ಸಾರಾಂಶ
ನಾನು ಗ್ರಾಮೀಣ ಪ್ರದೇಶದ ಯುವಕ. ಹೊಟ್ಟೆಪಾಡಿಗಾಗಿ ಬೆಂಗಳೂರು ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ನನ್ನನ್ನು ಗುರುತಿಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರ್ಮಾಪಕ ನಂಜುಂಡೇಶ್ವರ ಅವರು ತಮ್ಮ ಸಿಂಹರೂಪಿಣಿ ಚಿತ್ರಕ್ಕೆ ನಾಯಕ ನಟನನ್ನಾಗಿ ಆಯ್ಕೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಸಿಂಹರೂಪಿಣಿ ಚಿತ್ರ ಅ.17ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ. ಚಿತ್ರವನ್ನು ಚಿತ್ರಮಂದಿರಗಳಿಗೆ ಬಂದು ವೀಕ್ಷಿಸುವ ಮೂಲಕ ಆಶೀರ್ವದಿಸಬೇಕೆಂದು ನಾಯಕ ನಟ ಬಿ.ಆರ್. ಸಾಗರ್ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಾವು ತಾಲೂಕಿನ ಸಂತೇಬಾಚಹಳ್ಳಿ ಹೋಬಳಿ ನಾಯಕನಹಳ್ಳಿಯ ಮೊಮ್ಮಗನಾಗಿದ್ದು, ಸಿಂಹರೂಪಿಣಿ ಚಿತ್ರ ಸುಂದರ ಧಾರ್ಮಿಕವಾಗಿ ಮೂಡಿ ಬಂದಿದೆ. ನುರಿತ ಕಲಾವಿದರು ನಟಿಸಿದ್ದಾರೆ. ಕಥೆ ಮತ್ತು ನಿರ್ಮಾಪಕರಾಗಿ ಕೆ.ಎಂ. ನಂಜುಂಡೇಶ್ವರ ಅವರದ್ದಾಗಿದ್ದು, ಚಿತ್ರಕಥೆ, ಹಾಡುಗಳು, ಸಂಭಾಷಣೆ ಮತ್ತು ನಿರ್ದೇಶನವನ್ನು ಕಿನ್ನಾಳರಾಜ್ ಮಾಡಿದ್ದಾರೆ ಎಂದರು.
ನಾನು ಗ್ರಾಮೀಣ ಪ್ರದೇಶದ ಯುವಕ. ಹೊಟ್ಟೆಪಾಡಿಗಾಗಿ ಬೆಂಗಳೂರು ನಗರದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ನನ್ನನ್ನು ಗುರುತಿಸಿ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ನಿರ್ಮಾಪಕ ನಂಜುಂಡೇಶ್ವರ ಅವರು ತಮ್ಮ ಸಿಂಹರೂಪಿಣಿ ಚಿತ್ರಕ್ಕೆ ನಾಯಕ ನಟನನ್ನಾಗಿ ಆಯ್ಕೆ ಮಾಡಿದ್ದಾರೆ ಎಂದರು.ನಾಯಕನಹಳ್ಳಿ ಸರ್ಕಾರಿ ಶಾಲೆ ಹುಡುಗ ಇದೀಗ ನಾಯಕ ನಟನಾಗಿ ಬೆಳ್ಳಿ ತೆರೆಗೆ ಪ್ರವೇಶಿಸಿದ್ದು ಇದು ಅಪ್ಪಟ್ಟ ದೇಸಿಯ ಸಿನಿಮಾ. ಬೆಂಗಳೂರು ಹಾಗೂ ಯಲಹಂಕ ಬಳಿಯ ಯರಪನಹಳ್ಳಿಯ ಮಾರಮ್ಮ ದೇವಾಲಯದ ಬಳಿ ಹೆಚ್ಚು ಚಿತ್ರೀಕರಣ ಮಾಡಲಾಗಿದೆ. ಇದು ಕಮರ್ಪಿಯಲ್ ಜೊತೆಗೆ ಭಕ್ತಿ ಪ್ರಧಾನ ಚಿತ್ರವಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಮುಂಖಂಡರಾದ ಮಾಳಗೂರು ಜಗದೀಶ್, ರಾಜು, ಮೋಹನ್, ನವೀನ್, ಯೋಗಣ್ಣ, ಮಹದೇವ್, ಅರೆಬೊಪ್ಪನಹಳ್ಳಿ ಹರೀಶ್, ದೇವರಾಜು ಹವ್ಯಾಸಿ ಸಂಶೋಧಕರಾದ ಶಿಕ್ಷಕ ಸಂತೇಬಾಚಹಳ್ಳಿ ರಂಗಸ್ವಾಮಿ, ಕಲಾವಿದರಾದ ಸುನೀಲ್ ಸೇರಿದಂತೆ ಹಲವರು ಇದ್ದರು.