ಸಾರಾಂಶ
ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಫೆ.14ರಂದು ಸಂಜೆ 5ಕ್ಕೆ ನಗರದ ನಡುವಿನಮಠದಲ್ಲಿ ಜಗದ್ಗುರು ರೇಣುಕಾಚಾರ್ಯ ಮೂರ್ತಿಗೆ ಬೆಳ್ಳಿ ಕವಚ ಸಮರ್ಪಣೆ ಹಾಗೂ ಲಿಂ. ರಂಭಾಪುರಿ ಜ.ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವ ಧರ್ಮ ಸಮಾರಂಭ ನಡೆಯಲಿದೆ ಎಂದು ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹೇಳಿದರು.
ಹಾವೇರಿ: ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಫೆ.14ರಂದು ಸಂಜೆ 5ಕ್ಕೆ ನಗರದ ನಡುವಿನಮಠದಲ್ಲಿ ಜಗದ್ಗುರು ರೇಣುಕಾಚಾರ್ಯ ಮೂರ್ತಿಗೆ ಬೆಳ್ಳಿ ಕವಚ ಸಮರ್ಪಣೆ ಹಾಗೂ ಲಿಂ. ರಂಭಾಪುರಿ ಜ.ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವ ಧರ್ಮ ಸಮಾರಂಭ ನಡೆಯಲಿದೆ ಎಂದು ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಹೇಳಿದರು.
ನಗರದ ನಡುವಿನಮಠ ರೇಣುಕಮಂದಿರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ನಡುವಿನಮಠದಲ್ಲಿರುವ ಜಗದ್ಗುರು ರೇಣುಕಾಚಾರ್ಯ ಮಂದಿರದ ಸ್ಥಾಪನೆಗಾಗಿ 1985ರಲ್ಲಿ ಆಶೀರ್ವದಿಸಿದ ರಂಭಾಪುರಿ ಪೀಠದ 120ನೇ ಜಗದ್ಗುರು ಲಿಂ.ರಂಭಾಪುರಿ ಜಗದ್ಗುರು ರುದ್ರಮುನಿ ಶಿವಾಚಾರ್ಯ ಭಗವತ್ಪಾದರ ಜನ್ಮ ಶತಮಾನೋತ್ಸವವನ್ನು ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ ನಡುವಿನಮಠದ ನವೀಕರಣ ಶಿಲಾನ್ಯಾಸ ಶ್ರೀಮದ್ ರಂಭಾಪುರಿ ಜಗದ್ಗುರುಗಳ ಅಮೃತ ಹಸ್ತದಿಂದ ಜರುಗುವುದು ಎಂದು ತಿಳಿಸಿದರು.ಕರ್ಜಗಿ ಗೌರಿಮಠದ ಶಿವಯೋಗಿ ಶಿವಾಚಾರ್ಯರು ಮಾತನಾಡಿ, ಧರ್ಮ ಸಮಾರಂಭದಲ್ಲಿ ಬಂಕಾಪುರದ ರೇವಣಸಿದ್ಧೇಶ್ವರ ಶಿವಾಚಾರ್ಯರು, ರಟ್ಟೀಹಳ್ಳಿ ಶಿವಲಿಂಗ ಶಿವಾಚಾರ್ಯರು, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ನೆಗಳೂರು ಗುರುಶಾಂತೇಶ್ವರ ಶಿವಾಚಾರ್ಯರು, ಲಿಂಗದಹಳ್ಳಿ ವೀರಭದ್ರ ಶಿವಾಚಾರ್ಯರು, ಕೂಡಲದ ಮಹೇಶ್ವರ ಶಿವಾಚಾರ್ಯರು, ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದರು.
ರೇಣುಕಾಚಾರ್ಯ ಸೇವಾ ಸಮಿತಿ ಅಧ್ಯಕ್ಷ ಕುಮಾರ ಸಾತೇನಹಳ್ಳಿ, ಆಡಳಿತಾಕಾರಿ ಎಸ್.ಬಿ. ಹಿರೇಮಠ, ಸಮಿತಿ ಉಪಾಧ್ಯಕ್ಷ ಶಂಕ್ರಯ್ಯ ಹೆಬ್ಬಳ್ಳಿಮಠ, ಕಾರ್ಯದರ್ಶಿ ಬಸವರಾಜ ಜಾಬೀನ್, ಶಿವಯೋಗಪ್ಪ ಬೆನಕಪ್ಪನವರ, ಮಹಾಂತಪ್ಪ ಮಳಿಮಠ, ಎಂ.ಜಿ. ಹಿರೇಮಠ ಇದ್ದರು.