ಸಿಂದೂರ: ಭಾರತಕ್ಕೆ ಜಯವಾಗಲೆಂದು ನವ ಚಂಡಿಕಾ ಹೋಮ

| Published : May 09 2025, 12:36 AM IST

ಸಾರಾಂಶ

ತಾಲೂಕಿನ ಯಲಿಯೂರು ಗ್ರಾಮದಲ್ಲಿ ಶ್ರೀ ಲಕ್ಷ್ಮೀ ಪ್ರತ್ಯಂಗಿರಾದೇವಿ ದೇವಸ್ಥಾನದ ತಪೋವನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ನರೇಂದ್ರ ಮೋದಿಯವರು ಕೈಗೊಂಡಿರುವ ಯುದ್ಧದಲ್ಲಿ ಭಾರತಕ್ಕೆ ಜಯವಾಗಲಿ ಎಂದು ಜ್ಯೋತೀಷಿಗಳಾದ ಡಾ. ಶ್ರೀ ಗೋಪಾಲಕೃಷ್ಣ ಶರ್ಮ ಗುರೂಜಿ ನೇತೃತ್ವದಲ್ಲಿ ಹಾಗೂ ಶ್ರೀ ಕ್ಷೇತ್ರದ ಧರ್ಮದರ್ಶಿ ವೇ. ಬ್ರ. ಶ್ರೀ ಬಸವರಾಜ ಶಾಸ್ತ್ರೀಗಳ ಸಹಯೋಗದಲ್ಲಿ ನವ ಚಂಡಿಕಾ ಹೋಮ ನೆರೆವೇರಿತು.

ಕನ್ನಡಪ್ರಭ ವಾರ್ತೆ ಶಿರಾ ತಾಲೂಕಿನ ಯಲಿಯೂರು ಗ್ರಾಮದಲ್ಲಿ ಶ್ರೀ ಲಕ್ಷ್ಮೀ ಪ್ರತ್ಯಂಗಿರಾದೇವಿ ದೇವಸ್ಥಾನದ ತಪೋವನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ನರೇಂದ್ರ ಮೋದಿಯವರು ಕೈಗೊಂಡಿರುವ ಯುದ್ಧದಲ್ಲಿ ಭಾರತಕ್ಕೆ ಜಯವಾಗಲಿ ಎಂದು ಜ್ಯೋತೀಷಿಗಳಾದ ಡಾ. ಶ್ರೀ ಗೋಪಾಲಕೃಷ್ಣ ಶರ್ಮ ಗುರೂಜಿ ನೇತೃತ್ವದಲ್ಲಿ ಹಾಗೂ ಶ್ರೀ ಕ್ಷೇತ್ರದ ಧರ್ಮದರ್ಶಿ ವೇ. ಬ್ರ. ಶ್ರೀ ಬಸವರಾಜ ಶಾಸ್ತ್ರೀಗಳ ಸಹಯೋಗದಲ್ಲಿ ನವ ಚಂಡಿಕಾ ಹೋಮ ನೆರೆವೇರಿತು. ನಂತರ ಮಾತನಾಡಿದ ಜ್ಯೋತೀಷಿಡಾ. ಶ್ರೀ ಗೋಪಾಲಕೃಷ್ಣ ಶರ್ಮ ಗುರೂಜಿ, ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದಿಟ್ಟತನದಿಂದ ಆಪರೇಷನ್ ಸಿಂದೂರ ಹೆಸರಿನಲ್ಲಿ ಉಗ್ರರನ್ನು ಮಟ್ಟ ಹಾಕಲು ಯುದ್ಧ ಕೈಗೊಂಡಿದ್ದು, ಈ ಯುದ್ಧದಲ್ಲಿ ಭಾರತೀಯ ಸೈನಿಕರಿಗೆ ಯಾವುದೇ ತೊಂದರೆಯಾಗದಂತೆ ಭಾರತಕ್ಕೆ ಜಯವಾಗಬೇಕು. ದೇಶದ ಒಳಿತಿಗಾಗಿ, ತಮ್ಮ ಜೀವದ ಹಂಗನ್ನು ತೊರೆದು ದೇಶ ಕಾಯೋ ನಮ್ಮೆಲ್ಲರ ನೆಚ್ಚಿನ ಯೋಧರ ಹಾಗೂ ದೇಶ ನಡೆಸುವ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ರವರ ಒಳಿತಿಗಾಗಿ ಈ ವಿಶೇಷ ನವ ಚಂಡಿಕಾ ಹೋಮ ಹವನ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಲಾಗಿದೆ. ಯುದ್ದದಲ್ಲಿ ಪಾಲ್ಗೊಂಡ ಸೇನಾನಿಗಳಿಗೆ ಕ್ಷೇಮವಾಗಲಿ, ಲೋಕದ ಸಮಸ್ತ ವ್ಯಕ್ತಿಗಳಿಗೆ ಸುಭೀಕ್ಷವಾಗಲಿ ಎಂಬ ಉದ್ದೇಶದಿಂದ ನವ ಚಂಡಿಕಾ ಹೋಮಾ ಮಾಡುತ್ತಿದ್ದೇವೆ. ಭಾರತೀಯರ ನೋವು ಶಾಂತವಾಗಬೇಕು. ರಕ್ಕಸರ ಸಂಹಾರವಾಗಬೇಕು ಎಂಬುದೇ ಇದರ ಉದ್ದೇಶವಾಗಿದೆ ಎಂದರು.