ನರಸಿಂಹರಾಜಪುರಜೂನ್ 20 ರಿಂದ 29 ರ ವರೆಗೆ ಬಿ.ಎಲ್.ಗಳು ಮನೆ, ಮನೆಗೆ ತೆರಳಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಮಾಡುವ ಹಿನ್ನೆಲೆಯಲ್ಲಿ ಜೂ. 2 ರಂದು ಕಾಂಗ್ರೆಸ್ ಪಕ್ಷ ಚಿಕ್ಕಮಗಳೂರಿನಲ್ಲಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಾಗೂ ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.
ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಹಿನ್ನೆಲೆ- ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿ ಗೋಷ್ಠಿ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಜೂನ್ 20 ರಿಂದ 29 ರ ವರೆಗೆ ಬಿ.ಎಲ್.ಗಳು ಮನೆ, ಮನೆಗೆ ತೆರಳಿ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ ಮಾಡುವ ಹಿನ್ನೆಲೆಯಲ್ಲಿ ಜೂ. 2 ರಂದು ಕಾಂಗ್ರೆಸ್ ಪಕ್ಷ ಚಿಕ್ಕಮಗಳೂರಿನಲ್ಲಿ ಹಾಸನ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಕಾಂಗ್ರೆಸ್ ಮುಖಂಡರಿಗೆ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಾಗೂ ಶಿವಮೊಗ್ಗ ಭದ್ರಾ ಕಾಡಾ ನಿಗಮದ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ತಿಳಿಸಿದರು.
ಪಟ್ಟಣದ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮತ ಹಕ್ಕು ರಕ್ಷಣೆ ಅಭಿಯಾನ ಹಮ್ಮಿಕೊಂಡಿದ್ದು ಕಾಂಗ್ರೆಸ್ ನಡೆ ನಿಮ್ಮ ಮತ ರಕ್ಷಣೆ ಕಡೆ ಎಂಬ ಘೋಷಣೆಯೊಂದಿಗೆ ಎಸ್.ಐ.ಆರ್ ಬಗ್ಗೆ ಗಂಭೀರ ನಿಲುವು ತಳೆದಿದೆ. ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಪ್ರತಿ ವಿಧಾನ ಕ್ಷೇತ್ರದಿಂದ 6- 8 ಜನ ಕಾಂಗ್ರೆಸ್ ಪಕ್ಷದ ಮುಖಂಡರಿಗೆ ತರಬೇತಿ ನೀಡಲಾಗುತ್ತದೆ. ಈ ಮುಖಂಡರು ಕಾಂಗ್ರೆಸ್ ಪಕ್ಷದ ಬೂತ್ ಮಟ್ಟದ ಏಜೆಂಟರಿಗೆ ತರಬೇತಿ ನೀಡುತ್ತಾರೆ ಎಂದರು.ಜೂ. 20- 29 ರ ವರೆಗೆ ಬಿ.ಎಲ್.ಓಗಳು ಮನೆಗಳಿಗೆ ಬಂದು ಮತದಾರರ ಬೇಟಿಯಾಗಲಿದ್ದಾರೆ. ಈ ಸಂದರ್ಭ ದಲ್ಲಿ ಬಿ.ಎಲ್.ಓ ಗಳು ಜವಾಬ್ದಾರಿಯಿಂದ ಮತ ಪಟ್ಟಿ ಪರಿಷ್ಕರಣೆ ಮಾಡಬೇಕಾಗಿದೆ. ಮತದಾರರು ಸಹ ಜಾಗ್ರತರಾಗ ಬೇಕು.ಬಿ.ಎಲ್.ಓ ಗಳು ಮನೆಗೆ ಬರುವ ಮುಂಚೆಯೇ ಓಟಿನ ಐಡಿ ಕಾರ್ಡು, ಆಧಾರ ಸೇರಿದಂತೆ 13 ದಾಖಲೆ ಸಿದ್ದಪಡಿಸಿಡಿರಬೇಕು. ಜೂ. 29 ರಿಂದ ಜುಲೈ 29 ರ ವರೆಗೆ ಮತ್ತೆ ಮನೆ,ಮನೆಗೆ ಬಿ.ಎಲ್.ಓ ಬರುತ್ತಿದ್ದು ಬಿಟ್ಟು ಹೋದವರನ್ನು ಮತ್ತೆ ಮತ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ. ಎಸ್.ಐ.ಆರ್ ನಲ್ಲಿ ಎರಡು ಫಾರಂಗಳಿದ್ದು ಒಂದು ಫಾರಂ ಬಿ.ಎಲ್.ಓಗಳು ತೆಗೆದುಕೊಂಡು ಹೋಗಲಿ ದ್ದಾರೆ. ಇನ್ನೊಂದು ಫಾರಂ ಮತದಾರರಿಗೆ ನೀಡಲಿದ್ದಾರೆ ಎಂದರು.
