ವಿಜ್ಞಾನಿಗಳು, ಕಲಾವಿದರು, ಸಾಹಿತಿಗಳು, ಬೇಡ್ತಿ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ನಿಶ್ಚಯಿಸಿರುವ ಬೇಡ್ತಿ ಅಘನಾಶಿನಿ ಕಣಿವೆ ಉಳಿಸಿ ಉದ್ದೇಶದ ಅಕ್ಟೋಬರ್ ೧೦ರ ಧರಣಿಗೆ ವ್ಯಾಪಕ ತಯಾರಿ ಆರಂಭವಾಗಿದೆ ಎಂದು ಮುಖ್ಯ ಸಂಚಾಲಕ ರಮೇಶ್ ಭಟ್ ತಿಳಿಸಿದ್ದಾರೆ.

ಶಿರಸಿ: ವಿಜ್ಞಾನಿಗಳು, ಕಲಾವಿದರು, ಸಾಹಿತಿಗಳು, ಬೇಡ್ತಿ ಜಾಗೃತಿ ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈಗಾಗಲೇ ನಿಶ್ಚಯಿಸಿರುವ ಬೇಡ್ತಿ ಅಘನಾಶಿನಿ ಕಣಿವೆ ಉಳಿಸಿ ಉದ್ದೇಶದ ಅಕ್ಟೋಬರ್ ೧೦ರ ಧರಣಿಗೆ ವ್ಯಾಪಕ ತಯಾರಿ ಆರಂಭವಾಗಿದೆ ಎಂದು ಮುಖ್ಯ ಸಂಚಾಲಕ ರಮೇಶ್ ಭಟ್ ತಿಳಿಸಿದ್ದಾರೆ.ಸೆ.22, 23 ರಂದು ಬೆಂಗಳೂರಲ್ಲಿ ಬೇಡ್ತಿ – ಅಘನಾಶಿನಿ ಸಮಿತಿ ಪ್ರಮುಖರು, ಕಾರ್ಯಕರ್ತರು ಈಗಾಗಲೇ ಸಭೆ ನಡೆಸಿದ್ದಾರೆ. ಮತ್ತು ಅಕ್ಟೋಬರ 10ರಂದು ಬೆಂಗಳೂರಿನ ಫ್ರೀಡಂ ಪಾರ್ಕನಲ್ಲಿ ಬೃಹತ್ ಧರಣಿ ನಡೆಸಲು ಸಿದ್ಧತೆ ನಡೆಸಲಾಗಿದೆ ಎಂದರು. ಈಗಾಗಲೇ ಸಂಪರ್ಕ ಅಭಿಯಾನ ಪ್ರಾರಂಭವಾಗಿದ್ದು, ಸಂಚಲನಾ ಸಮಿತಿ ರಚಿತವಾಗಿದೆ ಹಾಗೂ ಹಲವು ಗಣ್ಯರ ಸಂಪರ್ಕವಾಗಿದೆ ಎಂದು ಹೇಳಿದರು.ನಂತರ ಉ.ಕ ಜಿಲ್ಲೆಯಲ್ಲಿ ಎಲ್ಲ ಸಹಕಾರಿ ಸಭೆಗಳಲ್ಲಿ ಧರಣಿ ಬಗ್ಗೆ ಆಹ್ವಾನ ನೀಡಲಾಗಿದೆ ಎಂದು ಗಣಪತಿ ಬಸಲಕೊಪ್ಪ ತಿಳಿಸಿದರು.ಸ್ವರ್ಣವಲ್ಲೀ ಶ್ರೀಗಳು, ನೆಲೆಮಾವು ಶ್ರೀಗಳು ಬೆಂಗಳೂರು ಧರಣಿ ಯಶಸ್ವಿಗೊಳಿಸಲು ಕರೆ ನೀಡಿದ್ದಾರೆ ಎಂದು ಹವ್ಯಕ ಮಹಾಸಭಾದ ಪ್ರಶಾಂತ್ ಭಟ್ ತಿಳಿಸಿದರು. ಹಿರಿಯ ಪತ್ರಕರ್ತ ತಿಮ್ಮಪ್ಪ ಭಟ್ ಹಾಗೂ ರಾಜಶೇಖರ್ ಮಾತನಾಡಿ ಈ ಧರಣಿ ಸತ್ಯಾಗ್ರಹಕ್ಕೆ ಮಾಧ್ಯಮಗಳು ಅಗತ್ಯ ಬೆಂಬಲ, ಪ್ರಚಾರ ನೀಡಲಿವೆ ಎಂದು ತಿಳಿಸಿದರು. ಮೇಜರ್ ಗಣಪತಿ ಹಾಗೂ ಹಿರಿಯ ಮುಖಂಡ ಎಸ್.