ಬಿಜೆಪಿ ಸರ್ಕಾರವನ್ನು ಟೀಕಿಸಿದ ಅವರು, ಕುತಂತ್ರ ಬುದ್ಧಿಯನ್ನು ಬಿಟ್ಟು ಮಹಿಳೆಯರ ಪರ ನಿಷ್ಠೆಯಿಂದ ಕೆಲಸ ಮಾಡಬೇಕು. ಮಹಿಳಾ ಮೀಸಲಾತಿ ಬಿಲ್ ಪಾಸ್ ಮಾಡುವ ಮೂಲಕ ತನ್ನ ಬದ್ಧತೆಯನ್ನು ತೋರಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಮಹಿಳೆಯರ ಪರ ಹಲವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ನಮ್ಮ ಪಕ್ಷ ಯಾವತ್ತೂ ಮಹಿಳಾ ಪರವಾಗಿದೆ ಎಂದು ಅವರು ಹೇಳಿದರು. ನಂತರ ಮಾತನಾಡಿದ ಪುರಸಭೆ ನಾಮಿನಿ ಸದಸ್ಯೆ ಸೌಭಾಗ್ಯ ಆಂತೋಣಿ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಮಹಿಳೆಯರು ಸುಮಾರು 50% ಇದ್ದರೂ ರಾಜಕೀಯ ಕ್ಷೇತ್ರದಲ್ಲಿ ಅವರ ಪ್ರತಿನಿಧಿತ್ವ ಕೇವಲ 5ರಿಂದ 6% ಮಾತ್ರ ಇರುವುದನ್ನು ವಿಷಾದಿಸಿದರು.ಮಹಿಳೆಯರು ಸಮಾನ ಹಕ್ಕುಗಳೊಂದಿಗೆ ರಾಜಕೀಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದು ಅಗತ್ಯ. ಮೀಸಲಾತಿಗೆ ಕೆಲ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿದ್ದು, ಇಂದಿನ ಸೀಟು ಹಂಚಿಕೆಯಲ್ಲಿ ಬದಲಾವಣೆ ಆಗುವ ಭಯವೇ ಅದಕ್ಕೆ ಕಾರಣವಾಗಿರಬಹುದು ಜನಗಣತಿಯನ್ನು ಕಾರಣವನ್ನಾಗಿ ತೋರಿಸಿ ಮೀಸಲಾತಿಯನ್ನು ಮುಂದೂಡುವ ಅಗತ್ಯವಿಲ್ಲ. ಈ ಹಿನ್ನೆಲೆಯಲ್ಲಿ ಬೇಲೂರು ತಾಲೂಕಿನಲ್ಲಿ ಸಹಿ ಸಂಗ್ರಹಣೆ ನಡೆಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಸುಮಾರು 50ಕ್ಕೂ ಹೆಚ್ಚು ಕಾಂಗ್ರೆಸ್ ಸದಸ್ಯರು ಸಹಿ ಮಾಡಿ ಬೆಂಬಲ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಉಷಾ ಸತೀಶ್, ಸದಸ್ಯೆ ಮೀನಾಕ್ಷಿ ವೆಂಕಟೇಶ್, ಜಮೀಲಾ ತೌಫಿಕ್, ಬಿ. ಗಿರೀಶ್, ಜ್ಯೋತಿ, ರಶ್ಮಿ ಮಂಜುನಾಥ್, ವಿಶಾಲಾಕ್ಷಿ ಸೇರಿದಂತೆ ಹಲವರು ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ. ಆರ್. ವೆಂಕಟೇಶ್, ರವೀಶ್ ಬಸವಾಪುರ, ದೇವು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.ಮಹಿಳಾ ಕಾಂಗ್ರೆಸ್ ಘಟಕದ ವತಿಯಿಂದ ಸಹಿ ಸಂಗ್ರಹ ಅಭಿಯಾನ
ಚುನಾವಣಾ ಗಿಮಿಕ್‌ಗಾಗಿ ಮಹಿಳಾ ಮೀಸಲಾತಿ ಬಿಲ್ ಅನ್ನು ಕ್ಷೇತ್ರ ಪುನರ್ ವಿಂಗಡಣೆಯೊಂದಿಗೆ ತರಲಾಗುತ್ತಿದೆ. ಇದರಿಂದ ಮಹಿಳಾ ಪರ ಸರ್ಕಾರ ಎಂಬ ಭಾವನೆ ಮೂಡಿಸಲು ಯತ್ನಿಸಲಾಗುತ್ತಿದೆ ಮಹಿಳಾ ಸಬಲೀಕರಣದ ಬಗ್ಗೆ ನಿಜವಾದ ಬದ್ಧತೆ ಇದ್ದರೆ, 33% ಮೀಸಲಾತಿ ಬಿಲ್ ಅನ್ನು ಪ್ರತ್ಯೇಕವಾಗಿ ಪಾಸ್ ಮಾಡಬೇಕು ಕ್ಷೇತ್ರ ಪುನರ್ ವಿಂಗಡಣೆ ಕುರಿತು ಆತಂಕ ವ್ಯಕ್ತಪಡಿಸಿದ ಅವರು, “ಜನಸಂಖ್ಯೆ ಆಧಾರಿತ ಪುನರ್ವಿಂಗಡಣೆ ಮಾಡಿದರೆ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವಾಗುವ ಸಾಧ್ಯತೆ ಇದೆ. ಇದು ಉತ್ತರ ಭಾರತದ ಕೆಲವು ಭಾಗಗಳಿಗೆ ಹೆಚ್ಚಿನ ಲಾಭ ನೀಡುವಂತಿದೆ” ಎಂದು ಅಭಿಪ್ರಾಯಪಟ್ಟರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.