ಸಾರಾಂಶ
ಅರೇಹಳ್ಳಿಯ ಸಕಲೇಶಪುರ ರಸ್ತೆಯಲ್ಲಿರುವ ಕಾಫಿ ಬೆಳೆಗಾರರ ಸಂಘದ ಶ್ರೀ ಸಿದ್ದೇಶ್ ನಾಗೇಂದ್ರ ವೇದಿಕೆಯಲ್ಲಿ ಆಯೋಜನೆ ಮಾಡಲಾಗಿದ್ದ ಬೆಳ್ಳಿಹಬ್ಬ ಸಂಭ್ರಮ, ಮೊದಲನೇ ಮಹಡಿ ಕಟ್ಟಡದ ಉದ್ಘಾಟನೆ ಹಾಗೂ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಈ ವರ್ಷ ಕಾಫಿ ಮೂಲಕ ವಂತಿಗೆ ರೂಪದಲ್ಲಿ ೧೫ ಲಕ್ಷ ರು. ಸಂಗ್ರಹಿಸಿ ಸಂಘದ ಬೆಳವಣಿಗೆಗಾಗಿ ಸೇವೆ ಮಾಡಲಾಗುತ್ತಿದೆ ಎಂದರು. ಕಾಡಾನೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕುವಂತೆ ಮಾಡುವಲ್ಲಿ ನಿರಂತರ ಹೋರಾಟವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಬೇಲೂರು
ಹತ್ತಾರು ಬೆಳೆಗಾರರ ಜ್ವಲಂತ ಸಮಸ್ಯೆಗಳ ಕುರಿತು ನಿರಂತರವಾಗಿ ಹೋರಾಟ ನಡೆಸಿ ಬೆಳೆಗಾರರ ಹಿತಾಸಕ್ತಿಗಾಗಿ ಹಗಲಿರುಳು ದುಡಿಯಲಾಗುತ್ತಿದೆ ಎಂದ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಪಿ ಬಸವರಾಜು ಹೇಳಿದರು.ತಾಲೂಕಿನ ಅರೇಹಳ್ಳಿಯ ಸಕಲೇಶಪುರ ರಸ್ತೆಯಲ್ಲಿರುವ ಕಾಫಿ ಬೆಳೆಗಾರರ ಸಂಘದ ಶ್ರೀ ಸಿದ್ದೇಶ್ ನಾಗೇಂದ್ರ ವೇದಿಕೆಯಲ್ಲಿ ಆಯೋಜನೆ ಮಾಡಲಾಗಿದ್ದ ಬೆಳ್ಳಿಹಬ್ಬ ಸಂಭ್ರಮ, ಮೊದಲನೇ ಮಹಡಿ ಕಟ್ಟಡದ ಉದ್ಘಾಟನೆ ಹಾಗೂ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದ ಅವರು, ಈ ವರ್ಷ ಕಾಫಿ ಮೂಲಕ ವಂತಿಗೆ ರೂಪದಲ್ಲಿ ೧೫ ಲಕ್ಷ ರು. ಸಂಗ್ರಹಿಸಿ ಸಂಘದ ಬೆಳವಣಿಗೆಗಾಗಿ ಸೇವೆ ಮಾಡಲಾಗುತ್ತಿದೆ ಎಂದರು.
ಜಿಲ್ಲಾ ಪ್ಲಾಂಟರ್ಸ್ ಸಂಘದ ಉಪಾಧ್ಯಕ್ಷ ಮಂಜುನಾಥ್ ಶೆಟ್ಟಿ ಮಾತನಾಡಿ, ಸಂಘದ ಮೂಲಕ ಒತ್ತುವರಿ ಸಮಸ್ಯೆ, ಕಾಡಾನೆ ಸಮಸ್ಯೆಗಳಿಗೆ ಸೂಕ್ತ ಪರಿಹಾರ ದೊರಕುವಂತೆ ಮಾಡುವಲ್ಲಿ ನಿರಂತರ ಹೋರಾಟವನ್ನು ಮಾಡಿಕೊಂಡು ಬರಲಾಗುತ್ತಿದೆ ಎಂದರು.ಸಭಾಂಗಣದ ದಾನಿ ಸಿದ್ದೇಶ್ ನಾಗೇಂದ್ರ ಮಾತನಾಡಿ, ನಾನು ಕಾಫಿ ಬೆಳೆಗಾರನಲ್ಲದಿದ್ದರೂ ಮೂಲತಃ ನನ್ನ ಕುಟುಂಬ ಕಾಫಿ ಬೆಳೆಯನ್ನು ನಂಬಿ ಬದುಕುತ್ತಿದ್ದ ಕುಟುಂಬವಾದ್ದರಿಂದ ಸಂಘಕ್ಕೆ ನೆರವಾಗುವ ನಿಟ್ಟಿನಲ್ಲಿ ಸಭಾಂಗಣವನ್ನು ನಿರ್ಮಾಣವನ್ನು ಮಾಡಲು ಶ್ರೀ ಸಿದ್ದೇಶ್ ನಾಗೇಂದ್ರ ಸೇವಾ ಪ್ರತಿಷ್ಠಾನದ ಮೂಲಕ ಕೊಡುಗೆ ನೀಡಲಾಗಿದೆ ಎಂದರು.
ಈ ವೇಳೆ ಶಾಸಕ ಹುಲ್ಲಳ್ಳಿ ಸುರೇಶ್, ಸಂಘದ ಉಪಾಧ್ಯಕ್ಷ ಶಾರೀಬ್ ಫರ್ಹಾನ್, ಕಾರ್ಯದರ್ಶಿ ಕೆ.ಬಿ.ಪುಟ್ಟರಾಜು,ಜಂಟಿ ಕಾರ್ಯದರ್ಶಿ ಬಿ.ಸಿ. ಮೋಹನ್ ಕುಮಾರ್, ಪರಮೇಶ್, ಲೋಹಿತ್, ಅಮಿತ್ ಶೆಟ್ಟಿ, ಯು.ಪಿ.ಮಲ್ಲೇಶ್, ಎಂ.ಆರ್. ವಿನೋದ್, ನಜೀಬುರ್ ರೆಹಮಾನ್, ರಾಜೇಗೌಡ, ಚೇತನ್ ಕುಮಾರ್, ಡಬ್ಲ್ಯೂ.ಆರ್. ಪಿಂಟೊ ಹಾಗೂ ಇನ್ನಿತರರು ಇದ್ದರು.