ಸರ್.ಎಂ. ವಿಶ್ವೇಶ್ವರಯ್ಯ ನಲ್ಲಿ ಸಂಘಕ್ಕೆ ದಶಮಾನೋತ್ಸವ ಸಂಭ್ರಮ

| Published : Feb 15 2024, 01:15 AM IST

ಸರ್.ಎಂ. ವಿಶ್ವೇಶ್ವರಯ್ಯ ನಲ್ಲಿ ಸಂಘಕ್ಕೆ ದಶಮಾನೋತ್ಸವ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದಲ್ಲಿ ಮೊದಲ ಬಾರಿಗೆ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಮೊದಲ ಸಮಾವೇಶವನ್ನು ವಸ್ತು ಪ್ರದರ್ಶನ ಆವರಣದಲ್ಲಿ ಆಯೋಜಿಸಿತ್ತು. ಮಾರುಕಟ್ಟೆ ಬಂದ ಹೊಸ ಪದಾರ್ಥಗಳ ಪರಿಚಯ ಕಾರ್ಯಕ್ರಮ, ನಿಧನರಾದ ಸಂಘದ ಸದಸ್ಯರ ಕುಟುಂಬಕ್ಕೆ ಸಹಾಯ ಧನ ಸೇರಿದಂತೆ ಅನೇಕ ಸವಲತ್ತು ನೀಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಸರ್.ಎಂ. ವಿಶ್ವೇಶ್ವರಯ್ಯ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಈಗ ದಶಮಾನೋತ್ಸವ ಸಂಭ್ರಮದಲ್ಲಿದೆ.

ಸಂಘವು ಎಲ್ಲಾ ಜನಾಂಗದ ಜಯಂತಿಗಳನ್ನು ಆಚರಿಸಿಕೊಂಡು ಬಂದಿದೆ. ಇದರ ಜೊತೆಗೆ ಚಾಮುಂಡಿಬೆಟ್ಟದ ಮೆಟ್ಟಿಲುಗಳ ಸ್ವಚ್ಛತೆ, ಬೈಕ್ ರ್ಯಾಲಿ, ಕಾಲ್ನಡಿಗೆ ಜಾಥಾದ ಮೂಲಕ ಸಾರ್ವಜನಿಕರಲ್ಲಿ ಮಳೆ ನೀರು ಸಂಗ್ರಹಣೆ ಕುರಿತು ಅರಿವು ಮೂಡಿಸುತ್ತಿದೆ. ವಿಶೇಷ ಮಕ್ಕಳ ಶಾಲೆ, ಬುದ್ಧಿಮಾಂಧ್ಯ ಮಕ್ಕಳ ಶಾಲೆಗೆ ಉಚಿತವಾಗಿ ಸೋಲಾರ್‌ ಅಳವಡಿಕೆ, ಕೆಟ್ಟಿರುವ ನಲ್ಲಿ ತೆಗೆದು ಹೊಸ ನಲ್ಲಿ ಅಳವಡಿಸಿ ಆ ದಿನ, ಆ ಶಾಲೆಗಳಲ್ಲೇ ಕಾರ್ಯಕ್ರಮ ಏರ್ಪಡಿಸಿ ಮಕ್ಕಳಿಗೆ ಮತ್ತು ಸದಸ್ಯರಿಗೆ ಬೋಜನ ವ್ಯವಸ್ಥೆ ಮಾಡಲಾಗುತ್ತದೆ.

ರಾಜ್ಯಾದ್ಯಂತ ಪ್ರತಿಯೊಂದು ಜಿಲ್ಲೆಗಳಲ್ಲೂ ಸಂಚರಿಸಿ ನಲ್ಲಿ ಕೆಲಸದ ಕಾರ್ಮಿಕರನ್ನು ಸಂಘಟಿಸಿ ಅವರಿಗೆ ಸಂಘದ ಮಹತ್ವ ಮತ್ತು ಕಾರ್ಮಿಕ ಇಲಾಖೆಯಿಂದ ಸಿಗುವ ಸವಲತ್ತುಗಳ ಬಗ್ಗೆ ತಿಳಿಸಿ ಜಾಗೃತಿ ಮೂಡಿಸಲು ಮುಂದಾಗಿದೆ.

ರಾಜ್ಯದಲ್ಲಿ ಮೊದಲ ಬಾರಿಗೆ ನಲ್ಲಿ ಮತ್ತು ಒಳಚರಂಡಿ ಕಾರ್ಮಿಕರ ಮೊದಲ ಸಮಾವೇಶವನ್ನು ವಸ್ತು ಪ್ರದರ್ಶನ ಆವರಣದಲ್ಲಿ ಆಯೋಜಿಸಿತ್ತು. ಮಾರುಕಟ್ಟೆ ಬಂದ ಹೊಸ ಪದಾರ್ಥಗಳ ಪರಿಚಯ ಕಾರ್ಯಕ್ರಮ, ನಿಧನರಾದ ಸಂಘದ ಸದಸ್ಯರ ಕುಟುಂಬಕ್ಕೆ ಸಹಾಯ ಧನ ಸೇರಿದಂತೆ ಅನೇಕ ಸವಲತ್ತು ನೀಡಲಾಗುತ್ತಿದೆ.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಧನ ಸಹಾಯ, ಪ್ರೋತ್ಸಾಹ ಧನ ನೀಡುತ್ತಿದೆ. ಸಂಘದ ಸದಸ್ಯರ ಸಮಸ್ಯೆ ಪರಿಹಾರ, ರಕ್ತದಾನ ಶಿಬಿರ ಮುಂತಾದ ಮಾದರಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.