ಮಳವಳ್ಳಿ ಮೈಸೂರು, ಕೊಳ್ಳೇಗಾಲ ಮದ್ದೂರು ಮುಖ್ಯ ರಸ್ತೆಗಳಲ್ಲಿ ಶ್ರೀಗಳ ಪಲ್ಲಕ್ಕಿ ಉತ್ಸವ ಬರುವ ಹಿನ್ನೆಲೆಯಲ್ಲಿ ರಸ್ತೆಗೆ ನೀರು ಹಾಕುವುದರ ಜೊತೆಗೆ ತಳಿರು ತೋರಣಗಳಿಂದ ಶೃಂಗರಿಸಿ ಭಕ್ತರು ಹೂಮಳೆ ಸುರಿಸಿ ಸ್ವಾಗತಿಸಿಕೊಂಡರು. ರಸ್ತೆ ಉದ್ದಕ್ಕೂ ಭಕ್ತರಿಗೆ ಮಠದ ವತಿಯಿಂದ ಪ್ರಸಾದವನ್ನು ವಿತರಿಸಲಾಯಿತು.
ಮಳವಳ್ಳಿ:
ಸುತ್ತೂರು ಜಯಂತಿಯ ಆರನೇ ದಿನದ ಕಾರ್ಯಕ್ರಮದ ಅಂಗವಾಗಿ ಶಿವರಾತ್ರೀಶ್ವರ ಶಿವಯೋಗಿಗಳ ಬೆಳ್ಳಿ ಪಲ್ಲಕ್ಕಿ ಉತ್ಸವ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಭಕ್ತಿ ಪ್ರಧಾನವಾಗಿ ಜರುಗಿತು.ಪಟ್ಟಣದ ಶಾಂತಿ ಕಾಲೇಜು ಮುಂಭಾಗದಲ್ಲಿ ನಿರ್ಮಿಸಲಾಗಿರುವ ಅನುಭವ ಮಂಟಪದಿಂದ ಹರಗುರು ಚರಮೂರ್ತಿಗಳ ಸಮ್ಮುಖದಲ್ಲಿ ಸಾವಿರಾರು ಭಕ್ತರ ನಡುವೆ ಪಲ್ಲಕ್ಕಿ ಉತ್ಸವಕ್ಕೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಚಾಲನೆ ನೀಡಿದರು. ಮಂಗಳವಾದ್ಯ ಹಾಗೂ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಸಾಗಿದ ಪಲ್ಲಕ್ಕಿ ಉತ್ಸವಕ್ಕೆ ಭಕ್ತರು ಪೂಜೆ ಸಲ್ಲಿಸಿ ಧನ್ಯತೆ ಮರೆದರು.
ಮಳವಳ್ಳಿ ಮೈಸೂರು, ಕೊಳ್ಳೇಗಾಲ ಮದ್ದೂರು ಮುಖ್ಯ ರಸ್ತೆಗಳಲ್ಲಿ ಶ್ರೀಗಳ ಪಲ್ಲಕ್ಕಿ ಉತ್ಸವ ಬರುವ ಹಿನ್ನೆಲೆಯಲ್ಲಿ ರಸ್ತೆಗೆ ನೀರು ಹಾಕುವುದರ ಜೊತೆಗೆ ತಳಿರು ತೋರಣಗಳಿಂದ ಶೃಂಗರಿಸಿ ಭಕ್ತರು ಹೂಮಳೆ ಸುರಿಸಿ ಸ್ವಾಗತಿಸಿಕೊಂಡರು. ರಸ್ತೆ ಉದ್ದಕ್ಕೂ ಭಕ್ತರಿಗೆ ಮಠದ ವತಿಯಿಂದ ಪ್ರಸಾದವನ್ನು ವಿತರಿಸಲಾಯಿತು.ಅದ್ಧೂರಿಯಾಗಿ ನಡೆದ ಭಾವೈಕ್ಯತಾ ಯಾತ್ರೆ
ಮಳವಳ್ಳಿ:ಪಟ್ಟಣದ ಪೇಟೆ ಗಂಗಾ ಮತಬೀದಿಯಲ್ಲಿ ಶಿವರಾತ್ರೀಶ್ವರ ಶಿವಯೋಗಿಯವರ ಜಯಂತ್ಯುತ್ಸವದ ಭಾವೈಕ್ಯತಾ ಯಾತ್ರೆಯು ಅದ್ಧೂರಿಯಾಗಿ ಸಾಗಿತು.
ಬೀದಿಯ ಮಹಾದ್ವಾರದ ಬಳಿ ಆಗಮಿಸಿದ ಅದಿಜಗದ್ಗುರುಗಳ ಉತ್ಸವಮೂರ್ತಿ ಹಾಗೂ ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರನ್ನು ತಮಟೆ, ವಾದ್ಯ, ವೀರಗಾಸೆ, ಪೂಜಾ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು, ಗಂಗಾ ಮತಸ್ಥರ ಸಂಪ್ರದಾಯ ಬದ್ಧ ಆಚರಣೆಯಾದ ಕಂಸಾಳೆ, ದಾಸರ ಪದಗಳ ಮೂಲಕ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.ಗಂಗಾಮತ ಬೀದಿಯ ಎಲ್ಲ ಬಡಾವಣೆಗಳಲ್ಲೂ ಯಾತ್ರೆ ಸಾಗಿ ಅಂತಿಮವಾಗಿ ಗಂಗಾಪರಮೇಶ್ವರಿ ಸಹಕಾರ ಸಂಘದ ಆವರಣದಲ್ಲಿ ಸಾತನೂರು ವಿರಕ್ತಮಠದ ನಿಜಗುಣ ಸ್ವಾಮೀಜಿ ಧ್ವಜಾರೋಹಣ ನೆರವೇರಿಸಿದರು. ನಮ್ಮ ಧಾರ್ಮಿಕ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂಥ ಯಾತ್ರೆಗಳು ಯುವ ಜನರಲ್ಲಿ ಜಾಗೃತಿ ಮೂಡಿಸುತ್ತದೆ ಎಂದು ಸಂದೇಶ ನೀಡಿದರು.
ಕುಂತೂರು ಪಟ್ಟದ ಮಠದ ಶಿವಫ್ರಭುಸ್ವಾಮೀಜಿ ಮಾತನಾಡಿದರು. ಡಾ.ರಾಜ್ ಕುಮಾರ್ ಕಲಾ ಸಂಘದ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಜಯಂತ್ಯುತ್ಸವ ಜಾತಿ ಜಾತಿಗಳ ನಡುವಿನ ವೈ ಮನಸ್ಸನ್ನು ದೂರ ಮಾಡಿ ನಾವೆಲ್ಲ ಒಂದೇ ಎನ್ನುವ ಸಂದೇಶವನ್ನು ಸಮಾಜಕ್ಕೆ ಸಾರುತ್ತಿದೆ ಎಂದು ಬಣ್ಣಿಸಿದರು.ಕನಕಪುರ ದೇಗುಲ ಮಠದ ಚನ್ನಬಸವ ಸ್ವಾಮೀಜಿ, ವಿವಿಧ ಮಠಗಳ ಸ್ವಾಮೀಜಿಗಳು, ಮಾಜಿ ಶಾಸಕ ಕೆ.ಅನ್ನದಾನಿ, ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪುತ್ರ ಯುವರಾಜ್ ನರೇಂದ್ರಸ್ವಾಮಿ, ಸಮಿತಿಯ ಆರ್.ಎನ್.ವಿಶ್ವಾಸ್ ಪಾಲ್ಗೊಂಡಿದ್ದರು.