ಎಂ. ಹೆಗಡೆ ಬಣಗಿ ಅವರು ಯುವ ಸಮುದಾಯವನ್ನು ಸಂಪರ್ಕಿಸಿದ್ದೇವೆ ಎಂದರು. ಮಾತೃಮಂಡಳಿಯವರ ಪಾಲ್ಗೊಳ್ಳುವಿಕೆಗೆ ಗಮನ ನೀಡಿದ್ದೇವೆ ಎಂದು ಸಂಚಾಲಕರು ತಿಳಿಸಿದರು. ಸಾಮಾಜಿಕ ಜಾಲತಾಣದ ಮೂಲಕ ಹೆಚ್ಚಿನ ಪ್ರಚಾರ ಮಾಡುವುದಾಗಿ ವಿವೇಕ ಹೇಳಿದರುಈ ಸಭೆಯಲ್ಲಿ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ, ವಕೀಲ ಶಂಕರ್ ಭಟ್, ಜಿ.ಎಂ.ಹೆಗಡೆ, ನಟ ನೀರ್ನಳ್ಳಿ ರಾಮಕೃಷ್ಣ, ಸಿ.ಎ. ಎನ್.ಎಸ್.ಭಟ್ ಮುಂತಾದವರು ಭಾಗಿಯಾಗಿದ್ದರು.

ಅನಂತ ಅಶೀಸರ ಸಭೆ ಅಧ್ಯಕ್ಷತೆ ವಹಿಸಿದ್ದರು. ಇತ್ತೀಚಿಗೆ ಬೆಂಗಳೂರಿನಲ್ಲಿ ಅದಮ್ಯ ಚೇತನ ಸಂಸ್ಥೆ ವತಿಯಿಂದ ನಡೆದ ಮಾಜಿ ಕೇಂದ್ರ ಸಚಿವ ಅನಂತಕುಮಾರ ಅವರ ಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಡೆದ ಅನಂತ ನಮನ- ಹಸಿರು ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಂಡಿದ್ದು, ಬೇಡ್ತಿ ಅಘನಾಶಿನಿ ಉಳಿಸಿ ಧರಣಿಯಲ್ಲಿ ಪಾಲ್ಗೊಳ್ಳಲು ಕರೆ ನೀಡಿದ್ದಾಗಿ ಅಶೀಸರ ಹೇಳಿದರಲ್ಲದೇ, ತೇಜಸ್ವಿ ಅನಂತ ಕುಮಾರ್ ಅವರಿಗೆ ಧರಣಿಯಲ್ಲಿ ಪಾಲ್ಗೊಳ್ಳಲು ಅಹ್ವಾನ ನೀಡಿದ್ದಾಗಿ ತಿಳಿಸಿದರು.ಬೇಡ್ತಿ, ಅಘನಾಶಿನಿ ನಿಯೋಗ ವಿಧಾನಸಭೆ ಉಪಸಭಾಧ್ಯಕ್ಷ ಮಂಕಾಳು ವೈಧ್ಯರನ್ನು ಭೇಟಿ ಮಾಡಿ ಆಹ್ವಾನಿಸಿತು. ಈ ವಿಷಯದಲ್ಲಿ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದು ಮಂಕಾಳು ವ್ಯೆಧ್ಯ ತಿಳಿಸಿದರು.ಬೇಡ್ತಿ – ಅಘನಾಶಿನಿ ಕಾರ್ಯಕರ್ತರ ತಂಡವು ರಾಜ್ಯದ ಪರಿಸರ ಸಂಘ ಸಂಸ್ಥೆಗಳು ಬೆಂಗಳೂರಿನಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ ೩ ದಿನಗಳ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿತ್ತು. ಪಶ್ಚಿಮ ಘಟ್ಟದಲ್ಲಿ ಬೃಹತ್ ಯೋಜನೆಗಳು ಬೇಡ ಎಂದು ಆಗ್ರಹಿಸಿದ್ದೇವೆ ಎಂದು ಈ ಸಂಘಟನೆಯ ಪ್ರಮುಖ ಮೈಸೂರಿನ ಅವಿನಾಶ್ ಬೇಡ್ತಿ ಸಮೀತಿಗೆ ತಿಳಿಸಿದರು.