ಪೋಲಿಯೊ ಲಸಿಕಾ ಕೇಂದ್ರಕ್ಕೆ ಸಿಂಗಾರ

| Published : Mar 04 2024, 01:16 AM IST

ಸಾರಾಂಶ

ಇಂಡಿ: ತಾಲೂಕಿನ ಚಿಕ್ಕಬೇವನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಲಸಿಕಾ ಕೇಂದ್ರವನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಬಾಳೆ ದಿಂಡು, ಕಬ್ಬುಮಾವಿನ ಎಲೆಗಳಿಂದ ಸಿಂಗರಿಸಿ ಅಲಂಕಾರ ಮಾಡಿ ಹಬ್ಬದ ವಾತಾವರಣವನ್ನೆ ಸೃಷ್ಟಿ ಮಾಡಲಾಗಿತ್ತು.

ಕನ್ನಡಪ್ರಭ ವಾರ್ತೆ ಇಂಡಿ:

ತಾಲೂಕಿನ ಚಿಕ್ಕಬೇವನೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಲಸಿಕಾ ಕೇಂದ್ರವನ್ನು ತಳಿರು ತೋರಣಗಳಿಂದ ಸಿಂಗಾರ ಮಾಡಲಾಗಿತ್ತು. ಬಾಳೆ ದಿಂಡು, ಕಬ್ಬುಮಾವಿನ ಎಲೆಗಳಿಂದ ಸಿಂಗರಿಸಿ ಅಲಂಕಾರ ಮಾಡಿ ಹಬ್ಬದ ವಾತಾವರಣವನ್ನೆ ಸೃಷ್ಟಿ ಮಾಡಲಾಗಿತ್ತು.

ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಸಿದ್ದರಾಮ ಹಾಗೂ ವೈದ್ಯಾಧಿಕಾರಿ ಡಾ.ಪ್ರಶಾಂತ ಧೂಮಗೊಂಡ ಮಾತನಾಡಿ, ತಾಲೂಕಾದ್ಯಂತ ಮಾ.3 ರಿಂದ 4 ದಿನಗಳ ವರೆಗೆ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಈ ಕುರಿತು ಪ್ರತಿ ಗ್ರಾಮ ಹಾಗೂ ಜನವಸತಿ ಪ್ರದೇಶಕ್ಕೆ ಹೋಗಿ ಲಸಿಕೆ ಹಾಕಲಾಗುತ್ತದೆ. ಅಂಗನವಾಡಿ,ಆಶಾ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಮನೆಯ ಬಾಗಿಲಿಗೆ ಬಂದಾಗ ಪಾಲಕರು ಮಕ್ಕಳಿಗೆ ತಪ್ಪದೆ ಲಸಿಕೆ ಹಾಕಿಸಿ ಎಂದು ಹೇಳಿದರು. ತಾಲೂಕಿನಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಕೈಜೊಡಿಸಬೇಕು.

ಉಸ್ತುವಾರಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಪೂಜಾರಿ, ಆರೋಗ್ಯನಿರೀಕ್ಷಣಾಧಿಕಾರಿ ಎಸ್‌.ಎಚ್‌.ಅತನೂರ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ವಿದ್ಯಾ, ಆಶಾ ಕಾರ್ಯಾಕರ್ತೆಯರಾದ ಮಿನಾಕ್ಷಿ, ಮಂಗಲಾ, ಅನೀತಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಾದ ದಾನಮ್ಮ ಮಠಪತಿ, ಭಾಗ್ಯಶ್ರೀ, ಭಜಂತ್ರಿ, ಗ್ರಾಪಂ ಸಿಬ್ಬಂದಿ ಭಾಗವಹಿಸಿದ್ದರು.ಪೋಲಿಯೊ ಮುಕ್ತ ಸಮಾಜಕ್ಕೆ ಸಹಕರಿಸಿದೇವರ ಹಿಪ್ಪರಗಿ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದ ಪೋಲಿಯೊ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಡಾ.ಇಂಗಳೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಸಾರ್ವಜನಿಕರಲ್ಲಿ ಪಲ್ಸ್ ಪೋಲಿಯೊ ಕುರಿತು ಜಾಗೃತಿ ಮೂಡಿಸುವದರೊಂದಿಗೆ ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್ ಪೋಲಿಯೊ ಲಸಿಕೆ ಹಾಕಿಸಿ ಪೋಲಿಯೊ ಮುಕ್ತ ಸಮಾಜ ನಿರ್ಮಾಣಕ್ಕೆ ಸಹಕರಿಸಿ ಎಂದು ಮನವಿ ಮಾಡಿದರು.

ಇಲಾಖೆ ಅಧಿಕಾರಿಗಳು ಸಿಬ್ಬಂದಿ ವರ್ಗ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.