ಸಾರಾಂಶ
ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯಂದು, ಹಿರಿಯ ಸಾಹಿತಿ ಜಿ.ವಿ. ಸಂಗಮೇಶ್ವರ ಅವರು ಯುವಜನರು ವಿಶ್ವೇಶ್ವರಯ್ಯ ಅವರ ಬುದ್ಧಿವಂತಿಕೆ ಮತ್ತು ಶ್ರದ್ಧೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಶಿವಮೊಗ್ಗ : ಪ್ರತಿಯೊಬ್ಬರೂ ವಿಶ್ವೇಶ್ವರಯ್ಯ ಅವರಂತೆ ಬುದ್ಧಿವಂತಿಕೆ ಶ್ರದ್ಧೆಯನ್ನು ಅಳವಡಿಸಿಕೊಳ್ಳಬೇಕು. ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಮೂಲಕ ಯಶಸ್ಸು ಕಾಣಬೇಕು ಎಂದು ಹಿರಿಯ ಸಾಹಿತಿ ಜಿ.ವಿ.ಸಂಗಮೇಶ್ವರ ಕರೆ ನೀಡಿದರು.
ಇಲ್ಲಿನ ಟಿ.ಎಂ.ಎ.ಇ. ಕೈಗಾರಿಕಾ ಸಂಸ್ಥೆ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ಅವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿ, ಬ್ರಿಟಿಷ್ ಕಾಲದಲ್ಲಿ ಭಾರತದ ಕಸಬುದಾರರನ್ನು ನಾಶ ಮಾಡಿದ್ದರ ಕಾರಣ ಕಬ್ಬಿಣ ಮಾಡುವ ತಂತ್ರವನ್ನು ಅಳವಡಿಸಿಕೊಂಡರು. ಅವರು ಸಿವಿಲ್ ತಂತ್ರಜ್ಞಾನ ಪಡೆದಿದ್ದರು, ಅವರ ಕಲಿಕೆಯ ಆಸಕ್ತಿ ಎಲ್ಲವನ್ನೂ ಯಶಸ್ಸು ಮಾಡಿಕೊಂಡರು. ತಮಗೆ ವಹಿಸಿದ ಕೆಲಸಕ್ಕೆ ಬೆನ್ನು ತೋರಿಸದೆ ಸಾಧಿಸಿದರು. ನೆಪಹೇಳುವ ಇವತ್ತಿನ ಯುವಕರಿಗೆ ಅವರು ಆದರ್ಶವಾಗಿದ್ದಾರೆ ಎಂದು ವಿವರಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಸಮಿತಿ ಅಧ್ಯಕ್ಷ ಡಿ.ಮಂಜುನಾಥ ಮಾತನಾಡಿ, ಸರ್.ಎಂ.ವಿಶ್ವೇಶ್ವರಯ್ಯ ಇವತ್ತಿನ ತಾಂತ್ರಿಕ ವ್ಯವಸ್ಥೆಗೆ, ಯುವಜನರ ಬದುಕಿಗೆ ಮಾದರಿಯಾಗಿದ್ದಾರೆ. ಅವರ ನೆನಪು ಮತ್ತೆ ಮತ್ತೆ ಮಾಡಿಕೊಳ್ಳವ ಅಗತ್ಯವಿದೆ ಎಂದರು.
ಕಾಲೇಜು ಪ್ರಾಂಶುಪಾಲ ಪ್ರಸನ್ನಕುಮಾರ್ ಸ್ವಾಮಿ ಮಾತನಾಡಿ, ಶ್ರೇಷ್ಠ ವ್ಯಕ್ತಿಯ ವ್ಯಕ್ತಿತ್ವದ ಅವಲೋಕನ ಅಗತ್ಯವಾಗಿದೆ. ಶ್ರದ್ಧೆ, ಭಕ್ತಿ ಅಂದರೇನು ಎಂಬುದನ್ನು ಅರಿಯಲು ಈ ಕಾರ್ಯಕ್ರಮ ಉಪಯುಕ್ತವಾಗಿದೆ ಎಂದರು.
ಉಪನ್ಯಾಸಕರ ಎಂ.ಎ.ಪ್ರಧಾನ ಪ್ರಾರ್ಥನೆ ಹಾಡಿದರು. ಅಜ್ಜಪ್ಪಾಚಾರಿ ಸ್ವಾಗತಿಸಿದರು. ಕಾರ್ಯದರ್ಶಿ ಡಿ. ಗಣೇಶ್, ಕವಿಗಳಾದ ಇಂದಿರಾ ಪ್ರಕಾಶ್ ಉಪಸ್ಥಿತ ರಿದ್ದರು. ಮನೋಜ್ ವಂದಿಸಿದರು.