ಈಗಾಗಲೇ ಜಿಲ್ಲೆಯಲ್ಲಿ ಶೇ.98.64% ರಷ್ಟು ಜನರನ್ನು ಭೇಟಿ ಮಾಡಿದ ಬಿಎಲ್‌ಓಗಳು ಪರಿಸ್ಕರಣೆ ಮಾಡಿದ್ದಾರೆ. ವಿವಿಧ ಪಕ್ಷಗಳ ಬೂತ್ ಮಟ್ಟದ ಪ್ರತಿನಿಧಿಗಳು ಸೇರಿ ಚುನಾವಣೆ ಪರಿಸ್ಕರಣಾ ಕಾರ್ಯದ ಬಿಎಲ್‌ಒಗಳು ಮನೆ ಬಾಗಿಲಿಗೆ ಬಂದ ವೇಳೆ ಸಹಕಾರಗಳ ನೀಡಿ ಮತ ಪಟ್ಟಿ ಪರಿಸ್ಕರಣೆಗೆ ಸಹಕಾರಗಳ ನೀಡಿ ಈ ಕಾರ್ಯಕ್ರಮ ಯಶಸ್ವಿಗಳಿಸಬೇಕು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಎಸ್‌ಐಆರ್ ಒಂದು ಚುನಾವಣೆ ಪ್ರಕ್ರಿಯೆಯ ಭಾಗ. ಸಂಬಂಧಿಸಿದ ಬೂತ್ ಮಟ್ಟದ ಬಿಎಲ್‌ಒಗಳು ಹಾಗೂ ವಿವಿಧ ಪಕ್ಷಗಳ ಪ್ರತಿನಿಧಿಗಳು ಈ ಪರಿಸ್ಕರಣೆಯಲ್ಲಿ ಸಹಕರಿಸಬೇಕು ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ಪಟ್ಟಣದ ಶ್ರೀರಂಗನಾಥ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಚುನಾವಣಾ ವಿಶೇಷ ಮತಪಟ್ಟಿ ಪರಿಸ್ಕರಣಾ ತರಬೇತಿ ಶಿಬಿರ ಕುರಿತು ಮಾತನಾಡಿ, ಚುನಾವಣಾ ಆಯೋಗ ರಾಷ್ಟ್ರಪತಿಗಳ ಅಧೀನದ ಸಂಸ್ಥೆ. ಪ್ರತಿಯೊಬ್ಬರು ಮತಪಟ್ಟಿಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ಸಂಸ್ಥೆಯದ್ದಾಗಿದೆ ಎಂದರು.

ಚುನಾವಣೆ ಆಯೋಗ ಆಯಾ ಕಾಲಕ್ಕೆ ತಕ್ಕಂತೆ ಸಂವಿಧಾನದಲ್ಲಿರುವ ಹಕ್ಕುಗಳ ರಕ್ಷಣೆ ಮಾಡುವುದಕ್ಕೆ ಕಾನೂನಾತ್ಮಕ ಮಾಹಿತಿ ಒದಗಿಸುತ್ತದೆ. 2026ರಲ್ಲಿ 19 ರಾಜ್ಯಗಳ ಮತದಾರರ ವಾಸಸ್ಥಳ ಕುಟುಂಬದಲ್ಲಿ ಎಷ್ಟು ಜನರಿದ್ದಾರೆ ಅವರ ಮ್ಯಾಪಿಂಗ್ ಕಾರ್ಯಕ್ಕೆ 2002ರಿಂದ 2026ರವರೆಗಿನ ಮತದಾರರ ಪಟ್ಟಿಗಳೊಂದಿಗೆ ಮತದಾರರನ್ನು ಪರಿಸ್ಕರಣೆ ಮಾಡಲು ಮನೆ ಮನೆ ಬಾಗಿಲಿಗೆ ಬಂದು ಪರಿಸ್ಕರಣೆ ಮಾಡಲಾಗಿದೆ ಎಂದರು.

ಈಗಾಗಲೇ ಜಿಲ್ಲೆಯಲ್ಲಿ ಶೇ.98.64% ರಷ್ಟು ಜನರನ್ನು ಭೇಟಿ ಮಾಡಿದ ಬಿಎಲ್‌ಓಗಳು ಪರಿಸ್ಕರಣೆ ಮಾಡಿದ್ದಾರೆ. ವಿವಿಧ ಪಕ್ಷಗಳ ಬೂತ್ ಮಟ್ಟದ ಪ್ರತಿನಿಧಿಗಳು ಸೇರಿ ಚುನಾವಣೆ ಪರಿಸ್ಕರಣಾ ಕಾರ್ಯದ ಬಿಎಲ್‌ಒಗಳು ಮನೆ ಬಾಗಿಲಿಗೆ ಬಂದ ವೇಳೆ ಸಹಕಾರಗಳ ನೀಡಿ ಮತ ಪಟ್ಟಿ ಪರಿಸ್ಕರಣೆಗೆ ಸಹಕಾರಗಳ ನೀಡಿ ಈ ಕಾರ್ಯಕ್ರಮ ಯಶಸ್ವಿಗಳಿಸಬೇಕು ಎಂದರು.ತಹಸೀಲ್ದಾರ್ ಚೇತನಯಾದವ್ ಮಾತನಾಡಿ, 18 ವರ್ಷ ತುಂಬಿದವರನ್ನು ಈಗಾಗಲೇ ಮ್ಯಾಪಿಂಗ್ ಮಾಡಲಾಗಿದೆ. ಅವರ ತಂದೆ ತಾಯಿ, ಕುಟುಂಬದೊಂದಿಗೆ ಲಿಂಕ್ ಮಾಡಿ ಅರ್ಹ ಮತದಾರರನ್ನು ವಿಶೇಷ ಪರಿಸ್ಕರಣೆಯಲ್ಲಿ ಮತ ಪಟ್ಟಿಗೆ ಸೇರಿಸಲಾಗುತ್ತದೆ ಎಂದರು.