ಎಸ್.ಐ.ಆರ್ ಗಂಭೀರತೆ ಪಡೆದಿದೆ.ಎಸ್.ಐ.ಆರ್ ನಲ್ಲಿ ಮತದಾರರು ಪಟ್ಟಿಯಿಂದ ಹೊರಗೆ ಹೋದರೆ ಮುಂದೆ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ.ಗ್ಯಾರಂಟಿ ಸೌಲಭ್ಯ ಸಹ ಸಿಗುವುದಿಲ್ಲ. ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಎಸ್.ಐ.ಆರ್ ಬಗ್ಗೆ ತಿಳಿದು ಮತದಾರರ ಪಟ್ಟಿಯಿಂದ ಹೊರಗಡೆ ಹೋಗದಂತೆ ಜಾಗ್ರತೆ ವಹಿಸಬೇಕು. ಕೆಪಿಸಿಸಿ ಮತ ಹಕ್ಕು ರಕ್ಷಣೆ ಅಭಿಯಾನ ಹಮ್ಮಿಕೊಂಡಿದೆ. ಬಿಜೆಪಿ ಸರ್ಕಾರ ಶ್ರಮಕ ವರ್ಗದ ಮತದಾರರನ್ನು ಹೊರಗಡೆ ಇಡಲು ಎಸ್.ಐ.ಆರ್. ಜಾರಿಗೆ ತರುತ್ತಿದೆ ಎಂದು ಆರೋಪಿಸಿದರು.ಈವರೆಗೆ ದೇಶದ 13 ರಾಜ್ಯಗಳಲ್ಲಿ ಎಸ್.ಐ.ಆರ್ ನಡೆದಿದ್ದು 6.5 ಕೋಟಿ ಮತದಾರರನ್ನು ಪಟ್ಟಿಯಿಂದ ಹೊರ ಹಾಕಲಾಗಿದೆ. ಇದರಲ್ಲಿ ಶೇ 1 ರಷ್ಟು ಮೃತಪಟ್ಟವರಿದ್ದರೂ 5 ಕೋಟಿ ಜನರನ್ನು ಮತದಾರರ ಪಟ್ಟಿ ಯಿಂದ ಕೈ ಬಿಡಲಾಗಿದೆ. ಬಿಹಾರದಲ್ಲಿ 62 ಲಕ್ಷ, ಪಶ್ಛಿಮ ಬಂಗಾಳದಲ್ಲಿ 91 ಲಕ್ಷ, ಉತ್ತರ ಪ್ರದೇಶದಲ್ಲಿ 2.3 ಕೋಟಿ ಜನ ತಮ್ಮ ಮತ ನೀಡುವ ಹಕ್ಕನ್ನು ಕಳೆದುಕೊಂಡಿದ್ದಾರೆ. ಆದ್ದರಿಂದ ಮತದಾರರು ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.
ಸುದ್ದಿ ಗೋಷ್ಠಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಇ.ಸಿ.ಜೋಯಿ, ಶ್ರೀಧರ್ ಪಾನಿ, ಕೆ.ವಿ.ಸಾಜು, ಎಸ್.ಡಿ.ರಾಜೇಂದ್ರ, ಬೆನ್ನಿ, ಜುಬೇದ, ಎಚ್.ಎಂ.ಶಿವಣ್ಣ,ಬಿಳಾಲು ಮನೆ ಉಪೇಂದ್ರ ಮತ್ತಿತರರು ಇದ್ದರು.