ಗೊಂದಲ, ವಿರೋಧ, ಅಸಮಾಧಾನ, ಆಕ್ರೋಶ, ಪ್ರತಿಭಟನೆಗಳ ನಡುವೆಯೂ ನಡೆದ ವಿಶೇಷ ತೀವ್ರ ಪರಿಷ್ಕರಣೆ 2026 ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರ್ನಾಟಕ ಚುನಾವಣಾ ಆಯೋಗವು ಮಂಗಳವಾರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದೆ.
ರಾಮಕೃಷ್ಣ ದಾಸರಿ
ಕನ್ನಡಪ್ರಭ ವಾರ್ತೆ ರಾಯಚೂರುಗೊಂದಲ, ವಿರೋಧ, ಅಸಮಾಧಾನ, ಆಕ್ರೋಶ, ಪ್ರತಿಭಟನೆಗಳ ನಡುವೆಯೂ ನಡೆದ ವಿಶೇಷ ತೀವ್ರ ಪರಿಷ್ಕರಣೆ 2026 ಪ್ರಕ್ರಿಯೆ ಪೂರ್ಣಗೊಂಡಿದ್ದು, ಕರ್ನಾಟಕ ಚುನಾವಣಾ ಆಯೋಗವು ಮಂಗಳವಾರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಿದೆ.
ರಾಯಚೂರಲ್ಲಿ ಒಟ್ಟಾರೆ 21,70,771 ಜನಸಂಖ್ಯೆಯಿದ್ದು, ಅದರಲ್ಲಿ ಶೇ.65.64 ರಷ್ಟು ಮತದಾರರನ್ನು ಹೊಂದಲಾಗಿದೆ. ಜಿಲ್ಲೆ ವ್ಯಾಪ್ತಿಯ ಏಳು ವಿಧಾನಸಭಾ ಕ್ಷೇತ್ರಗಳಾದ ರಾಯಚೂರು ಗ್ರಾಮೀಣ (53) ರಾಯಚೂರು ನಗರ (54) ಮಾನ್ವಿ (55) ದೇವದುರ್ಗ (56) ಲಿಂಗಸುಗೂರು (57) ಸಿಂಧನೂರು (58) ಮತ್ತು ಮಸ್ಕಿ (59)ಯಲ್ಲಿ 7,05,951 ಪುರುಷ, 7,18,825 ಮಹಿಳೆ, 133 ಇತರೆ ಸೇರಿ ಒಟ್ಟು 14,24,909 ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ. ಇದರಲ್ಲಿ 273 ಪುರುಷರು, 7 ಮಹಿಳೆಯರು ಸೇರಿ ಒಟ್ಟು 280 ಸೇವಾ ಮತದಾರರು, 13,346 ಪುರುಷ, 10,682 ಮಹಿಳೆ, 1 ಇತರೆ ಸೇರಿ ಒಟ್ಟು 24,052 ಯುವ (18-19 ವರ್ಷದ) ಮತದಾರರು, 9,945 ಪುರುಷ, 7,359 ಮಹಿಳೆ ಸೇರಿ ಒಟ್ಟು 17,304 ವಿಕಲಚೇತನ ಮತದಾರರು,2,454 ಪುರುಷ, 5,452 ಮಹಿಳೆ, 1 ಇತರೆ ಸೇರಿ ಒಟ್ಟು 7,907 ವೃದ್ಧ (85+ ವರ್ಷದ) ಮತದಾರರು, 4 ಪುರುಷ, 2 ಮಹಿಳೆ ಸೇರಿ ಒಟ್ಟು 6 ಎನ್ಆರ್ಐ/ ವಿದೇಶದಲ್ಲಿರುವ ಮತದಾರಿದ್ದು, ಲಿಂಗಾನುಪಾತದಲ್ಲಿ 7,05,951 ಪುರುಷರು, 7,18,958 ಮಹಿಳೆಯರಲ್ಲಿ 1,018 ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಮತದಾರರಿದ್ದಾರೆ.