ಕಾರಣಾಂತರದಿಂದ ನಮ್ಮಲ್ಲಿ 3 ಸಾವಿರ ಮಂದಿಗೆ ಮ್ಯಾಪಿಂಗ್ ಆಗಿಲ್ಲ. ಕೆಲವರು ಮೃತರಾಗಿದ್ದು, ಇನ್ನು ಕೆಲವರು ಹೊರ ಹೋಗಿದ್ದಾರೆ. ಇದಲ್ಲದೆ ಅರ್ಹ ಮತದಾರರು ಕೈ ಬಿಟ್ಟಿದ್ದರೂ ಆತಂಕ ಪಡುವ ಆಗಿಲ್ಲ. ಅರ್ಹ ಮತದಾರರು ಒಂದು ವೇಳೆ ಕೈ ಬಿಟ್ಟಿದ್ದರು ಮತ್ತೇ ಸೇರಿಸಿಕೊಲ್ಳುವ ಅವಕಾಶಗಳಿರುತ್ತವೆ ಎಂದರು.

ಪ್ರತಿಯೊಬ್ಬರು ಚುನಾವಣೆಯ 12 ದಾಖಲೆಗಳಲ್ಲಿ ಒಂದು ದಾಖಲೆ ನೀಡಿ ಮತದಾರರ ಪಟ್ಟಿಯಲ್ಲಿ ಸೇರಿಸಬಹುದಾಗಿದೆ. 1987ರ ಹಿಂದೆ ಜನಿಸಿದವರು ಚುನಾವಣೆಗೆ ಪರಿಸ್ಕರಣೆಗೆ ಕೇಳಿರುವ ತಮ್ಮ ಒಂದು ದಾಖಲೆಗಳ ನೀಡಬಹುದು. 1987 ರಿಂದ 2004ರ ಮಧ್ಯಂತರದಲ್ಲಿ ಜನಿಸಿದವರು ಎಸ್ಸೆಸ್ಸೆಲ್ಸಿ, ಜೊತೆಗೆ ಜನನ ಪತ್ರ ಪಡೆದುಕೊಂಡಿರುತ್ತಾರೆ. ಇವರು ತಮ್ಮ ಸ್ವಯಂ ದಾಖಲೆಗಳ ಜೊತೆಗೆ ತಂದೆ ಅಥವಾ ತಾಯಿ ಐಡಿ ಕಾರ್ಡ್‌ ಸೇರಿಸಿ ತಮ್ಮ ಅಧಿಕೃತ ದಾಖಲೆ ಮೂಲಕ ಪಟ್ಟಿಯಲ್ಲಿ ಹೆಸರು ನೊಂದಾಯಿಸಬಹುದು ಎಂದರು.

2004ರ ನಂತರ ಜನಿಸಿದವರು ಮತದಾರರ ಪಟ್ಟಿಯಲ್ಲಿ ಸೇರಿಸಲು ತಂದೆ ತಾಯಿಯ ಐಡಿ ದಾಖಲೆಗಳ ಸೇರಿಸಬೇಕು. 2026ರ ವರೆಗೆ ಮೂರು ಹಂತದಲ್ಲಿ ಪರಿಸ್ಕರಣೆ ನಡೆಸಲಾಗಿದೆ. ದ್ವಿಪ್ರತಿ ಹಂತದಲ್ಲಿ ಫಾರಂಗಳನ್ನು ಮನೆಮನೆಗೆ ಹಂಚಿಕೆ ಮಾಡಲಾಗುತ್ತದೆ. ಈ ಜೂನ್ 30ರಿಂದ ಜುಲೈ 29ರವರೆಗೆ ಸೇರಿಸಲಾಗುತ್ತದೆ. ಪಕ್ಷಾತಿತವಾಗಿ ಪಕ್ಷಗಳ ಬೂತ್ ಮಟ್ಟದ ಪ್ರತಿನಿಧಿಗಳು ಸ್ಥಳೀಯವಾಗಿ ನಿಮಗೆ ಗೊತ್ತಿರುವ ಮಾಹಿತಿಗಳ ಮೂಲಕ ನಮ್ಮ ಬಿಎಲ್‌ಒಗಳಿಗೆ ಮಾಹಿತಿ ನೀಡಿ ಉತ್ತಮವಾಗಿ ಮತದಾರರ ಪಟ್ಟಿಯಲ್ಲಿ ಮದಾರರನ್ನು ಪರಿಸ್ಕರಿಸಿ ಸೇರಿಸಲು ಸಹಕಾರಗಳ ನೀಡಬೇಕು ಎಂದು ಮನವಿ ಮಾಡಿದರು.

ಈ ವೇಳೆ ಮತದಾರರ ಪಟ್ಟಿ ಪರಿಸ್ಕರಣ ತರಬೇತಿದಾರರಾದ ಮಮತ, ಪುರಸಭೆ ಮುಖ್ಯಾಧಿಕಾರಿ ಎಂ.ರಾಜಣ್ಣ, ಪುರಸಭೆ ಮಾಜಿ ಅಧ್ಯಕ್ಷ ಎಂ.ಎಲ್.ದಿನೇಶ್, ಕಂದಾಯ ಅಧಿಕಾರಿ ಹಾಗೂ ಇತರ ಚುನಾವಣೆ ಸಿಬ್ಬಂದಿಗಳು, ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.