ಎಸ್ಐಆರ್ ಪ್ರಕ್ರಿಯೆಯಲ್ಲಿ ಜಿಲ್ಲೆಯಲ್ಲಿ 69,099 ನೋಟಿಸ್ಗಳನ್ನು ಜಾರಿ ಮಾಡಲಾಗಿತ್ತು, ಇದರಲ್ಲಿ 69,099 ನೋಟಿಸ್ಗಳ ವಿಚಾರಣೆ ನಡೆಸಿ ಅದರಲ್ಲಿಯೂ 67,882 ಅಂತಿಮ ವಿಚಾರಣೆ ಕೈಗೊಂಡು ಅಂತಿಮವಾಗಿ 13,24,064ಗಳನ್ನು ಅಂತಿಮ ಲೆಕ್ಕಾಚಾರಕ್ಕಾಗಿ ನಿಲ್ಲಿಸಲಾಗಿದ್ದು, ವಿತರಿಸಿದ ನಮೂನೆ 7 ರಡಿ 1,217 ಅನರ್ಹರೆಂದು ಗುರುತಿಸಲಾದ ಚುನಾವಣಾ ನೋಂದಣಿ ಅಧಿಕಾರಿಯಿಂದ ಮತದಾರರಿಗಾಗಿ ಸಲ್ಲಿಸಲಾಗಿದೆ.ಕ್ಷೇತ್ರವಾರು ಮತದಾರರು: ರಾಯಚೂರು ಗ್ರಾಮೀಣ 1,00,855 ಪುರುಷ, 1,02,810 ಮಹಿಳೆ, 21 ಇತರೆ ಸೇರಿ ಒಟ್ಟು 2,03,686 ಮತದಾರರು. ರಾಯಚೂರು ನಗರ 89,971 ಪುರುಷ, 94,660 ಮಹಿಳೆ, 47 ಇತರೆ ಸೇರಿ ಒಟ್ಟು 1,84,678 ಮತದಾರರು. ಮಾನ್ವಿ 1,00.819 ಪುರುಷ, 1,03,664 ಮಹಿಳೆ, 28 ಇತರೆ ಸೇರಿ ಒಟ್ಟು 2,04,511 ಮತದಾರರು. ದೇವದುರ್ಗ 1,08.064 ಪುರುಷ, 1,06,988 ಮಹಿಳೆ, 7 ಇತರೆ ಸೇರಿ ಒಟ್ಟು 2,15,059 ಮತದಾರರು. ಲಿಂಗಸುಗೂರು 1,12.841 ಪುರುಷ, 1,13,064 ಮಹಿಳೆ, 11 ಇತರೆ ಸೇರಿ ಒಟ್ಟು 2,25,916 ಮತದಾರರು. ಸಿಂಧನೂರು 1,00.285 ಪುರುಷ,1,03,413 ಮಹಿಳೆ, 14 ಇತರೆ ಸೇರಿ ಒಟ್ಟು 2,03,712 ಮತದಾರರು ಮತ್ತು ಮಸ್ಕಿಯಲ್ಲಿ 93,116 ಪುರುಷ, 94,226 ಮಹಿಳೆ, 5 ಇತರೆ ಸೇರಿ ಒಟ್ಟು 1,87,347 ಮತದಾರರು ಸೇರಿದಂತೆ ಜಿಲ್ಲೆ 7 ನೇ ವಿಧಾನಸಭಾ ಕ್ಷೇತ್ರಗಳಲ್ಲಿ 7,05,951 ಪುರುಷ, 7,18,825 ಮಹಿಳೆ, 133 ಸೇರಿ ಒಟ್ಟು 14,24,909 ಮತದಾರರು ಅಂತಿಮ ಪಟ್ಟಿಯಲ್ಲಿದ್ದಾರೆ.